27 ವರ್ಷಗಳ ಬಳಿಕ ಅಮ್ಮನನ್ನು ಹುಡುಕಿದ ಮಗ, ರೇಪಿಸ್ಟ್‌ ಅಪ್ಪನನ್ನೂ ಹುಡುಕಿಕೊಟ್ಟ!

By Santosh NaikFirst Published Aug 4, 2022, 10:26 PM IST
Highlights

1994ರಲ್ಲಿ ಶಹಜಹಾನ್‌ಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದ ಘಟನೆ ನಡೆದಿತ್ತು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಜನ್ಮನೀಡಿದ ಬಳಿಕ ಮಗುವನ್ನು ಬಲವಂತವಾಗಿ ದತ್ತು ನೀಡಲಾಗಿತ್ತು. ಕೊನೆಗೆ 28 ವರ್ಷಗಳ ನಂತರ ಅತ್ಯಾಚಾರದಿಂದ ಜನಿಸಿದ ಮಗು ತನ್ನ ತಾಯಿಯನ್ನು ಹುಡುಕಲು ಯಶಸ್ವಿಯಾಗಿದ್ದಲ್ಲದೆ, ಇಬ್ಬರೂ ಸೇರಿ ರೇಪಿಸ್ಟ್‌ ಅಪ್ಪನನ್ನೂ ಹುಡುಕಿ ಪೊಲೀಸರಿಗೆ ನೀಡಿದ್ದಾರೆ.
 

ಲಕ್ನೋ (ಆ. 4): 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಅತ್ಯಾಚಾರ ಸಂತ್ರಸ್ತೆ ಮಹಿಳೆಯೊಬ್ಬರು ಅಂತಿಮವಾಗಿ ನ್ಯಾಯವನ್ನು ಕಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅತ್ಯಾಚಾರದಿಂದ ಜನಿಸಿದ್ದ ತನ್ನದೇ ಮಗನಿಂದ ಉತ್ತರ ಪ್ರದೇಶ ಪೊಲೀಸರು ಮಂಗಳವಾರ (ಆಗಸ್ಟ್ 2) ಮೊಹಮ್ಮದ್ ರಾಜಿ ಅಲಿಯಾಸ್ ಗುಡ್ಡು ಹಸನ್ ಎಂದು ಗುರುತಿಸಲಾದ ಅತ್ಯಾಚಾರಿಗಳಲ್ಲಿ ಒಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಒಡಿಶಾದಲ್ಲಿ ಪತ್ತೆಯಾಗಿರುವ ಎರಡನೇ ಆರೋಪಿ ನಖಿ ಹಸನ್‌ನನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ. ವರದಿಗಳ ಪ್ರಕಾರ, ಪೊಲೀಸರು ಮೊಹಮ್ಮದ್ ರಾಜಿ ಅಲಿಯಾಸ್ ಗುಡ್ಡು ಹಸನ್ ನನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಆತ ಅಲ್ಲಿಯೇ ತಲೆಮರೆಸಿಕೊಂಡಿದ್ದ. "ಇಷ್ಟು ವರ್ಷಗಳ ನಂತರ ಪ್ರಕರಣವನ್ನು ತೆರೆಯಲಾಗುವುದು ಎಂದು ತಾನು ಊಹಿಸಿರಲಿಲ್ಲ ಎಂದು ರಾಜಿ ತಪ್ಪೊಪ್ಪಿಕೊಂಡಿದ್ದಾನೆ" ಎಂದು ತನಿಖಾಧಿಕಾರಿ ಧರ್ಮೇಂದ್ರ ಕುಮಾರ್ ಗುಪ್ತಾ ತಿಳಿಸಿದ್ದಾರೆ. 1994ರಲ್ಲಿ ಬಾಲಕಿಯು 12 ವರ್ಷದವಳಿದ್ದಾಗ ಈ ಸಹೋದರರು ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. 28 ವರ್ಷಗಳ ನಂತರ, ಸಂತ್ರಸ್ತೆಯ ಮಗನ ದೂರಿನ ಆಧಾರದ ಮೇಲೆ, ಶಹಜಹಾನ್‌ಪುರವು ಆರೋಪಿಯ ವಿರುದ್ಧ 2021ರ ಮಾರ್ಚ್ 4 ರಂದು ಪ್ರಕರಣವನ್ನು ದಾಖಲಿಸಿ, ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಕುರಿತು ಮಾತನಾಡಿದ ಶಹಜಹಾನ್‌ಪುರ ಎಸ್‌ಎಸ್‌ಪಿ, ಎಸ್ ಆನಂದ್, 'ನ್ಯಾಯಾಲಯದ ಆದೇಶದ ಮೇರೆಗೆ 2021ರ ಮಾರ್ಚ್ 4 ರಂದು ಎಫ್‌ಐಆರ್ ದಾಖಲಿಸಿದ ನಂತರ ಅಪರಾಧವು ನನ್ನ ಗಮನಕ್ಕೆ ಬಂದಿತು. ಆರೋಪಿಗಳ ಸಂಪೂರ್ಣ ಹೆಸರು ನಮ್ಮ ಬಳಿ ಇಲ್ಲ ಮತ್ತು ಅವರ ವಿಳಾಸಗಳನ್ನು ದೃಢೀಕರಿಸಲಾಗಿಲ್ಲ. ಇದು ಸಾಕಷ್ಟು ಹಳೆಯ ಪ್ರಕರಣವಾದರೂ ದೂರು ನಿಜವೆಂದು ತೋರುತ್ತಿದೆ. ಮಹಿಳೆ ತನ್ನ ಬಾಲ್ಯದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರಿಂದ ನ್ಯಾಯ ಪಡೆಯಲು ಸಹಾಯ ಮಾಡಲು ನಾವು ಬಯಸಿದ್ದೇವೆ. ವ್ಯಾಪಕವಾದ ಫಾಲೋಅಪ್‌ಗಳ ನಂತರ, ನಾವು ಆರೋಪಿ ಸಹೋದರರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಅವರು ನಗರದ ಹಡಾಫ್ ಪ್ರದೇಶದಲ್ಲಿ ಆರಾಮವಾಗಿ ವಾಸ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು: ಜುಲೈ 2021 ರಲ್ಲಿ, ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಯಿತು ಮತ್ತು ಏಪ್ರಿಲ್ 2022 ರಲ್ಲಿ ಪಡೆದ ಫಲಿತಾಂಶಗಳು ಪಾಸಿಟಿವ್‌ ತಿಳಿದುಬಂದಿದೆ. ಆರೋಪಿ ಮೊಹಮ್ಮದ್ ರಾಜಿ ಸಂತ್ರಸ್ತೆಯ ಮಗನ ಜೈವಿಕ ತಂದೆ ಎಂದು ಫಲಿತಾಂಶಗಳು ತೀರ್ಮಾನಿಸಿದೆ. ಇಬ್ಬರನ್ನು ಬಂಧಿಸಲು ಪೊಲೀಸರು ತಕ್ಷಣ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡರಾದರೂ, ಅವರು ಅದಾಗಲೇ ಪರಾರಿಯಾಗಿದ್ದರು.

