ಡಿ.ಕೆ. ಶಿವಕುಮಾರ್ ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡ ಐಶ್ವರ್ಯಾ ಗೌಡ, 14 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಜಕಾರಣಿಗಳು ಮತ್ತು ಉದ್ಯಮಿಗಳ ಪರಿಚಯವನ್ನು ಬಳಸಿಕೊಂಡು ಜ್ಯುವೆಲ್ಲರಿ ಅಂಗಡಿ ಮಾಲೀಕರನ್ನು ವಂಚಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಡಿ.24): ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡಿರುವ ಐಶ್ವರ್ಯಾ ಗೌಡ ಹಾಗೂ ನಟ ಧರ್ಮೇಂದ್ರ ಬರೋಬ್ಬರಿ 14 ಕೆಜಿ 660 ಗ್ರಾಮ ಬಂಗಾರದ ಆಭರಣಗಳನ್ನು ಪಡೆದು ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಐಶ್ವರ್ಯ ಗೌಡ ಎಂಬ ಮಹಿಳೆ ವಾರಾಹಿ ಜ್ಯುವೆಲರಿ ಶಾಪ್ ಮಾಲೀಕರಾದ ವನಿತಾ ಅವರ ಜೊತೆ ಸ್ನೆಹ ಸಂಪಾದನೆ ಮಾಡುತ್ತಾರೆ. ವಿವಿಧ ರಾಜಕೀಯ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಈ ಐಶ್ವರ್ಯಾ ಗೌಡ ತಾನು ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡಿದ್ದಾರ. ವನಿತಾ ಅವರ ಜ್ಯೂವೆಲ್ಲರಿ ಮಳಿಗೆಗೆ ತೆರಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡುತ್ತಾರೆ. ಇದಾದ ನಂತರ, ತನಗೆ ದೊಡ್ಡ ದೊಡ್ಡ ರಾಜಕಾರಣಿಗಳು, ಗುತ್ತಿಗೆದಾರರು, ಉದ್ಯಮಿಗಳು ಹಾಗೂ ಶ್ರೀಮಂತರು ಪರಿಚಯವಿದ್ದು, ನಿಮ್ಮ ಚಿನ್ನದ ಅಂಗಡಿಯ ಬ್ಯೂಸಿನೆಸ್ ಹೆಚ್ಚಳ ಮಾಡುವುದಾಗಿ ಭರವಸೆ ನೀಡುತ್ತಾಳೆ.
undefined
ಇದಾದ ನಂತರ ಇಬ್ಬರ ಸ್ನೇಹ ಘಾಡವಾಗಿ ಬೆಳೆದಿದ್ದು, ಸಿನಿಮಾ ನಟರು ಹಾಗೂ ರಾಜಕಾರಣಿಗಳ ಪರಿಚಯದ ನೆಪ ಹೇಳಿಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಆಗ ಮೈಮೇಲೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಕಿಕೊಂಡು ಶ್ರೀಮಂತೆ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಇದೆಲ್ಲವನ್ನು ಜ್ಯೂವೆಲ್ಲರಿ ಅಂಗಡಿ ಮಾಲೀಕರಾದ ವನಿತಾ ಅವರಿಗೆ ತೋರಿಸಿ ಅವರಿಂದ ಚಿನ್ನವನ್ನು ಖರೀದಿ ಮಾಡಿ ಅದನ್ನು ಮಾರಾಟ ಮಾಡಿದ್ದಾಗಿ ಹೇಳಿಕೊಂಡು ಅದಕ್ಕೆ ಹಣವನ್ನು ಪಾವತಿ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು.
ಆರಂಭದಲ್ಲಿ ವಿಶ್ವಾಸ ಗಳಿಸಿಕೊಂಡ ಐಶ್ವರ್ಯಾ ಗೌಡ ನಂತರ ಕೆಜಿಗಟ್ಟಲೆ ಬಂಗಾರ ಹಾಗೂ ಚಿನ್ನಾಭರಣಗಳನ್ನು ಪಡೆದು ಅದನ್ನು ರಾಜಕಾರಣಿಗಳು ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡಿ ಅವರು ಹಣ ಕೊಡುವುದು ತಡವಾಗುತ್ತಿದೆ ಎಂದು ಸಬೂಬು ಹೇಳಿದ್ದಾರೆ. ಇದು ಪದೇ ಪದೇ ರಿಪೀಟ್ ಆಗುತ್ತದೆ. ಮೊದಲಿಗೆ ಸರಿಯಾಗಿ ಹಣ ಪಾವತಿ ಮಾಡಿ, ನಂತರ ನಿಧಾನವಾಗಿ ಒಡವೆ ಖರೀದಿ ಮಾಡಿ, ಹಣ ಕೊಡುವುದನ್ನು ಡಿಲೇ ಮಾಡಲಾಗುತ್ತದೆ.
