ಪತಿಯ ಕಿಡ್ನಿ ಮಾರಿ, ಲವರ್​ ಜೊತೆ ಪರಾರಿಯಾದ ಕಿರಾತಕಿ! ಮಗಳ ಹೆಸರಲ್ಲಿ ಗಂಡನ ಬಲಿ...

Published : Feb 03, 2025, 06:06 PM ISTUpdated : Feb 04, 2025, 10:32 AM IST
ಪತಿಯ ಕಿಡ್ನಿ ಮಾರಿ, ಲವರ್​ ಜೊತೆ  ಪರಾರಿಯಾದ ಕಿರಾತಕಿ!  ಮಗಳ ಹೆಸರಲ್ಲಿ ಗಂಡನ ಬಲಿ...

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಲು ಗಂಡನ ಕಿಡ್ನಿ ಮಾರಾಟ ಮಾಡಿದ್ದಾಳೆ. ವೈದ್ಯರಿಂದ ಹತ್ತು ಲಕ್ಷಕ್ಕೆ ಕಿಡ್ನಿ ಮಾರಾಟ ಮಾಡಿಸಿ, ಹಣ ಪಡೆದ ಪತ್ನಿ ಪ್ರಿಯಕರನೊಂದಿಗೆ ಓಡಿಹೋದಳು. ಕಿಡ್ನಿ ಕಳೆದುಕೊಂಡ ಪತಿಗೆ ಹತ್ತು ವರ್ಷದ ಮಗಳ ಜವಾಬ್ದಾರಿ ಉಳಿದಿದೆ.

ಈ ಜಗತ್ತಿನಲ್ಲಿ ಎಂತೆಂಥ ಕ್ರೂರ ಮನಸ್ಥಿತಿಯವರು ಇದ್ದಾರೆ ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ಪ್ರೀತಿ-ಪ್ರೇಮದ ಬಲೆಯಲ್ಲಿ ಬಿದ್ದರಂತೂ ಮುಗಿದೇ ಹೋಯ್ತು. ಯಾವ ಜೀವವನ್ನೂ ತೆಗೆಯಲು ಹೇಸದ ಎಷ್ಟೋ ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ವಿವಾಹಿತರ ಅಕ್ರಮ ಸಂಬಂಧಗಳಿಂದ ಎಷ್ಟೋ ಅಮಾಯಕರು ಬಲಿಯಾಗುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ. ಅಂಥದ್ದೇ ಒಂದು ಘಟನೆ  ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂಕ್ರೈಲ್​ ಎಂಬಲ್ಲಿ ನಡೆದಿದೆ. ವಿವಾಹಿತೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಗಂಡನ ಕಿಡ್ನಿಯನ್ನೇ ಮಾರಾಟ ಮಾಡಿಸಿದ್ದಾಳೆ. ಆ ದುಡ್ಡನ್ನು ಪಡೆದುಕೊಂಡು ಲವರ್​ ಜೊತೆ ಪರಾರಿಯಾಗಿದ್ದಾಳೆ!

1994ರಲ್ಲಿ ಜಾರಿಗೊಂಡಿರುವ ಕಾನೂನಿನ ಪ್ರಕಾರ,  ಭಾರತದಲ್ಲಿ ಮಾನವ ಅಂಗಾಂಗಗಳ ಮಾರಾಟ ಕಾನೂನುಬಾಹಿರವಾಗಿದೆ. ಆದರೆ ಕೆಲವು ವೈದ್ಯರು ಹಣದ ಆಮಿಷಕ್ಕೆ ಒಳಗಾಗಿ, ಅಮಾಯಕರ ಕಿಡ್ನಿಗಳನ್ನು ಮಾರುವುದು ಮುಂದುವರೆದುಕೊಂಡು ಬಂದಿದೆ. ಹಣದ ದಾಹ ಯಾರನ್ನೂ ಬಿಟ್ಟಿಲ್ಲ ಎನ್ನುವಂತೆ ದೊಡ್ಡ ದೊಡ್ಡ ಕೆಲವು ಆಸ್ಪತ್ರೆಗಳಲ್ಲಿ ಇಂಥ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಶ್ರೀಮಂತರಿಗೆ ಅಂಗಾಂಗಗಳ ಅಗತ್ಯ ಬಿದ್ದಾಗ ಅವರಿಂದ ಲಕ್ಷ, ಕೋಟಿಗಳಲ್ಲಿ ಹಣ ಪಡೆಯುವ ಕೆಲವು ವೈದ್ಯರು, ಒಂದಿಷ್ಟು ಹಣದ ಆಸೆ ಒಡ್ಡಿ ಬಡವರಿಂದ ಅಂಗಾಂಗಳನ್ನು ಪಡೆದುಕೊಳ್ಳುತ್ತಿರುವ ವರದಿಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಈ ಘಟನೆಯಲ್ಲಿಯೂ ಅದೇ ರೀತಿ ಆಗಿದೆ.  

