ಅಪರಾಧಿ ಜುಲೈ 28 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ 5 ವರ್ಷದ ಮಗುವನ್ನು ಅಲುವಾದಲ್ಲಿರುವ ಆಕೆಯ ಮನೆಯ ಸಮೀಪದಿಂದ ಅಪಹರಿಸಿ ಅದೇ ದಿನ ಸಂಜೆ 5:30 ಕ್ಕೆ ಮೊದಲು ಕೊಲೆ ಮಾಡಿದ್ದ.
ಕೊಚ್ಚಿ (ನವೆಂಬರ್ 14, 2023): ಕೇರಳದ ಅಲುವಾದಲ್ಲಿ 5 ವರ್ಷದ ಮಗುವಿನ ಮೇಲೆ ಅಮಾನುಷವಾಗಿ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈದ ಅಸಫಕ್ ಆಲಂ ಎಂಬಾತನಿಗೆ ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ) ಮಂಗಳವಾರ ಮರಣದಂಡನೆ ವಿಧಿಸಿದೆ. ಅಲ್ಲದೆ, ಪೋಕ್ಸೋ ಕಾಯಿದೆ ಮತ್ತು ಐಪಿಸಿಯ ಐದು ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಿಯ ಜೀವನದ ಉಳಿದ ಅವಧಿಗೆ ಐದು ಜೀವಾವಧಿ ಶಿಕ್ಷೆಯನ್ನು ಸಹ ನೀಡಲಾಗಿದೆ. ಅಲ್ಲದೆ, ಆರೋಪಿಗೆ ಒಟ್ಟು 7.20 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಅಸಫಕ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಅಪರಾಧಿ ಶಿಕ್ಷೆಯನ್ನು ಆಲಿಸಿದರು. ಶಿಕ್ಷೆಯನ್ನು ಭಾಷಾಂತರಕಾರರು ಅಪರಾಧಿಗೆ ವಿವರಿಸಿದರು. ಈ ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿ ವಕೀಲ ಜಿ ಮೋಹನರಾಜ್ ಕಾರ್ಯನಿರ್ವಹಿಸಿದ್ದರು.
ಇದನ್ನು ಓದಿ: ಅಪರಿಚಿತ ಬಂದೂಕುಧಾರಿಗಳ ಮುಂದುವರಿದ ಸಂಹಾರ: ಜೈಷ್ ಉಗ್ರ ಮಸೂದ್ ಅಜರ್ ಆಪ್ತ ಸ್ನೇಹಿತನ ಹತ್ಯೆ
ಅಪರಾಧಿ ಜುಲೈ 28 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ 5 ವರ್ಷದ ಮಗುವನ್ನು ಅಲುವಾದಲ್ಲಿರುವ ಆಕೆಯ ಮನೆಯ ಸಮೀಪದಿಂದ ಅಪಹರಿಸಿ ಅದೇ ದಿನ ಸಂಜೆ 5:30 ಕ್ಕೆ ಮೊದಲು ಕೊಲೆ ಮಾಡಿದ್ದ. ಈ ಸಂಬಂಧ ನ್ಯಾಯಾಧೀಶ ಕೆ. ಸೋಮನ್ ಅವರು ನವೆಂಬರ್ 4 ರಂದು ಅಪರಾಧಿ ಎಂದು ತೀರ್ಪು ಪ್ರಕಟಿಸಿದರು. ಅಪರಾಧ ನಡೆದು 100 ನೇ ದಿನದಲ್ಲಿ ಅಸಫಕ್ ಆಲಂ ಅಪರಾಧಿ ಎಂದು ಘೋಷಿಸಿದ್ದರು.
ನವೆಂಬರ್ 9 ರಂದು ನ್ಯಾಯಾಲಯವು ಶಿಕ್ಷೆಯ ಕುರಿತು ವಿಚಾರಣೆ ನಡೆಸಿತ್ತು. ಆ ವೇಳೆ, ಈ ಪ್ರಕರಣವನ್ನು ಅಪರೂಪದ ಪ್ರಕರಣ ಎಂದು ಪ್ರಾಸಿಕ್ಯೂಷನ್ ಕರೆದಿದ್ದು, ಅಪರಾಧಿಗೆ ಗರಿಷ್ಠ ಶಿಕ್ಷೆಯನ್ನು ಕೋರಿತ್ತು. ಆದರೆ, 29ರ ಹರೆಯದ ಆರೋಪಿಯ ಚಿಕ್ಕ ವಯಸ್ಸನ್ನು ಪರಿಗಣಿಸಿ ವಿನಾಯತಿ ನೀಡುವಂತೆ ಪ್ರತಿವಾದಿ ವಕೀಲರು ಕೋರಿದ್ದರು.
ಇದನ್ನು ಓದಿ: ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್ ರೇಪ್: ವಿಡಿಯೋ ವೈರಲ್
ಕುತೂಹಲಕಾರಿಯಾಗಿ, ಮಕ್ಕಳ ದಿನಾಚರಣೆಯಾದ ನವೆಂಬರ್ 14 ರಂದು ನ್ಯಾಯಾಲಯವು ಅಸಫಕ್ ಆಲಂಗೆ ಮರಣದಂಡನೆ ವಿಧಿಸಿದೆ.
ಇದನ್ನೂ ಓದಿ: ವಾಟ್ಸಾಪ್, ಎಸ್‌ಎಂಎಸ್‌ನಲ್ಲಿ ಬರುವ ಈ 7 ಸಂದೇಶಗಳ ಲಿಂಕನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡ್ಬೇಡಿ!