Kidney Fraud: ಆನ್‌ಲೈನ್‌ನಲ್ಲಿ ಕಿಡ್ನಿ ಮಾರಾಟಕ್ಕೆ ಹೋಗಿ 86 ಲಕ್ಷ ಕಳೆದುಕೊಂಡ

Kannadaprabha News   | Asianet News
Published : Feb 17, 2022, 04:50 AM IST
Kidney Fraud: ಆನ್‌ಲೈನ್‌ನಲ್ಲಿ ಕಿಡ್ನಿ ಮಾರಾಟಕ್ಕೆ ಹೋಗಿ 86 ಲಕ್ಷ ಕಳೆದುಕೊಂಡ

ಸಾರಾಂಶ

*  ಗೂಗಲ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯಿಂದ ಟೋಪಿ *  ಆರ್ಥಿಕ ಸಮಸ್ಯೆಗೆ ಸಿಲುಕಿದ್ದ ನಗರದ ವ್ಯಕ್ತಿ *  ಕಿಡ್ನಿ ಮಾರಿದರೆ ಹಣ ಸಿಗುತ್ತದೆ ಎಂದು ನಂಬಿಸಿದ್ದ  

ಬೆಂಗಳೂರು(ಫೆ.17):  ಆನ್‌ಲೈನ್‌ನಲ್ಲಿ ಕಿಡ್ನಿ(Kidney) ಮಾರಾಟ ಮಾಡಿದರೆ ಕೋಟಿ ಹಣ ಸಿಗುತ್ತದೆ ಎಂಬ ಸುದ್ದಿ ನಂಬಿದ ವ್ಯಕ್ತಿಯೊಬ್ಬ, ಕೊನೆಗೆ ಕಿಡ್ನಿ ಮಾರಲು ಹೋಗಿ 86 ಲಕ್ಷ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜಾಜಿ ನಗರದ 38 ವರ್ಷದ ವ್ಯಕ್ತಿ ಹಣ ಕಳೆದುಕೊಂಡಿದ್ದು, ಕಿಡ್ನಿ ಖರೀದಿಸುವ ನೆಪದಲ್ಲಿ ಅಭಿಜಿತ್‌ ಎಂಬಾತ ಟೋಪಿ ಹಾಕಿದ್ದಾನೆ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Case) ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣಕಾಸು ಸಮಸ್ಯೆಗೆ ತುತ್ತಾಗಿದ್ದ ಸಂತ್ರಸ್ತರಿಗೆ ಗೂಗಲ್‌ನಲ್ಲಿ(Google) ಅಭಿಜಿತ್‌ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಚಾಟಿಂಗ್‌ ನಡೆದಿದೆ. ಈ ಸ್ನೇಹದಲ್ಲಿ ಸಂತ್ರಸ್ತರು, ತಮ್ಮ ಹಣಕಾಸು ಪರಿಸ್ಥಿತಿ ಬಗ್ಗೆ ಅಲವತ್ತುಕೊಂಡಿದ್ದಾರೆ. ಆಗ ಆರೋಪಿ, ‘ನೀವು ಕಿಡ್ನಿ ಮಾರಾಟ ಮಾಡಿದರೆ ಕೈ ತುಂಬಾ ಹಣ(Money) ಸಿಗಲಿದೆ. ನಿಮ್ಮ ಆರ್ಥಿಕ ಸಂಕಷ್ಟವು ನಿವಾರಣೆಯಾಗಲಿದೆ’ ಎಂದಿದ್ದಾನೆ. ಈ ಮಾತಿಗೆ ದೂರುದಾರರು ಒಪ್ಪಿಕೊಂಡಿದ್ದಾರೆ.

