ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮುಗ್ದ ಎಂದು ವಕೀಲ ನಾರಾಯಣ ಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ದರ್ಶನ್ ಜೊತೆ ಜೈಲಿನಲ್ಲಿರುವ 19 ಆರೋಪಿಗಳ ಪೈಕಿ ಹಲವರು ಮುಗ್ದರಿದ್ದಾರೆ ಎಂದಿದ್ದಾರೆ. ಪಬ್ ಕೇಸ್‌ನಿಂದ ದರ್ಶನ್‌ನ್ನು ಬಿಡಿಸಿದ ವಕೀಲ ಹೇಳಿದ ವಿವರ ಇಲ್ಲಿದೆ.
ಬೆಂಗಳೂರು(ಜು.03) ಪಬ್ ಪ್ರಕರಣದಲ್ಲಿ ನಟ ದರ್ಶನ್‌ನನ್ನು ಯಶಸ್ವಿಯಾಗಿ ಬಿಡಿಸಿಕೊಂಡು ರಿಲೀಫ್ ನೀಡಿದ್ದ ವಕೀಲ ನಾರಾಯಣಸ್ವಾಮಿ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮುಗ್ದ ಎಂದಿದ್ದಾರೆ. ದರ್ಶನ್‌ಗೆ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 19 ಆರೋಪಿಗಳ ಪೈಕಿ ಹಲವರು ಮುಗ್ದರಿದ್ದಾರೆ ಎಂದಿದ್ದಾರೆ
ಒಬ್ಬ ವಕೀಲನಾಗಿ ಮಾತ್ರ ಅಲ್ಲ, ವೈಯುಕ್ತಿವಾಗಿ ನಾನು ಹೇಳುತ್ತೇನೆ ಈ ಪ್ರಕರಣದಲ್ಲಿ ನಟ ದರ್ಶನ್ ಇನ್ನೋಸೆಂಟ್. ಕಾನೂನನಲ್ಲಿ ಅವರಿಗೆ ನ್ಯಾಯ ಸಿಗುತ್ತೆ. ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ನಟ ದರ್ಶನ್ ಕಸ್ಟಡಿಯಲ್ಲೇ ಇರುತ್ತಾರೆ. ಈ ಪ್ರಕರಣದಲ್ಲಿ ಕೇವಲ ದರ್ಶನ್ ಮಾತ್ರ ನ್ಯಾಯಂಗ ಬಂಧನದಲ್ಲಿಲ್ಲ. ಅವರ ಜೊತೆ 19 ಜನ ನ್ಯಾಯಂಗ ಬಂಧನದಲ್ಲಿದ್ದಾರೆ. ಅವರು ಕೂಡ ಮನುಷ್ಯರೇ. ಈ ಪೈಕಿ ಹಲವರು ಮುಗ್ದರಿದ್ದಾರೆ ಎಂದು ವಕೀಲ ನಾರಾಯಣ ಸ್ವಾಮಿ ಹೇಳಿದ್ದಾರೆ.
Actor Darshan: ಪುಟ್ಟ ಮಗುವಿಗೆ ಕೈದಿ ನಂಬರ್ 6106 ಕೊಟ್ಟು ಫೋಟೋ ಶೂಟ್ ಮಾಡಿಸಿದವರಿಗೆ ನೊಟೀಸ್ ಜಾರಿ
19 ಆರೋಪಿಗಳನ್ನು ಮಾಧ್ಯಮಗಳಲ್ಲಿ ಅಪರಾಧಿಗಳ ರೀತಿ ಬಿಂಬಿಸಲಾಗಿದೆ. ಅವರೆಲ್ಲರಿಗೂ ಒಂದು ಜೀವನವಿದೆ. ಏನೋ ನಡೆದಿರುತ್ತದೆ. ಆ ಪರಿಸ್ಥಿತಿಗಳು ನಮಗೆ ಗೊತ್ತಿರುವುದಿಲ್ಲ. ಮಾಧ್ಯಮಗಳ ಮೂಲಕ ನಾನು ವಿನಂತಿಸುವುದೇನೆಂದರೆ, 19 ಜೀವನ, 19 ಕುಟುಂಬಗಳನ್ನು ನಾವು ನೋಡಬೇಕಾಗುತ್ತದೆ. ಅವರೆಲ್ಲಾ ಆಪಾದನೆ ಹೊತ್ತಿರುವ ವ್ಯಕ್ತಿಗಳು, ಯಾರು ಅಪರಾಧಿಗಳಲ್ಲ. ಇದನ್ನು ಕೋರ್ಟ್ ತೀರ್ಮಾನ ಮಾಡುತ್ತೆ. ಅವರು ತಪ್ಪು ಮಾಡಿದ್ದಾರಾ ಇಲ್ವಾ ಅನ್ನೋದು ಕೋರ್ಟ್ ನಿರ್ಧರಿಸುತ್ತೆ, ಅಲ್ಲಿಯವರೆಗೆ ಯಾರು ಕೂಡ ಅಪರಾಧಿ ಎಂದು ಬಿಂಬಿಸಬೇಡಿ ಎಂದು ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
ಈ ಮಾತುಗಳನ್ನು ನಾನು ಹೇಳಿದಾಗ ಹಲವರು ನೀವು ನೋಡಿದ್ದೀರಾ, ಅದನ್ನು ಕೋರ್ಟ್‌ನಲ್ಲಿ ಹೇಳಿ ಎಂದು ಹಲವರು ಪ್ರಶ್ನಿಸುತ್ತಾರೆ. ಅವರೆಲ್ಲರಿಗೂ ನನ್ನ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಒಬ್ಬ ಲಾಯರ್ ಕೆಲಸ ಕೇವಲ ಕೋರ್ಟ್‌ನಲ್ಲಿ ಮಾತ್ರವಲ್ಲ, ನಮ್ಮ ಬಳಿ ಪ್ರತಿಯೊಬ್ಬ ಕಕ್ಷಿದಾರನಿಗೆ ಕಾನೂನಾತ್ಮಕವಾಗಿ ನ್ಯಾಯ ಕೊಡಿಸುವುದು ನನ್ನ ಧರ್ಮ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಲೇಟ್ ಆಗಿ ಬ್ಯಾಟ್ ಬೀಸ್ತಿರೋದು ಯಾಕೆ, ಮ್ಯಾಚ್ ಬಗ್ಗೆ ಈಗ ಅಪ್‌ಡೇಟ್ ಆಗ್ತಿದ್ಯಾ ದರ್ಶನ್ ಆಪ್ತರಿಗೆ?
ವಿನಾ ಕಾರಣ, ಒಬ್ಬರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕಾಕುತ್ತದೆ. ಇದು ಯೋಗ್ಯತೆಯನ್ನು ತೋರಿಸುತ್ತದೆ. ಎಲ್ಲ ಹೆಣ್ಣುಮಕ್ಕಳನ್ನು ಗೌರವಿಸಬೇಕು. ಅಪರಾಧಿಗಳು ಎಂದು ಬಿಂಬಿಸಬೇಡಿ ಎಂದು ನಟ ದರ್ಶನ್ ಹಾಗೂ ಆರೋಪಿಗಳ ಪರ ವಕೀಲ ನಾರಾಯಣಸ್ವಾಮಿ ಬ್ಯಾಟ್ ಬೀಸಿದ್ದಾರೆ.