Triple Talaq : ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ!

By Contributor AsianetFirst Published Feb 17, 2022, 8:56 PM IST
Highlights

* ಮಗಳಿಗೆ ಹಾಲು ಕೊಟ್ಟು ನಂತರ ತಂದುಕೊಟ್ಟಿದ್ದಕ್ಕೆ ತಲಾಖೆ
* ಮನೆಯಲ್ಲಿ ಮಹಿಳೆಗೆ ಪ್ರತಿದಿನ ಕಿರುಕುಳ
* ಸುಪ್ರೀಂ ಕೋರ್ಟ್ ಆದೇಶ ಇವರಿಗೆ ಗೊತ್ತೆ ಇಲ್ಲವಾ? 

ಗಾಂಧಿನಗರ(ಫೆ. 17)  ತ್ರಿವಳಿ ತಲಾಖ್(triple talaq) ಕಾನೂನು ಬಾಹಿರ  ಎಂದು  ಸುಪ್ರೀಂ ಕೋರ್ಟ್(Supreme Court) ಸ್ಪಷ್ಟವಾಗಿ ಹೇಳಿದೆ.  ಆದರೆ ಇಲ್ಲೊಬ್ಬ ಆಸಾಮಿ ಪತ್ನಿ ಹಾಲು ತಂದು ಕೊಡದ್ದಕ್ಕೆ ತಲಾಖ್ ಕೊಟ್ಟಿದ್ದಾನೆ.   ಹಾಲು ನೀಡಲು ತಡ ಮಾಡಿದ್ದಕ್ಕೆ ಪತಿರಾಯ ತಕ್ಷಣ  ತ್ರಿವಳಿ ತಲಾಖ್ ನೀಡಿದ್ದು  ನೊಂದ ಮಹಿಳೆ ದೂರು ನೀಡಿದ್ದಾರೆ. ಮಹಿಳೆ ತನ್ನ ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಅತ್ತೆ, ಮಾವ ಹಾಗೂ ಪತಿ ತನ್ನ ಪೋಷಕರಿಂದ 1 ಲಕ್ಷ ರೂ. ಪಡೆಯುವಂತೆ ಕೇಳಿದ್ದರು. ಇದಕ್ಕೆ ನಾನು ನಿರಾಕರಿಸಿದ್ದರಿಂದ ಜಗಳ ಪ್ರಾರಂಭವಾಗಿದೆ.  ಯಾವಾಗ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಕಿರುಕುಳ ಆರಂಭವಾಗಿದೆ.

ಒಂದು ಕಡೆ ಮಗಳು ತನ್ನ 5 ವರ್ಷದ ಮಗಳು ಹಾಲು ಹಾಗೂ ತಿಂಡಿ ಕೇಳಿದ್ದಳು. ಅದೇ ಸಮಯದಲ್ಲಿ ಪತಿಯೂ ನನಗೆ ಹಾಲು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮೊದಲು ಮಗುವಿಗೆ ಹಾಲು ನೀಡಿ ಬಳಿಕ ಪತಿಗೆ ಹಾಲನ್ನು ನೀಡಿದ್ದಾರೆ. ಇದೇ  ಕಾರಣ ಇಟ್ಟುಕೊಂಡು ಪತ್ನಿಗೆ ತಲಾಖ್ ನೀಡಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ತಲಾಖ್ ಎಂದ ಬೆಂಗಳೂರಿನ ಎಚ್‌ ಆರ್

ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದಕ್ಕೆ ತಲಾಖ್:   ಅನಾರೋಗ್ಯಕ್ಕೀಡಾದ ಪತ್ನಿಯೊಬ್ಬಳು ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದಕ್ಕೆ  ಪತಿ ಆಕೆಗೆ ತ್ರಿಬಲ್‌ ತಲಾಖ್‌ ನೀಡಿದ್ದ.  ಗುಜರಾತ್‌(Gujarat)ನ ಅಹಮದಾಬ್‌(Ahmedabad) ನಿಂದ ಘಟನೆ ವರದಿಯಾಗಿತ್ತು.

