ಪೊಲೀಸರು ಸೆಕ್ಸ್ ರಾಕೆಟ್ ಭೇದಿಸಿದ್ದು, ಬೆತ್ತಲಾಗಿದ್ದ ಯುವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದುಕೊಂಡಿದ್ದರು. ರೂಮ್ ಬಾಗಿಲು ತೆರೆದ ಪೊಲೀಸರಿಗೆ ಕಂಡಿದ್ದು ಬೆತ್ತಲೆ ಲೋಕ.
ಜೈಪುರ: ಸ್ಪಾ ಆಂಡ್ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿದ ಪೊಲೀಸರು ಎಂಟು ಯುವತಿಯರು ಮತ್ತು ಮೂವರು ಯುವಕರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಜೋಧಪುರ ಜಿಲ್ಲೆಯ ಪೊಲೀಸರು ಸೆಕ್ಸ್ ರಾಕೆಟ್ ಭೇದಿಸಿದ್ದಾರೆ. ಬಂಧಿತ 11 ಜನರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಜೋಧಪುರ ಗ್ರಾಮೀಣ ವಲಯದ ಸರದಾರಪುರ ಕ್ಷೇತ್ರದಲ್ಲಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸ್ಪಾ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದವು.
ಸ್ಪಾನಲ್ಲಿ ನಡೆಯುತ್ತಿತ್ತು ಸೆಕ್ಸ್ ದಂಧೆ
ಮಂಗಳವಾರ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದವರು ಭಯದಿಂದ ಓಡಿ ಹೋಗಲು ಆರಂಭಿಸಿದ್ದಾರೆ. ಸ್ಪಾ ಒಳಗೆ ಹೋದ ಪೊಲೀಸರಿಗೆ ಆರಂಭದಲ್ಲಿಯೇ ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುವುದು ಖಚಿತವಾಗಿತ್ತು. ಇದರ ಮಾಲೀಕ ಸ್ಪಾ ನಡೆಸೋದಾಗಿ ಅನುಮತಿ ಪಡೆದುಕೊಂಡಿದ್ದನು. ಒಳಗೆ ಹೋದಾಗ ಒಂದೇ ಕೋಣೆಯಲ್ಲಿ ಎಂಟು ಯುವತಿಯರ ಜೊತೆ ಮೂವರು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಎಲ್ಲರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ. ಬಂಧಿತ ಎಲ್ಲಾ ಯುವತಿಯರು ಅನ್ಯ ರಾಜ್ಯದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಸೆಕ್ಸ್ ಮಸಾಜ್‌ಗೆ ಕುಶಾಲನಗರದ ಹುಡುಗಿ ಬೇಕಾ?' ಎಂದು ವಂಚಿಸುತ್ತಿದ್ದ ಹಾಸನ ಜಿಲ್ಲೆಯ ಖತರ್ನಾಕ್ ಗ್ಯಾಂಗ್ ಅಂದರ್!
ಬಾರ್ಮೇರ್ ಜಿಲ್ಲೆಯಲ್ಲಿಯೂ ಸ್ಪಾ ಮೇಲೆ ದಾಳಿ
ಸದ್ಯ ಪೊಲೀಸರು ಬಂಧಿತರ ಪೂರ್ವಾಪರದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ರೀತಿ ಬಾರ್ಮೇರ್ ಜಿಲ್ಲೆಯಲ್ಲಿಯೂ ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ದಾಳಿಯಲ್ಲಿ ಕೆಲ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಸಾಜ್ ಮಾಡಿಸಿಕೊಳ್ಳಲೆಂದು ಬಂದಿದ್ದ ಮೂವರು ಯುವಕರು ಇಲ್ಲಿ ಯುವತಿಯರ ಜೊತೆ ಎಂಜಾಯ್ ಮಾಡುತ್ತಿದ್ದರು. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಪಾ ಹೆಸರಲ್ಲಿ ಹೆಚ್ಚಾಯ್ತು ಅಕ್ರಮ ಚಟುವಟಿಕೆಗಳು
ಕಳೆದ ಕೆಲವು ವರ್ಷಗಳಿಂದ ಸ್ಪಾ ಹೆಸರಲ್ಲಿ ಅಕ್ರಮ ಚಟುವಟಿಕೆಗಳ ಸಂಖ್ಯೆ ಏರಿಕೆಯಾಗಿದೆ. ರಾಜಸ್ಥಾನದ ಉದಯಪುರ, ಜೈಪುರದಲ್ಲಿಯೂ ಸ್ಪಾ ಸಲೂನ್‌ಗಳ ಮೇಲೆ ದಾಳಿ ನಡೆಸಿ, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯ: 10-15ರ ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಕಾಮುಕ..!