Chits Fund Fraud: ದುಬಾರಿ ಬಡ್ಡಿಯ ಆಸೆ ತೋರಿಸಿ 500 ಜನರಿಗೆ 40 ಕೋಟಿ ವಂಚನೆ

By Kannadaprabha NewsFirst Published Feb 17, 2022, 5:48 AM IST
Highlights

*  ಚಿಟ್ಸ್‌ ಫಂಡ್‌ ಕಂಪನಿ ನಿರ್ದೇಶಕನ ಬಂಧನ
*  ಆಧಿಕ ಬಡ್ಡಿ ಆಮಿಷವೊಡ್ಡಿ ಜನರಿಗೆ ಟೋಪಿ ಹಾಕಿದ ಆರೋಪಿ 
*  ಈತನ ಮಾತು ನಂಬಿ ಹಣ ಹೂಡಿದ್ದ 500ಕ್ಕೂ ಹೆಚ್ಚಿನ ಜನರು
 

ಬೆಂಗಳೂರು(ಫೆ.17):  ದುಬಾರಿ ಬಡ್ಡಿ(Interest) ಆಸೆ ತೋರಿಸಿ ನೂರಾರು ಜನರಿಂದ 40 ಕೋಟಿ ಹಣ ವಸೂಲಿ ಮಾಡಿ ವಂಚಿಸಿದ(Fraud) ಆರೋಪ ಮೇರೆಗೆ ಖಾಸಗಿ ಪರವಾನಿಗೆ ಹೊಂದಿದ ಚಿಟ್ಸ್‌ ಫಂಡ್‌ ಕಂಪನಿ(Chits Fund Company) ನಿರ್ದೇಶಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಬನಶಂಕರಿ ಎರಡನೇ ಹಂತದ ಪಂಚಮುಖಿ ಚಿಟ್‌ ಫಂಡ್ಸ್‌ ಸಂಸ್ಥೆ ನಿರ್ದೇಶಕ ಅನಂತರಾಮ್‌ ಬಂಧಿತನಾಗಿದ್ದು(Arrest), ಈ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಕಂಪನಿಯ ಪಾಲುದಾರ ಶಂಕರ್‌ ಹಾಗೂ ವರುಣ್‌ ರಾಜ್‌ ಪತ್ತೆಗೆ ತನಿಖೆ(Investigation) ನಡೆದಿದೆ. ಫೈನಾನ್ಸ್‌ ಕಂಪನಿ ಹೆಸರಿನಲ್ಲಿ ಜನರಿಗೆ ಆಧಿಕ ಬಡ್ಡಿ ಆಮಿಷವೊಡ್ಡಿ ಅನಂತ್‌ ಟೋಪಿ ಹಾಕಿದ್ದು, ಇತ್ತೀಚೆಗೆ ಪದ್ಮನಾಭನಗರದ ಸಿವಿಲ್‌ ಎಂಜನಿಯರ್‌ ದರ್ಶನ್‌ ವೆಂಕಟೇಶ್‌ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

Love Sex Aur Dhokha: ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟ ಸಹೋದ್ಯೋಗಿ: ಕಂಗಾಲಾದ ವಿಚ್ಛೇದಿತ ಮಹಿಳೆ

2009ರಲ್ಲಿ ಬನಶಂಕರಿ 2ನೇ ಹಂತದಲ್ಲಿ ತನ್ನ ಸೋದರ ಶಂಕರ್‌ ಜತೆ ಸೇರಿ ಪಂಚಮುಖಿ ಚಿಟ್‌ ಫಂಡ್ಸ್‌ ಹೆಸರಿನ ಕಂಪನಿಯನ್ನು ಅನಂತರಾಮ್‌ ಶುರು ಮಾಡಿದ್ದ. ಕೋಣನಕುಂಟೆಯಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ಅನಂತರಾಮ್‌, ಚೀಟಿ ಮಾತ್ರವಲ್ಲದೆ ಫೈನಾನ್ಸ್‌(Finance) ಹಾಗೂ ವಾಹನಗಳಿಗೆ ವಿಮಾ ಮಾಡಿಸುವ ವ್ಯವಹಾರ ಸಹ ನಡೆಸುತ್ತಿದ್ದ. ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.24 ರಷ್ಟು ಬಡ್ಡಿ ಕೊಡುವುದಾಗಿ ಆತ ಹೇಳಿದ್ದ. ಈ ಮಾತು ನಂಬಿದ ಸುಮಾರು 500ಕ್ಕೂ ಹೆಚ್ಚಿನ ಜನರು ಹಣ(Money) ಹೂಡಿದ್ದರು.

