
ಅಹಮದಾಬಾದ್ ( ಜ. 29) ಸ್ಕೂಟರ್ ನಲ್ಲಿ ಬಂದ 24 ವರ್ಷದ ಯುವಕ ತನ್ನ ಖಾಸಗಿ ಅಂಗವನ್ನು ಕಾನೂನು ವಿದ್ಯಾರ್ಥಿಯೊಬ್ಬಳಿಗೆ ಪ್ರದರ್ಶನ ಮಾಡಿದ್ದಾನೆ. 21 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲೆ ದೌರ್ಜನ್ಯಕ್ಕೆ ಯತ್ನ ಮಾಡಿ ಆಕೆಯನ್ನು ಮುಜುಗರ ಸನ್ನಿವೇಶಕ್ಕೆ ದೂಡಿ ಪರಾರಿಯಾಗಿದ್ದಾನೆ.
ಗುಜರಾತ್‌ನ ನವರಂಗಪುರ ಪ್ರದೇಶದಿಂದ ಪ್ರಕರಣ ವರದಿಯಾಗಿದೆ. ಬೈಕ್ ನಲ್ಲಿ ಬಂದ ಯುವಕ ಅಡ್ರೆಸ್ ಕೇಳುವ ನೆಪದಲ್ಲಿ ಯುವತಿ ಬಳಿ ಬೈಕ್ ನಿಲ್ಲಿಸಿದ್ದಾನೆ. ಯುವಕನನ್ನು ಚುರಾಗ್ ಭಟ್ಟಿ ಎಂದು ಗುರುತಿಸಲಾಗಿದೆ. ಯುವತಿ ಅವನಿಗೆ ಅಡ್ರೆಸ್ ಹೇಳುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ಯಾಂಟ್ ಜಿಪ್ ತೆಗೆದು ತನ್ನ ಖಾಸಗಿ ಅಂಗವನ್ನು ಆಕೆಯ ಮುಂದೆ ಪ್ರದರ್ಶನ ಮಾಡಿದ್ದಾನೆ. ಅಶ್ಲೀಲ ಸನ್ನೆ ಮಾಡಿದ್ದು ಅಲ್ಲದೇ ಹುಡುಗಿಯ ದೇಹದ ಬಗ್ಗೆ ಕಮೆಂಟ್ ಮಾಡಿದ್ದಾನೆ. ಯುವತಿ ಸಹಾಯಕ್ಕಾಗಿ ಕಿರುಚಿದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.
ಶಿರಸಿ; ಮನೆಗೆ ಬಾರದ ಗಂಡ..ಕೊನೆಯಾದ ಹೆಂಡತಿಯ ಬದುಕು
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಉಸ್ಮಾನ್‌ಪುರದ ಆತನ ಮನೆಯಿಂದ ಬಂಧಿಸಿ ಕರೆದುಕೊಂಡು ಬರಲಾಗಿದೆ.
ತನಿಖೆ ನಡೆಸಿದಾಗ ಯುವಕ ಹೇಳಿದ ಮಾತುಗಳು ವಿಚಿತ್ರವಾಗಿದ್ದವು. ತನ್ನ ಪತ್ನಿ ಗರ್ಭಿಣಿಯಾಗಿದ್ದ ಕಾರಣ ಹೀಗೆ ಮಾಡಿದೆ ಎಂದು ಹೇಳಿದ್ದಾನೆ. ನನ್ನ ಪತ್ನಿ ಮೂರು ತಿಂಗಳ ಗರ್ಭಿಣಿ ಬೇರೆ ದಾರಿ ಕಾಣದೆ ಇಂಥ ಕೆಲಸ ಮಾಡಿದೆ ಎಂದಿದ್ದಾನೆ.
ಬಾಯ್ ಫ್ರೆಂಡ್ ಮೇಲಿನ ದ್ವೇಷ.. ಗಮ್ ನಿಂದ ಖಾಸಗಿ ಅಂಗ ಸೀಲ್!
ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿಯೂ ಇಂಥದ್ದೆ ಪ್ರಕರಣ ವರದಿಯಾಗಿತ್ತು. ಪಕ್ಕದ ಮನೆ ಟೆರೆಸ್ ಮೇಲೆ ನಿಂತಿದ್ದ ಯುವಕ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