ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..

Published : Feb 03, 2025, 07:04 PM ISTUpdated : Feb 04, 2025, 10:29 AM IST
ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..

ಸಾರಾಂಶ

ಅಫ್ತಾಬ್ ಖಾನ್, ಅಂಕಿತ್ ತಿವಾರಿ ಎಂದು ನಟಿಸಿ, ಹನುಮ ಭಕ್ತನ ವೇಷದಲ್ಲಿ ಹಿಂದೂ ಅಪ್ರಾಪ್ತ ಬಾಲಕಿಯರನ್ನು ಮದುವೆಯ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ದೂಡುತ್ತಿದ್ದ. ಜುಬೀದಾ ಎಂಬಾಕೆ ಕತ್ರೀನಾ ಎಂದು ನಟಿಸಿ ಸಹಕರಿಸುತ್ತಿದ್ದಳು. ಪೊಲೀಸರು 11 ಬಾಲಕಿಯರನ್ನು ರಕ್ಷಿಸಿ, ೩೨ ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಹಿಂದೂ ಹೆಸರುಗಳನ್ನು ಬಳಸಿ, ಅಂತರ್ಜಾಲದ ಮೂಲಕ ಬಲಿಪಶುಗಳನ್ನು ಸೆಳೆಯುತ್ತಿದ್ದರು.

'ನನ್ನ ಹೆಸರು ಅಂಕಿತ್ ತಿವಾರಿ. ನಾನು ಹನುಮ ಭಕ್ತ' ಎನ್ನುತ್ತಲೇ ಕಾರಿನ ಮೇಲೆ 'ಜೈ ಭಜರಂಗಬಲಿ' ಎಂದು ಬರೆದುಕೊಂಡಿದ್ದ ಈ ಮಹಾ ಪಾತಕಿ. ಬಿಹಾರದ ಪೂರ್ಣಿಯಾ ಜಿಲ್ಲೆಯ ಈತನ ಟಾರ್ಗೆಟ್​ ಹಿಂದೂ ಹೆಣ್ಣುಮಕ್ಕಳು. ಅದರಲ್ಲಿಯೂ ಅಪ್ರಾಪ್ತೆಯರು. ಅಮಾಯಕ ಬಾಲಕಿಯರನ್ನು ಮೋಸದ ಬಲೆಗೆ ಬೀಳಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸುತ್ತಿದ್ದ ಈ ಅಂಕಿತ್​. ಈತನ ಐಷಾರಾಮಿ ಜೀವನವನ್ನು ನೋಡಿದ ಆ ಹೆಣ್ಣುಮಕ್ಕಳೂ ಈಗ ಹನುಮ ಭಕ್ತನೇ ಇರಬೇಕು ಎಂದುಕೊಂಡು ಬಲೆಗೆ ಬೀಳುತ್ತಿದ್ದರು. ಹೀಗೆ ಇದಾಗಲೇ ಈತ ಅದೆಷ್ಟೋ ಅಪ್ರಾಪ್ತೆಯರನ್ನು ತನ್ನ ಮೋಹದ ಜಾಲದೊಳಗೆ ಸಿಲುಕಿಸಿದ್ದಾನೆ. 

ನಗರದಲ್ಲಿ ಹೆಚ್ಚುತ್ತಿರುವ ವೇಶ್ಯಾವಾಟಿಕೆ ದಂಧೆಯ  ಜಾಡು ಹಿಡಿದು ಹೋದ ಪೊಲೀಸರ ಕೈಗೆ ಸಿಕ್ಕಿದ್ದು ಈ 'ಅಂಕಿತ್​ ತಿವಾರಿ' ಹಾಗೂ ಈತನ ಪ್ರೇಯಸಿ 'ಕತ್ರೀನಾ'. ಇವರ ಹಿನ್ನೆಲೆ ಕೆದಕಿದಾಗ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿದುಬಂದಿತ್ತು. ಅದೇನೆಂದರೆ, ಈತನ ಹೆಸರು ಅಂಕಿತ್​ ಅಲ್ಲ ಬದಲಿಗೆ   ಅಫ್ತಾಬ್ ಖಾನ್​ ಎನ್ನುವುದು. ಈತನ ಪ್ರೇಯಸಿ ಕತ್ರೀನಾ ಅಲ್ಲ ಬದಲಿಗೆ ಜುಬೀದಾ ಎನ್ನುವುದು ತಿಳಿದುಬಂತು. ಇನ್ನಷ್ಟು ಈತನ ಬಗ್ಗೆ ಕೆದಕಿದಾಗ ಮತ್ತಷ್ಟು ಕರಾಳ ಮುಖ ಬೆಳಕಿಗೆ ಬಂತು. ಹಲವಾರು ಬಾಲಕಿಯರನ್ನು ಮದುವೆಯ ಹೆಸರಿನಲ್ಲಿ ಈತ ವಂಚಿಸುತ್ತಿದ್ದ. ತಾನು ಅಂಕಿತ್​, ಹನುಮ ಭಕ್ತ ಎಂದು ಹೇಳಿಕೊಂಡು ಅಮಾಯಕ ಬಾಲಕಿಯರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದ. ಅವರನ್ನು ಕರೆದುಕೊಂಡು ಬಂದು ಕೊನೆಗೆ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ವಿಷಯ ತಿಳಿದ ಪೊಲೀಸರು, ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ 11 ಬಾಲಕಿಯರನ್ನು ವೇಶ್ಯಾಗೃಹದಿಂದ ರಕ್ಷಣೆ ಮಾಡಲಾಗಿದೆ. 