ಆರಂಭದಲ್ಲಿ ಜನರಿಗೆ ದುಬಾರಿ ಬಡ್ಡಿ ನೀಡಿ ವಿಶ್ವಾಸಗಳಿಸಿದ ಆರೋಪಿ, ಕಳೆದ ಒಂದೂವರೆ ತಿಂಗಳಿಂದ ಏನೇನೂ ಕಾರಣ ನೀಡಿ ಬಡ್ಡಿ ವಿತರಣೆ ಸ್ಥಗಿತಗೊಳಿಸಿದ್ದಾರೆ. ಕೊನೆಗೆ ಫೆ.3 ರಂದು ಕಂಪನಿ ಕಚೇರಿ ಬಾಗಿಲು ಬಂದ್‌ ಮಾಡಿದ್ದಾರೆ. ಈ ಕಂಪನಿಯಲ್ಲಿ ದೂರುದಾರ ದರ್ಶನ್‌ ಅವರು, ತಮ್ಮ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಸೇರಿದಂತೆ ಕುಟುಂಬದ ಐವರು ಸದಸ್ಯರ ಹೆಸರಿನಲ್ಲಿ 57 ಲಕ್ಷ ತೊಡಗಿಸಿದ್ದರು. ತಮಗೆ ಪೂರ್ವ ಒಪ್ಪದದಂತೆ ಹಣ ವಿತರಿಸದೆ ವಂಚಿಸಿದ್ದಾರೆ ಎಂದು ದರ್ಶನ್‌ ಆರೋಪಿಸಿದ್ದಾರೆ. ಇದೇ ರೀತಿ 170 ಮಂದಿ ಸಂತ್ರಸ್ತರು ದೂರು ನೀಡಿದ್ದು, ಸುಮಾರು 500ಕ್ಕೂ ಹೆಚ್ಚಿನ ಜನರಿಗೆ ಅಂದಾಜು 40 ಕೋಟಿಗೂ ಅಧಿಕ ಹಣ ಮೋಸ ಹೋಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಲಿಟರಿಯಲ್ಲಿ ಕೆಲಸದಾಸೆ ತೋರಿಸಿ ವಂಚನೆ: ನಕಲಿ ಸೇನಾಧಿಕಾರಿ ಬಂಧನ

ಬೆಂಗಳೂರು: ಮಿಲಿಟರಿ ಅಧಿಕಾರಿ(Military Officer) ಎಂದು ನಂಬಿಸಿ ಸೈನ್ಯದ ಉದ್ಯೋಗಕಾಂಕ್ಷಿಗಳನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಮಿಲಿಟರಿ ಗುಪ್ತಚರ ವಿಭಾಗ ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದ ಘಟನೆ ಫೆ.12 ರಂದು ನಡೆದಿತ್ತು. 

Bengaluru Crime: ‘ಅದೃಷ್ಟದ ಚೊಂಬು’ ತೋರಿಸಿ ಕೋಟಿಗಟ್ಟಲೇ ಟೋಪಿ..!

ಭಾರತೀಯ ಸೇನೆಯಲ್ಲಿ(Indian Army) ತಾನು ಲೆಫ್ಟಿನೆಂಟ್‌ ಜನರಲ್‌ ಆಗಿರುವುದಾಗಿ ನೆತೈಚಾಂದ್‌ ಜನಾ ಎಂಬಾತ ಸೇನೆಯಲ್ಲಿ ಕೆಲಸಕ್ಕೆ ಸೇರ ಬಯಸುತ್ತಿದ್ದ ಅಭ್ಯರ್ಥಿಗಳಿಗೆ(Candidates) ಉದ್ಯೋಗ(Job) ನೀಡುವುದಾಗಿ ವಂಚಿಸುತ್ತಿದ್ದ ಮತ್ತು ನಕಲಿ ನೇಮಕಾತಿ(Fake Recruitment) ನಡೆಸುತ್ತಿದ್ದ ಎಂದು ವಿವೇಕ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.ಭಾರತೀಯ ಸೇನೆಯಲ್ಲಿ ಸಿಪಾಯಿ ಆಗಿದ್ದ ನೆತೈಚಾಂದ್‌ ಜನಾ 2009ರಲ್ಲಿ ಸೇನೆ ಬಿ

ಟ್ಟಿದ್ದ. ಉದ್ಯೋಗಕಾಂಕ್ಷಿಗಳನ್ನು ಸೆಳೆಯಲು ಅನೇಕ ನಕಲಿ ಗುರುತಿನ ದಾಖಲೆಗಳನ್ನು ಸೃಷ್ಟಿಸಿದ್ದ. ಕಳೆದ ಒಂದು ವರ್ಷದಿಂದ ಆತನ ಮೇಲೆ ಮಿಲಿಟರಿ ಗುಪ್ತಚರ ವಿಭಾಗ ಕಣ್ಣಿಟ್ಟಿತು. ಬಂಧಿತನಿಂದ ಸೇನೆಯ ನಕಲಿ ಗುರುತಿನ ಚೀಟಿ, ಸೇನಾ ಸಮವಸ್ತ್ರದಲ್ಲಿನ ಆತನ ಭಾವಚಿತ್ರ ಮತ್ತು ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
 

click me!