ಅಹ್ಮದಾಬಾದ್‌ನ ಜುಹಾಪುರ(Juhapura) ಸಮೀಪದ ವ್ಯಕ್ತಿಯೊಂದಿಗೆ ನನ್ನ ಮದುವೆಯಾಗಿತ್ತು. ಇದು ಆಕೆಗೆ ಎರಡನೇಯ ವಿವಾಹವಾಗಿದ್ದು, ಮದುವೆಯಾದ ಐದು ತಿಂಗಳ ವರೆಗೆ ಆಕೆಯ ಗಂಡ ಹಾಗೂ ಮನೆಯವರು ಆಕೆಯೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ನಂತರದ ದಿನಗಳಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಕ್ಷುಲ್ಲಕ ಕಾರಣಕ್ಕೆ  ಜಗಳ ಆರಂಭವಾಗಿದೆ. ಅಂತಿಮವಾಗಿ ತಲಾಖ್ ಗೆ ಬಂದು ನಿಂತಿದೆ.

ಕಳೆದ ವರ್ಷ ನವಂಬರ್‌ 29ರಂದು ಮಹಿಳೆಗೆ ತೀವ್ರವಾದ ಜ್ವರವಿದ್ದು, ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಹೀಗಾಗಿ ಆಕೆ ತನ್ನ ಗಂಡನ ಬಳಿ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದ್ದಾನೆ. ಈ ವೇಳೆ ಗಂಡ ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಕೆಗೆ ಆಕೆಯ ತಂದೆ ತಾಯಿ ಬಳಿ ಹಣ ಕೇಳುವಂತೆ ಹೇಳಿದ್ದಾನೆ. ಆದರೆ ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಗಂಡ ಆಕೆಗೆ ಸರಿಯಾಗಿ ಥಳಿಸಿದ್ದು, ನಂತರ ಮೂರು ಬಾರಿ ಜೋರಾಗಿ ತಲಾಖ್‌ ತಲಾಖ್‌ ತಲಾಖ್‌ ಎಂದು ಕೂಗಿ ಒತ್ತಾಯ ಪೂರ್ವಕವಾಗಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದು ನೊಂದ ಮಹಿಳೆ ದೂರು ನೀಡಿದ್ದಳು .

ತಲಾಖ್ ಕೊಟ್ಟು ಪತ್ನಿಯ ಖಾಸಗಿ ವಿಡಿಯೋವನ್ನೇ ಹರಿಬಿಟ್ಟ ಪಾಪಿ ಪತಿ!: ಪತ್ನಿಗೆ ತ್ರಿವಳಿ ತಲಾಖ್ ಹೆಸರಿನಲ್ಲಿ ವಿಚ್ಛೇದನ ನೀಡಿದ್ದ. ಇಷ್ಟಕ್ಕೆ ಸುಮ್ಮನಿರದ ಪಾಪಿ ಪತ್ನಿಯ ಖಾಸಗಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ತಾನೇ ಹರಿಬಿಟ್ಟಿದ್ದ.  ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್ಪುರ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ.   ಪೊಲೀಸ್ ಅಧಿಕಾರಿ  ದೀಪಕ್ ಚತುರ್ವೇದಿಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ 18 ತಿಂಗಳ ಪುತ್ರನಿದ್ದ.

ಮೂರು ತಿಂಗಳ ಹಿಂದೆ ಆರೋಪಿಯು ತನ್ನ ಪತ್ನಿಗೆ ತ್ರಿವಳಿ ತಲಾಖ್  ನೀಡಿದ್ದ. ಇದಾದ ಮೇಲೆ ಮಹಿಳೆ ತನ್ನ ಹೆತ್ತವರೊಂದಿಗೆ  ವಾಸವಿದ್ದಳು. ಮಗು ಸಹ ಆಕೆಯೊಂದಿಗೆ ಕಿಶನ್ಪುರ್ ಗ್ರಾಮದಲ್ಲಿತ್ತು.

 

click me!