ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆಗೆ ಹೋಗಿ ಹಣ ಕಳ್ಕೊಂಡ

By Sathish Kumar KH  |  First Published Mar 20, 2023, 4:10 PM IST

ಟೆಲಿಗ್ರಾಂ ಮೂಲಕ ಪರಿಚಯವಾದ ಮಹಿಳೆ ನಂಬಿಹೋದ ಉದ್ಯಮಿಗೆ ಪಂಗನಾಮ
ಮೆಹರ್‌ ಹೆಸರಿನಲ್ಲಿ ಚಾಟಿಂಗ್‌ ಮಾಡಿ ಉದ್ಯಮಿ ಕರೆಸಿಕೊಂಡ ದುಷ್ಕರ್ಮಿಗಳು
ಹಣ ಕೊಡದಿದ್ದರೆ ಮಸೀದಿಗೆ ಕರೆದೊಯ್ದು ಮುಂಜಿ ಮಾಡುವುದಾಗಿ ಬೆದರಿಕೆ


ಬೆಂಗಳೂರು (ಮಾ.20): ಟೆಲಿಗ್ರಾಂನಲ್ಲಿ ಪರಿಚಯವಾದ ಮಹಿಳೆಯನ್ನು ನಂಬಿಕೊಂಡು ಕಾಮದಾಸೆ ತೀರಿಸಿಕೊಳ್ಳಲು ಹೋದ ಉದ್ಯಮಿಗೆ ಹಣ ಕೊಡದಿದ್ದರೆ ಮುಂಜಿ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗುವವರನ್ನು ನಂಬಿಕೊಂಡು ಹೋಗಿ ಬಹುತೇಕರು ಮೋಸ ಹೋಗಿರುವ ಪ್ರಕರಣಗಳೇ ಹೆಚ್ಚಾಗಿವೆ. ಅಂತಹ ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಉದ್ಯಮಿ ಸಿಕ್ಕಿಕೊಂಡು ಹಣವನ್ನು ಕಳೆದುಕೊಂಡಿದ್ದಾನೆ. ಮಹಿಳೆಯ ಹೆಸರಿನಲ್ಲಿ ಆರೋಪಿಗಳು ಸುಲಿಗೆ ಮಾಡಲು ಮುಂದಾಗಿದ್ದಾರೆ. ಇನ್ನು ದುಷ್ಕರ್ಮಿಗಳ ಟ್ರ್ಯಾಪ್‌ನಿಂದ ತಪ್ಪಿಸಿಕೊಂಡು ಬಂದ ಉದ್ಯಮಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿ ಹಣ ಮತ್ತು ಪ್ರಾಣ ಉಳಿಸಿಕೊಂಡಿದ್ದಾನೆ. ಮೆಹರ್ ಹೆಸರಿನ ಮಹಿಳೆ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. 