ಕುಂಭಮೇಳದ ಕಾಲ್ತುಳಿದ ಹಿಂದೆ ಆ 16 ಸಾವಿರ ಮೊಬೈಲ್ ಫೋನ್​​ಗಳು? ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ
 
ಪೊಲೀಸರ ಪ್ರಕಾರ,  ಪೂರ್ಣಿಯಾ ಜಿಲ್ಲೆಯಲ್ಲಿ ಅಫ್ತಾಬ್ ಖಾನ್ ನೇತೃತ್ವದ ಮುಸ್ಲಿಮರ ಗುಂಪೊಂದು ಹಿಂದೂ ಹುಡುಗಿಯರನ್ನು ಲೈಂಗಿಕ ದಂಧೆಗೆ ಸಿಲುಕಿಸುವ ಕಾರ್ಯದಲ್ಲಿ ತೊಡಗಿದೆ.  ಜನವರಿ 30ರಂದು ಪೂರ್ಣಿಯಾದ ಕಥಿಯಾರ್ ಮೋರ್ ಪ್ರದೇಶದಲ್ಲಿ ದಾಳಿ ನಡೆಸಿದಾಗ ವಿಷಯ ತಿಳಿದೆ. 11 ಅಪ್ರಾಪ್ತ ವಯಸ್ಕರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿರುವ ವಿಷಯ ಬೆಳಕಿಗೆ ಬಂದಿದೆ ಎಂದಿದ್ದಾರೆ ಪೊಲೀಸರು.  ಇನ್ನೂ ಎಷ್ಟು ಮಂದಿಯನ್ನು ಎಲ್ಲಿಗೆ ಈ ಗುಂಪು ಮಾರಾಟ ಮಾಡಿದೆ ಎನ್ನುವುದನ್ನು ಇನ್ನಷ್ಟೇ ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದಿದ್ದಾರೆ ಅವರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 32 ಜನರನ್ನು ಬಂಧಿಸಿದ್ದಾರೆ.  ಅವನ ಸಹಾಯಕರಲ್ಲಿ ಮೊಹಮ್ಮದ್ ಶಕೀಬ್, ಮೌಸಮ್ ಖಾನ್, ಗುಡ್ಡು ಖಾನ್ ಮತ್ತು ಜುಬೇದಾ ಸೇರಿದ್ದಾರೆ. ಶಕೀಬ್ ಮತ್ತು ಮೌಸಮ್ 'ರಾಜೀವ್ ಶಾ' ಮತ್ತು 'ರಿಷಭ್ ಶಾ' ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದರೆ,  ಜುಬೀದಾ 'ಕತ್ರಿನಾ' ಎಂಬ ಹೆಸರು ಇಟ್ಟುಕೊಂಡಿದ್ದಳು.  ಶಕೀಬ್ ವಿವಿಧ ಪ್ರದೇಶಗಳಿಂದ ಹಿಂದೂ ಹುಡುಗಿಯರನ್ನು ಖರೀದಿಸುತ್ತಿದ್ದ.  ಇಂಟರ್​ನೆಟ್​ ಮೂಲಕ ಹಿಂದೂ ಹುಡುಗಿಯರ ಸ್ನೇಹ ಬೆಳೆಸುತ್ತಿದ್ದ. ಗುಡ್ಡು ಖಾನ್ ಮತ್ತು ಜುಬೀದಾ ಕೂಡ 'ವೇಶ್ಯಾವಾಟಿಕೆ ಜಾಲ'ವನ್ನು ನಡೆಸಲು ಸಹಾಯ ಮಾಡುತ್ತಿದ್ದರು. ಅಫ್ತಾಬ್ ಖಾನ್ ನಡೆಸುತ್ತಿದ್ದ  ಗ್ಯಾಂಗ್, ಗ್ರಾಹಕರಿಂದ ಪ್ರತಿ ರಾತ್ರಿಗೆ  10 ಸಾವಿರ ಶುಲ್ಕ ವಿಧಿಸುತ್ತಿತ್ತು. ಅವರು ಇತರ ರಾಜ್ಯಗಳಲ್ಲಿ ಈ ಬಾಲಕಿಯರನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ದಲ್ಲಾಳಿಗಳಿಂದ  5 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.  ಬಾಲಕಿಯರನ್ನು ಬಾಲಾಪರಾಧಿಗಳ ಸುಧಾರಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ಮಹಾಕುಂಭದ ಭಕ್ತರಿಗೆ ಮಸೀದಿ, ದರ್ಗಾಗಳಲ್ಲಿ ಉಪಚಾರ- ಆಹಾರ, ನೀರಿನ ವ್ಯವಸ್ಥೆ; ಇಲ್ಲಿದೆ ಫುಲ್ ಡಿಟೇಲ್ಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!