ನಟ ದರ್ಶನ್‌ಗೆ ಜೈಲೂಟ ತಿಂದು ವಾಂತಿ ಭೇದಿಯಾದರೂ, ಇನ್ನೊಂದು ವಾರ ಮನೆ ಊಟದ ಭಾಗ್ಯವಿಲ್ಲ!

By Sathish Kumar KH  |  First Published Jul 10, 2024, 3:34 PM IST

 ನಟ ದರ್ಶನ್ ಕಳೆದ 20 ದಿನಗಳಿಂದ ಜೈಲಿನ ಊಟ ತಿಂದು ವಾಂತಿ, ಭೇದಿ ಉಂಟಾಗಿ ಸೊರಗಿದ್ದರೂ, ಇನ್ನೂ ಒಂದು ವಾರ ಮನೆ ಊಟ ತಿನ್ನುವ ಭಾಗ್ಯ ಸಿಗುವುದಿಲ್ಲ.


ಬೆಂಗಳೂರು (ಜು.10): ಕಳೆದ 20 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನ ಊಟ ತಿನ್ನುತ್ತಿರುವ ನಟ ದರ್ಶನ್‌ಗೆ ಊಟ ಒಗ್ಗಿಕೊಳ್ಳದೇ ವಾಂತಿ, ಭೇದಿ ಶುರುವಾಗಿದ್ದು, ದೇಹದ ತೂಕವೂ ಇಳಿಕೆಯಾಗಿದೆ. ಹೀಗಾಗಿ, ಮನೆ ಊಟಕ್ಕೆ ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅರ್ಜಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ಇನ್ನೂ ಒಂದು ವಾರ ನಟ ದರ್ಶನ್‌ಗೆ ಮನೆ ಊಟ ತಿನ್ನುವ ಭಾಗ್ಯವಿಲ್ಲ.

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ 20 ದಿನ ಕಳೆದಿದ್ದಾರೆ. ಆದರೆ, ಜೈಲಿನ ಉಟ ತಿಂದು ವಾಂತಿ ಭೇದಿ ಉಂಟಾಗಿ ತೂಕ ಇಳಿಕೆಯಾಗಿದ್ದು, ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಜೈಲಿನ ಕೈಪಿಡಿಯಲ್ಲಿನ ಮಾಹಿತಿ ನಿಡುವಂತೆ ನೋಟೀಸ್ ಜಾರಿಗೊಳಿಸಿ ಜು.18ಕ್ಕೆ ವಿಚಾರಣೆ ಮುಂಡೂಡಿಕೆ ಮಾಡಲಾಗಿದೆ. ಇದರಿಂದ ನಟ ದರ್ಶನ್‌ಗೆ ಮನೆ ಊಟ ತಿನ್ನುವ ಭಾಗ್ಯ ಮತ್ತಷ್ಟು ದಿನ ಮುಂದೂಡಿಕೆ ಆಗಿದೆ.

Latest Videos

undefined

ಜೈಲೂಟ ತಿಂದ ನಟ ದರ್ಶನ್‌ಗೆ ವಾಂತಿ ಭೇದಿ; ಭರ್ಜರಿ ತೂಕ ಇಳಿಕೆ

ನಟ ದರ್ಶನ್ ಪರ ವಕೀಲರು ನಟ ದರ್ಶನ್‌ಗೆ ಮನೆಯಿಂದ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ಕೋರಿ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ಮಾಡಲಾಯಿತು.ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿ, ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೂ, ಜೈಲಿನ ಅಧಿಕಾರಿಗಳು ನಟ ದರ್ಶನ್‌ಗೆ ಮನೆ ಊಟದ ಅವಕಾಶ ನೀಡಿಲ್ಲವೆಂದು ಹೇಳಿದರು.

ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ಬಂಧನ

ದರ್ಶನ್ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ ? ಎಂದು ಜೈಲಿನ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಈ ಬಗ್ಗೆ ತನಿಖಾಧಿಕಾರಿಗಳು ಹಾಗೂ ಜೈಲಿನ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕು ಎಂದು ನೋಟೀಸ್ ಜಾರಿ ಮಾಡಿದರು. ಜೊತೆಗೆ, ನಟ ದರ್ಶನ್‌ಗೆ ಮನೆಯ ಊಟ ತರಿಸಿಕೊಳ್ಳಲು ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್‌ಗೆ ಸೂಚನೆ ನೀಡಿದರು. ನಂತರ, ಅರ್ಜಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿಕೆ ಮಾಡಿದರು. ಇನ್ನು ಮನೆಯ ಊಟ, ಮೆತ್ತನೆಯ ಹಾಗೂ ಶುಭ್ರ ಹಾಸಿಗೆ ಹಾಗೂ ಜೈಲಿನಲ್ಲಿ ಸಮಯ ಕಳೆಯಲು ಅನುಕೂಲ ಆಗುವಂತೆ ತಮಗಿಷ್ಟದ ಪುಸ್ತಕಗಳನ್ನು ತರಿಸಿಕೊಂಡು ಓದಲು ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ತೀವ್ರ ನಿರಾಸೆ ಉಂಟಾಗಿದೆ.

click me!