Tap to resize

Latest Videos

ಪ್ರಿಯತಮೆಯ ಮದುವೆಯಲ್ಲಿ ಕತ್ತು ಕೊಯ್ದುಕೊಂಡ ಮಾಜಿ ಪ್ರಿಯಕರ: ಮುರಿದು ಬಿದ್ದ ಮದುವೆ

ಜೆಪಿ ನಗರದ ಲೊಕೇಷನ್‌ಗೆ ತೆರಳಿ ಒದ್ದಾಡಿದ: ಟೆಲಿಗ್ರಾಂನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದ್ದ ಉದ್ಯಮಿ ಸಲುಗೆಯನ್ನು ಬೆಳೆಸಿಕೊಂಡಿದ್ದಾನೆ. ನಂತರ, ಮಹಿಳೆಯು ತನ್ನ ಗಂಡ ದುಬೈನಲ್ಲಿದ್ದಾರೆ, ಲೈಂಗಿಕ ತೃಪ್ತಿಗಾಗಿ ಸಂಗಾತಿಗಾಗಿ ಹುಡುಕಾಟದಲಿದ್ದೇನೆ ಎಂದು ಉದ್ಯಮಿಗೆ ಹೇಳಿ ಒಂದು ಲೋಕೆಷನ್‌ಗೆ ಕಳಿಸಿದ್ದಾಳೆ. ತನ್ನ ಫೋಟೋ ಮತ್ತು ಲೊಕೇಶನ್ ಕಳುಹಿಸಿ ಜೆ.ಪಿ.ನಗರಕ್ಕೆ ಉದ್ಯಮಿಯನ್ನು ಕರೆಸಿಕೊಂಡಿದ್ದಾರೆ. ಒಂದು ಮನೆಯಲ್ಲಿ ಬೆಡ್ ರೂಮಿನಲ್ಲಿ ಕುಳಿತಿದ್ದಾಗ ಉದ್ಯಮಿಗೆ ಶಾಕ್‌ ಕಾದಿತ್ತು. ಮಹಿಳೆಗಾಗಿ ಕಾಯುತ್ತಿದ್ದ ಉದ್ಯಮಿ ಬಳಿಗೆ ಬಂದಿದ್ದು ಮೂವರು ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. 

ಮಹಿಳೆ ಬದಲು ಬೆಡ್‌ ರೂಮಿಗೆ ಬಂದ ಯುವಕರು: ಬೆಡ್‌ ರೂಮಿಗೆ ಬಂದ ಯುವಕರು, 'ಯಾರು ನೀನು? ಯಾಕೆ ಬಂದಿದ್ದೀಯಾ' ಮುಖಕ್ಕೆ ಗುದ್ದಿ ಹಲ್ಲೆ ಮಾಡದ್ದಾರೆ. ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ಮಸೀದಿಗೆ ಕರೆದೊಯ್ದು ಮುಂಜಿ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ನೀನು ಈಗ 3 ಲಕ್ಷ ರೂ.ಕೊಟ್ಟರೆ ಬಿಟ್ಟು ಕಳಿಸುತ್ತೇವೆ ಇಲ್ಲವಾದರೆ ನಿನ್ನನ್ನು ಮೆಹರ್‌ಳೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಬೆದರಿಸಿ ಸುಲಿಗೆ ಮಾಡಲು ಮುಂದಾಗಿದ್ದಾರೆ. ತಕ್ಷಣವೇ ಆತನ ಮೊಬೈಲ್ ಪಡೆದು ಬ್ಯಾಂಕ್‌ ಖಾತೆಯಲ್ಲಿದ್ದ 21,500 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ.

Breaking: ಪರೀಕ್ಷೆ ವೇಳೆಯಲ್ಲಿಯೇ ಕೊಡಗಿನ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಕ್ರೆಡಿಟ್‌ ತರುವುದಾಗಿ ಹೇಳಿ ಎಸ್ಕೇಪ್‌: ಇನ್ನು ಮಧ್ಯಾಹ್ನದಿಂದ ರಾತ್ರಿ 8ರವರೆಗೂ ತಮ್ಮ ಜೊತೆಯಲ್ಲಿರಿಸಿಕೊಂಡಿದ್ದ ಆರೋಪಿಗಳು, ಕ್ರೆಡಿಟ್ ಕಾರ್ಡ್ ಇದ್ದರೆ ಕೊಡು, ಅದರಿಂದ 2.5 ಲಕ್ಷ ರೂ. ವರ್ಗಾವಣೆ ಮಾಡು ಎಂದು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ, ಅದನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅವರೊಂದಿಗೆ ದೂರುದಾರ ಹೊರಗೆ ಬಂದಿದ್ದಾನೆ. ಅಲ್ಲಿ ಅವರಿಂದ ಕೂಗಾಡಿಕೊಂಡು ಜನರನ್ನು ಸೇರಿಸಿ ತಪ್ಪಿಸಿಕೊಂಡು ತಮ್ಮ ಮನೆಗೆ ಸೇರಿಕೊಂಡಿದ್ದಾನೆ. ನಂತರ, ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

click me!