Chikkodi: ಫೋನ್‌ ಪೇ ಸ್ಕ್ರೀನ್ ಶಾಟ್ ತೋರಿಸಿ ಪಂಗನಾಮ ಹಾಕುತ್ತಿದ್ದ ಖದೀಮರ ಬಂಧನ

ಸುಲಭದ ಕೆಲಸ ಆಗಿರಲಿಲ್ಲ: ಈ ಕೇಸ್‌ನ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಬಹಳ ಸನಿಹ ಬಂದಿದ್ದರಿಂದ, ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿ ಸಹೋದರರನ್ನು ಹುಡುಕಲು ಬಹಳಷ್ಟು ತಂಡಗಳನ್ನು ರಚನೆ ಮಾಡಿದ್ದೆವು. ಇಬ್ಬರು ವ್ಯಕ್ತಿಗಳ ಸ್ಥಳವನ್ನು ಕಂಡುಹಿಡಿಯುವಲ್ಲಿ ಕಣ್ಗಾವಲು ತಂಡದ ಪಾತ್ರವು ಪ್ರಮುಖವಾಗಿತ್ತು, ಇದು ಬಹಳ ವರ್ಷಗಳ ನಂತರ ಸುಲಭದ ಕೆಲಸವಾಗಿರಲಿಲ್ಲ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ನಟೋರಿಯಸ್‌ ಗ್ಯಾಂಗ್ ಅಂದರ್

1994ರಲ್ಲಿ ನಡೆದ ಘಟನೆ: ಅತ್ಯಾಚಾರ ಘಟನೆ ನಡೆದಿದ್ದು 1994ರಲ್ಲಿ. ಮೊಹಮ್ಮದ್ ರಾಜಿ ಮತ್ತು ನಕಿ, ಸಂತ್ರಸ್ತೆಯ ಕುಟುಂಬದ ಪರಿಚಯಸ್ಥರಾಗಿದ್ದರು. ಆಕೆಯ ಕುಟುಂಬವು ಅವರ ಮೇಲಿನ ನಂಬಿಕೆಯ ಲಾಭವನ್ನು ಪಡೆದುಕೊಂಡು, ಇಬ್ಬರು ಅವಳ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದರು. ಇದರಿಂದಾಗಿ 12 ನೇ ವಯಸ್ಸಿನಲ್ಲಿ ಆಕೆ ಗರ್ಭಣಿಯಾಗಿದ್ದರು. ಮಗುವಿನ ಜನನದ ನಂತರ, ಆರೋಪಿಯು ಸಂತ್ರಸ್ತೆಗೆ ಮಗನನ್ನು ದತ್ತು ನೀಡುವಂತೆ ಒತ್ತಾಯಿಸಿದ್ದ ಮತ್ತು ಎಫ್‌ಐಆರ್ ದಾಖಲಿಸದಂತೆ ಎಚ್ಚರಿಕೆ ನೀಡಿದ್ದ ಎಂದು ವರದಿಯಾಗಿದೆ. ಆದರೆ, 2021ರಲ್ಲಿ ತಾಯಿಯನ್ನು ಹುಡುಕಿಕೊಂಡು ಬರುವಲ್ಲಿ ಯಶಸ್ವಿಯಾದ ಮಗ, ರೇಪ್‌ ಕುರಿತಾಗಿ ಎಫ್‌ಐಆರ್‌ ದಾಖಲಿಸಲು ಮನವೊಲಿಸಿದ್ದ. 2021ರ ಮಾರ್ಚ್‌ 4 ರರಂದು ನ್ಯಾಯಾಲಯದ ಸೂಚನೆ ಅನ್ವಯ ಕೇಸ್‌ ದಾಖಲಿಸಲಾಗಿತ್ತು.
 

click me!