Matrimony Fraud: ಒಂದಲ್ಲ ಎರಡಲ್ಲ, 14 ಮಹಿಳೆಯರ ವಿವಾಹವಾಗಿ ವಂಚನೆ

ಬಳಿಕ ‘ನನಗೆ ಪರಿಚಯವಿರುವ ವೈದ್ಯರು(Doctor) ದೆಹಲಿಯಲ್ಲಿದ್ದಾರೆ. ಅವರಿಗೆ ಕಿಡ್ನಿ ದಾನ(Donate Kidney) ಮಾಡಲು ಡೆಪಾಸಿಟ್‌, ಎಲ್‌ಐಸಿ ಪಾಲಿಸಿ(LIC Policy) ಮತ್ತು ವಿಮಾನದಲ್ಲಿ(Flight) ಹೋಗಲು ಶುಲ್ಕ ಪಾವತಿಸಬೇಕು. ಅಲ್ಲದೆ ಕಿಡ್ನಿ ಮಾರಾಟದಿಂದ ಬರುವ ಹಣಕ್ಕೆ ತೆರಿಗೆ(Tax) ಪಾವತಿಸಬೇಕು’ ಎಂದು ಸುಳ್ಳು ಹೇಳಿ ಹಂತ ಹಂತವಾಗಿ ಸಂತ್ರಸ್ತನಿಂದ ತನ್ನ ಬ್ಯಾಂಕ್‌ ಖಾತೆಗೆ 86 ಲಕ್ಷವನ್ನು ಆರೋಪಿ ವರ್ಗಾಯಿಸಿಕೊಂಡಿದ್ದಾನೆ. ಇದಾದ ಬಳಿಕ ಮತ್ತೆ ಆರೋಪಿ(Accused) ಹಣಕ್ಕೆ ಬೇಡಿಕೆ ಇಟ್ಟಿದ್ದಾಗ ಸಂತ್ರಸ್ತ ವ್ಯಕ್ತಿಗೆ ಗುಮಾನಿ ಬಂದಿದೆ. ಕೂಡಲೇ ತನ್ನ ಹಣ ಮರಳಿಸುವಂತೆ ಅವರು ಕೇಳಿದ್ದಾರೆ. ಇದಾದ ಬಳಿಕ ಆತನ ಸಂಪರ್ಕ ಕಡಿತವಾಗಿದೆ ಎಂದು ಪೊಲೀಸರು(Police) ವಿವರಿಸಿದ್ದಾರೆ.

ಕೆಲಸ ಕೊಡಿಸೋದಾಗಿ ಹಣ ಪಡೆದು ವಂಚನೆ: ಮೂವರ ಬಂಧನ

ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸೋದಾಗಿ ವಂಚಿಸುತ್ತಿದ್ದ(Fraud) ಗ್ಯಾಂಗ್‌ವೊಂದರ ಕಿಂಗ್ ಪಿನ್ ಸೇರಿ ಮೂವರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು(Police) ಬಂಧಿಸಿದ್ದರು.  ಕಾಳಿ ಪ್ರಸಾದ್ ರಾತ್ ಅಲಿಯಾಸ್ ಕಾಳಿ, ಅಭಿಜಿತ್ ಅರುಣ ನೆಟಕೆ, ಅಭಿಷೇಕ್ ಮೊಹಂತಿ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು(Accused) ಸಾಮಾಜಿಕ ಜಾಲತಾಣಗಳಲ್ಲಿ(Social Media) ಉದ್ಯೋಗ(Job) ಕೊಡಿಸೋದಾಗಿ ಪೋಸ್ಟ್ ಮಾಡುತ್ತಿದ್ದರು. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಮಾನ್ಯತಾ ಟೆಕ್ ಪಾರ್ಕ್ ಕಂಪನಿಗಳ ಹೆಸರು ಹಾಗೂ ಲೋಗೋ ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ವಂಚಿಸುತ್ತಿದ್ದರು. ಐಬಿಎಂ, ಕಾಗ್ನಿಜೆಂಟ್ ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಕೊಡಿಸೋದಾಗಿ ಫೇಸ್‌ಬುಕ್(Facebook), ಲಿಂಕ್ಡ್‌ಇನ್‌ನಲ್ಲಿ ಜಾಹೀರಾತು ನೀಡುತ್ತಿದ್ದರು. 

Bengaluru Crime: ಮಿಲಿಟರಿಯಲ್ಲಿ ಕೆಲಸದಾಸೆ ತೋರಿಸಿ ವಂಚನೆ: ನಕಲಿ ಸೇನಾಧಿಕಾರಿ ಬಂಧನ

ಸಂಪರ್ಕಿಸಿದವರ ಬಳಿ ಹಣ ಪಡೆದು ನಕಲಿ ಜಾಬ್ ಆಫರ್ ಲೆಟರ್ ನೀಡುತ್ತಿದ್ದರು. ನಂತರ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಕಚೇರಿಗೆ ಹೋಗುವಂತೆ ಹೇಳಿ ವ್ಯಕ್ತಿಯೊಬ್ಬರ ಹೆಸರನ್ನ ಹೇಳಿ ಸಂಪರ್ಕಿಸುವಂತೆ ಕಳುಹಿಸುತ್ತಿದ್ದರು. ಅಲ್ಲಿ ಹೋದಾಗ ತಾವು ವಂಚನೆಗೊಳಗಾಗಿರೋದು ತಿಳಿದು ಬರುತ್ತಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬಾಡಿಗೆ ಹಾಗೂ ಲೀಸ್ ಮನೆ ಕೊಡಿಸೋದಾಗಿ ಸಹ ಆರೋಪಿಗಳು ವಂಚಿಸಿದ್ದರು. ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. 

ಸದ್ಯ ಬಂಧಿತ ಆರೋಪಿಗಳ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳ ವಿರುದ್ಧ ಮಹಾರಾಷ್ಟ್ರದಲ್ಲೂ(Maharashtra) ವಂಚನೆ ಪ್ರಕರಣಗಳು ದಾಖಲಾಗಿರುವುದು ಪೊಲೀಸರು ತನಿಖೆಯಿಂದ ಬೆಳಕಿಗೆ ಬಂದಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!