'ಭೂತ'ದ​ ಹೆಸ್ರು ಸಂಜು ಅಲ್ಲ ಸಲೀಂ: ಗರ್ಭಿಣಿಯಾದ ರೀಲ್ಸ್​ ರಾಣಿಯ ಭಯಾನಕ ಅಂತ್ಯ

ಅಷ್ಟಕ್ಕೂ ಆಗಿದ್ದೇನೆಂದರೆ, ಈ ದಂಪತಿಗೆ 10 ವರ್ಷದ ಮಗಳು ಇದ್ದಾಳೆ.  ಆತ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಸಂಸಾರ ಮಾಡುತ್ತಿದ್ದ. ಅದೇ ವೇಳೆ ಪತ್ನಿ ಪೇಂಟರ್ ಒಬ್ಬನ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾಳೆ. ಅವನ ಜೊತೆ ಸಂಸಾರ ಮಾಡುವ ಕನಸು ಕಾಣುತ್ತಿದ್ದ ಈ ಮಹಿಳೆಗೆ ದುಡ್ಡಿನ ಅವಶ್ಯಕತೆ ಇತ್ತು. ದುಡ್ಡು ತಂದರೆ ತಾವು ನೆಮ್ಮದಿಯ ಜೀವನ ಮಾಡಬಹುದು ಎಂದು ಲವರ್​ ಹೇಳಿರಲೂಬಹುದು. ಆದರೆ ಅಷ್ಟು ದುಡ್ಡು ತರುವುದು ಹೇಗೆ ಎಂಬ ಬಗ್ಗೆ ಲವರ್​ ಐಡಿಯಾ ಕೊಟ್ಟಿದ್ದನೋ ಗೊತ್ತಿಲ್ಲ. ಮಗಳಿಗೆ ಉತ್ತಮ ಶಿಕ್ಷಣ ಕೊಡಬೇಕು, ಆದರೆ ನಮ್ಮ ಬಳಿ ದುಡ್ಡಿಲ್ಲ ಎಂದು ಗಂಡನನ್ನು ಪೀಡಿಸುತ್ತಿದ್ದ ಈ ಕಿರಾತಕಿ ಕಿಡ್ನಿ ಮಾರಾಟ ಮಾಡುವಂತೆ ಪ್ರಚೋದನೆ ಮಾಡಿದ್ದಾಳೆ. ಮಗಳ ಭವಿಷ್ಯವನ್ನು ನೆನೆಸಿಕೊಂಡಿರುವ ಈ ಪತಿ ಕೊನೆಗೂ ಒಪ್ಪಿದ್ದಾನೆ.

ಇಂಥವರು ಬರುವುದನ್ನೇ ಕಾಯುತ್ತಿರುವ ಧನದಾಹಿ ವೈದ್ಯರೊಬ್ಬರು ಆಪರೇಷನ್​ ಮಾಡಿ ಮೂತ್ರಪಿಂಡ ತೆಗೆದು 10 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇಷ್ಟು ಹಣವನ್ನು ಒಟ್ಟಿಗೇ ಕಂಡ ಪತಿಗೆ ತಮ್ಮ ಜೀವನ ಇನ್ನುಮುಂದೆ ಚೆನ್ನಾಗಿ ಇರಬಹುದು, ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬಹುದು ಎನ್ನಿಸಿದೆ. ಆದರೆ ಮಾರನೆಯ ದಿನ ತಾನೇ ಬ್ಯಾಂಕ್​ನಲ್ಲಿ ಹಣ ಇಡುವುದಾಗಿ ಹೇಳಿದ ಪತ್ನಿ ಮಧ್ಯರಾತ್ರಿಯೇ ಲವರ್​ ಜೊತೆ ಪರಾರಿಯಾಗಿದ್ದಾಳೆ. ಪತ್ನಿ ಆತನ ಜೊತೆ ಓಡಿಹೋಗಿರುವುದು ತಿಳಿಯುತ್ತಲೇ ಪತಿ ಮಗಳನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾನೆ. ಆದರೆ ಆಕೆ ಲವರ್​ನನ್ನು ಬಿಟ್ಟು ಸುತರಾಂ ಬರಲು ಒಪ್ಪಲಿಲ್ಲ. ಪತಿಗೆ ಬೈದು ಕಳುಹಿಸಿದ್ದಾಳೆ. ವಿಚ್ಛೇದನ ಕೊಡುವುದಾಗಿ ಹೇಳಿ ಕಳುಹಿಸಿದ್ದಾಳೆ! ಇತ್ತ ಕಿಡ್ನಿಯನ್ನೂ ಕಳೆದುಕೊಂಡು ನೋವು ಅನುಭವಿಸಿತ್ತಿರುವ ಪತಿಗೆ ಮಗಳ ಜವಾಬ್ದಾರಿ ಕೂಡ ಹೆಗಲ ಮೇಲೆ ಬಂದಿದೆ. 

ಸಿಕ್ಕಿಬೀಳಬಾರ್ದೆಂದು ಅಮೂಲ್ಯ ವಸ್ತುಗಳ ಇಲ್ಲೆಲ್ಲಾ ಅಡಗಿಸ್ತಾರಾ? ಈ ವೈರಲ್​ ವಿಡಿಯೋ ನೋಡಿದ್ರೆ ಸುಸ್ತಾಗೋಗ್ತೀರಾ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