
ಒಂದಲ್ಲ, ಎರಡಲ್ಲ.. ಈಕೆ ಮದ್ವೆಯಾಗಿದ್ದು 12 ಮಂದಿಯನ್ನು. ಹಾಗಂತ ವಯಸ್ಸೇನೂ ಹೆಚ್ಚಲ್ಲ. ಕೇವಲ 21 ವರ್ಷವಷ್ಟೇ. ಒಂದೊಂದು ಕಡೆ ಒಂದೊಂದು ಹೆಸರು ಇಟ್ಟುಕೊಂಡು ಒಂದು ಡಜನ್ ಪುರುಷರನ್ನು ಮದ್ವೆಯಾಗಿರುವ ಈ ಖತರ್ನಾಕ್ ಲೇಡಿ ಡಾಕು ದುಲ್ಹನ್ (ಡಕಾಯಿತಿಯ ಮದುಮಗಳು) ಎಂದೇ ಫೇಮಸ್ಸು. ಗುಜರಾತ್‌ನಲ್ಲಿ ಕಾಜಲ್ ಎಂದು ಹೆಸರು ಇಟ್ಟುಕೊಂಡಿರೋ ಈಕೆ ಹರಿಯಾಣದಲ್ಲಿ ಸೀಮಾ ಆಗಿದ್ದಾಳೆ, ಬಿಹಾರದಲ್ಲಿ ನೇಹಾ ಆಗಿದ್ದರೆ ಉತ್ತರ ಪ್ರದೇಶದಲ್ಲಿ ಸ್ವೀಟಿ ಎಂಬ ಹೆಸರು ಇಟ್ಟುಕೊಂಡು 12 ಮಂದಿಯನ್ನು ಸದ್ಯ ಬುಟ್ಟಿಗೆ ಹಾಕಿಕೊಂಡಿದ್ದಳು. ಇನ್ನು ಎಷ್ಟು ಪುರುಷರು ಇವಳ ಮೋಸದ ಬಲೆಗೆ ಬೀಳ್ತಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ 12 ಮಂದಿಯನ್ನು ಹೇಗೆ ಮ್ಯಾನೇಜ್ ಮಾಡುತ್ತಿದ್ದಳು ಎನ್ನುವುದು ಕೂಡ ಇದೇ ವೇಳೆ ಗುಟ್ಟಾಗಿಯೇ ಉಳಿದಿದೆ!
ಇಷ್ಟೆಲ್ಲಾ ಹಿಂದೂ ಹೆಸರು ಇಟ್ಟುಕೊಂಡಿರೋ ಈಕೆಯ ನಿಜವಾದ ಹೆಸರು ಗುಲ್ಮಾನ ರಿಯಾಜ್ ಖಾನ್! 12 ಮಂದಿಯನ್ನು ಮದುವೆಯಾಗಿ ಎಲ್ಲರನ್ನೂ ಮೋಸದ ಜಾಲಕ್ಕೆ ಸಿಲುಕಿಸಿರುವ ಈಕೆಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ! ಈಕೆಯ ಅಸಲಿ ಗಂಡನ ಹೆಸರು ಚೌನ್‌ಪುರದ ದರ್ಜಿ ರಿಯಾಜ್ ಖಾನ್. ಪತಿ ಸೇರಿದಂತೆ ಒಂದಿಷ್ಟು ಮಂದಿಯ ಗ್ಯಾಂಗ್ ಸೇರಿ, ಈಕೆಯನ್ನು ಪುರುಷರ ಬಲೆಗೆ ಬೀಳುವಂತೆ ಮಾಡುತ್ತಿತ್ತು. ಶ್ರೀಮಂತರನ್ನೇ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು ಈಕೆ, ಮದುವೆಯಾಗುವುದಾಗಿ ಅವರನ್ನು ಮೋಹದ ಪಾಶಕ್ಕೆ ಬೀಳಿಸಿಕೊಳ್ಳುತ್ತಿದ್ದಳು. ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಹಣದ ಬೇಡಿಕೆಯನ್ನೂ ಇಡುತ್ತಿದ್ದಳು. ಮದುವೆಯಾದರೆ ಸಾಕು ಎನ್ನುತ್ತಿದ್ದ ಪುರುಷರು ಆಕೆ ಕೇಳಿದ್ದಷ್ಟು ಹಣ ಕೊಡುತ್ತಿದ್ದರು.
ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್
ಮದುವೆಗೆ ಸ್ಥಳವನ್ನೂ ಗೊತ್ತು ಮಾಡಲಾಗುತ್ತಿತ್ತು. ಮದುವೆಯ ದಿನ ಚಿನ್ನಾಭರಣ ಮತ್ತು ಒಂದಿಷ್ಟು ಹಣವನ್ನು ತರುವುದು ಸಹಜ. ಅದರಂತೆ ಮದುವೆಯ ಖುಷಿಯಲ್ಲಿ ಪುರುಷರು ಮದುವೆ ಮನೆಗೆ ಬಂದರೆ, ಮದುಮಗಳು ಅಪಹರಣ ಆಗುತ್ತಿದ್ದಳು! ಆ ಸಮಯದಲ್ಲಿ, ಇದ್ದ ಬಿದ್ದ ಚಿನ್ನಾಭರಣ, ದುಡ್ಡು ದೋಚಿಕೊಂಡು ಎಸ್ಕೇಪ್ ಆಗುತ್ತಿತ್ತು ಗ್ಯಾಂಗ್. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಈ ನಾಟಕವಾಡುತ್ತಿದ್ದರಿಂದ ಪೊಲೀಸರಿಗೆ ದೂರು ದಾಖಲಾದರೂ ಅವರನ್ನು ಹುಡುಕೋದು ಕಷ್ಟವೇ ಆಗಿತ್ತು. ಎಷ್ಟೆಂದರೂ ಕಳ್ಳರು ಸಿಕ್ಕಿ ಬೀಳಲೇಬೇಕಲ್ವಾ? ಇಲ್ಲೂ ಹಾಗೆಯೇ ಆಯಿತು. ಹರಿಯಾಣದ ರೋಕ್ಟಕ್ ನಿವಾಸಿ ಸೋನು ಅವರನ್ನು ವಂಚಿಸಿದ ಗ್ಯಾಂಗ್ ಮದುವೆಗೆ 80 ಸಾವಿರ ರೂಪಾಯಿ ವಸೂಲಿ ಮಾಡಿತ್ತು. ಮದುವೆಯ ದಿನ ಮದುಮಗಳನ್ನು ಮಾಮೂಲಿನಂತೆ ಕಿಡ್ನಾಪ್ ಮಾಡಲಾಗಿತ್ತು.
ಕೂಡಲೇ ಮದುಮಗ ಸೋನು ಅವರು ಪೊಲೀಸರಿಗೆ ಮಾಹಿತಿ ನೀಡಿದರು. ತಮ್ಮ ಭಾವಿ ಪತ್ನಿ ಅಪಹರಣ ಆಗಿದ್ದಾಳೆ, ಯಾರೋ ದುಡ್ಡು, ಆಭರಣ ಕದ್ದೊಯ್ದಿದ್ದಾರೆ ಎಂದು ದೂರು ದಾಖಲು ಮಾಡಿದ ತಕ್ಷಣ ಉತ್ತರ ಪ್ರದೇಶದ ಪೊಲೀಸರು ಕಾರ್ಯ ಪ್ರವೃತ್ತರಾಗಿ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿ ಎಚ್ಚರಿಕೆ ನೀಡಿದರು. ಬಳಿಕ ಸಂದೇಹ ಬಮದ ಒಬ್ಬನನ್ನು ಅರೆಸ್ಟ್ ಮಾಡಲಾಯಿತು. ಪೊಲೀಸರು ತಮ್ಮದೇ ಆದ ಭಾಷೆಯಲ್ಲಿ ವಿಚಾರಿಸಿದಾಗ ಆತ ವಿಷಯ ಬಾಯಿ ಬಿಟ್ಟ. ಲೇಡಿ ಸೇರಿದಂತೆ ಎಲ್ಲರೂ ಅರೆಸ್ಟ್ ಆದರು. ಬಂಧಿತ ಮಹಿಳೆ ನಕಲಿ ಗುರುತಿನ ದಾಖಲೆಗಳನ್ನು ನೀಡಿ ಬೇರೆ ಬೇರೆ ಹಿಂದೂ ಹೆಸರುಗಳಲ್ಲಿ ಈ ಕೆಲಸ ಮಾಡುತ್ತಿರುವುದು ತಿಳಿದು ಬಂತು.
ಸದ್ಯ ಬಂಧಿತ ಆರೋಪಿಗಳಿಂದ ನಗದು, ಮೋಟಾರ್ ಸೈಕಲ್, ಚಿನ್ನಾಭರಣ, 11 ಮೊಬೈಲ್ ಫೋನ್‌ಗಳು ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಎಂಟು ಜನರ ಗ್ಯಾಂಗ್ ಆಗಿದೆ. ಹರಿಯಾಣದ ಜಿಂದ್‌ನ ಮೋಹನ್‌ಲಾಲ್ (34), ಚೌನ್‌ಪುರದ ರತನ್ ಕುಮಾರ್ ಸರೋಜ್ (32), ಚೌನ್‌ಪುರದ ರಂಜನ್ ಅಲಿಯಾಸ್ ಆಶು ಗೌತಮ್ (22), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಅಂಬೇಡ್ಕರ್ ನಗರದ ಸನ್ನೋ ಅಲಿಯಾಸ್ ಸುನೀತಾ (36), ಅಂಬೇಡ್ಕರ್ ನಗರದ ಪೂನಮ್ (33), ಚೌನ್‌ಪುರದ ಮಂಜು ಮಾಲಿ (29) ಮತ್ತು ಚೌನ್‌ಪುರದ ರುಖ್ಯರ್ (21) ಬಂಧಿತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