ಇದನ್ನೂ ಓದಿ: ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!
ಹಣ ಕೇಳಿದಾಗಲೆಲ್ಲಾ ಕೆಲವು ಬಿಲ್ ಗಳು ಬರುವುದು ಬಾಕಿ ಇದೆ. ಬಿಲ್ ಬಂದ ಕೂಡಲೇ ಹಣ ನೀಡುವುದಾಗಿ ಐಶ್ವರ್ಯ ಗೌಡ ಭರವಸೆ ಕೊಡುತ್ತಾಳೆ. ಹಣ ನೀಡುವಂತೆ ಒತ್ತಾಯ ಮಾಡಿದಾಗ, ನಿಮಗೆ ನಂಬಿಕೆ ಇಲ್ಲವೇ? ಸಂಸದ ಡಿ.ಕೆ. ಸುರೇಶ್ ಅವರಿಂದಲೇ ಹೇಳಿಸ್ತೀನಿ ಅಂತಾ ಹೇಳಿ ಮೊಬೈಲ್ ಕರೆ ಮಾಡುತ್ತಿದ್ದರು. ಇನ್ನು ಮೊಬೈಲ್ ನಲ್ಲಿ ಅತ್ತ ಕಡೆಯಿಂದ ಡಿ.ಕೆ. ಸುರೇಶ್ ಅವರ ಧ್ವನಿಯಲ್ಲಿ ನಿಮ್ಮ ಹಣ ಎಲ್ಲೂ ಹೋಗಲ್ಲ. ಚುನಾವಣೆ ಮುಗಿಯುವವರೆಗೂ ಕಾಯಿರಿ. ನಿಮ್ಮ ಹಣಕ್ಕೆ ನಾನು ಗ್ಯಾರಂಟಿ ಎಂದು ಭರವಸೆ ನೀಡುತ್ತಾರೆ.
ಇದಾದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ವನಿತಾ ಅವರನ್ನು ಖುದ್ದಾಗಿ ಕರೆದುಕೊಂಡು ಹೋಗಿದ್ದ ಐಶ್ವರ್ಯಾ ಗೌಡ, ಅಲ್ಲಿ ಪರಿಚಯ ಮಾಡಿಸಿ ಫೋಟೋ ತೆಗೆಸಿಕೊಂಡು ಬಂದಿದ್ದಾರೆ. ಇತ್ತೀಚಿಗೆ ಬೇರೊಂದು ಪ್ರಕರಣದಲ್ಲಿ ಐಶ್ವರ್ಯ ಗೌಡ ಮೇಲೆ ವಂಚನೆ ಕೇಸ್ ದಾಖಲಾಗಿರುತ್ತದೆ. ಆಗ ಐಶ್ವರ್ಯಾ ಮೇಲೆ ಅನುಮಾನಗೊಂಡ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಅವರು ಈ ವಿಚಾರದ ಬಗ್ಗೆ ಡಿ.ಕೆ. ಸುರೇಶ್ ಅವರನ್ನು ಸಂಪರ್ಕ ಮಾಡಿ ನಿಮ್ಮ ದನಿಯಲ್ಲಿ ಮಾತಾಡಿ ಭರವಸೆ ನೀಡಿದ್ದಾಗಿ ಕೇಳಿದರೆ, ನಾನು ಮಾತನಾಡಿಲ್ಲ. ನಿಮಗೆ ಯಾರೋ ನನ್ನ ಧ್ವನಿಯಲ್ಲಿ ಮಾತನಾಡಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರಂತೆ. ಜೊತೆಗೆ, ನಿಮಗೆ ಮೋಸ ಮಾಡಿದ ಮಹಿಳೆಗೂ ನಮಗೂ ಯಾವ ಸಂಬಂಧವೂ ಇಲ್ಲ. ನೀವು ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ನಂತರ, ತಾವು ಕೂಡಾ ಮೋಸ ಹೋಗಿರುವುದನ್ನು ಅರಿತುಕೊಂಡ ವನಿತಾ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹೆಂಡತಿಯನ್ನು ಓದಿಸಿ ಕೆಲಸಕ್ಕೆ ಕಳುಹಿಸಿದ್ದೇ ತಪ್ಪಾಯ್ತು; ಜೀವ ತೊರೆದ ಬೆಂಗಳೂರು ಲಾರಿ ಉದ್ಯಮಿ!