ಹುಟ್ಟೂರು ಪೊನ್ನಂಪೇಟೆಯಲ್ಲಿ ನಟ ದರ್ಶನ್ ಕ್ರೌರ್ಯ, ಹೋಂ ಸ್ಟೇಯಲ್ಲಿ ಕೆಲಸದಾಕೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ!

By Kannadaprabha News  |  First Published Jun 15, 2024, 6:47 PM IST

ನಟ ದರ್ಶನ್ ತೋರಿಸಿದ್ದಾರೆ ಎನ್ನಲಾದ ಕ್ರೌರ್ಯಕ್ಕೆ ಹುಟ್ಟೂರು ಪೊನ್ನಂಪೇಟೆಯಲ್ಲಿ ದರ್ಶನ್ ಮಾವ ಮತ್ತು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.


ಮಡಿಕೇರಿ (ಜೂ.15): ನಟ ದರ್ಶನ್ ತೋರಿಸಿದ್ದಾರೆ ಎನ್ನಲಾದ ಕ್ರೌರ್ಯಕ್ಕೆ ಹುಟ್ಟೂರು ಪೊನ್ನಂಪೇಟೆಯಲ್ಲಿ ದರ್ಶನ್ ಮಾವ ಮತ್ತು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ತನ್ನ ಹುಟ್ಟೂರಿನಲ್ಲಿ ಕೂಡ ತಾಯಿ ಮೀನಾ ಮತ್ತು ನಟ ದರ್ಶನ್ ಕ್ರೌರ್ಯ ನಡೆಸಿದ್ದರು ಎನ್ನಲಾಗಿದೆ.

ದರ್ಶನ್ ಮತ್ತು ತಾಯಿ ದಶಕದ ಹಿಂದೆ, ತಾವು ಹುಟ್ಟಿ ಬೆಳೆದ ಮನೆಯನ್ನೇ ಕೆಡವಿದ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ತಾನು ಬೆಳೆದ ಮನೆಯನ್ನೇ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದರು. ತಾಯಿ ಮೀನಾ ಜೊತೆ 10 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಪ್ರಕರಣ ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

Tap to resize

Latest Videos

ಬದುಕು ಸೀರಿಯಲ್‌ನಲ್ಲಿ ಗಂಡನಾಗಿದ್ದವನನ್ನೇ ರಿಯಲ್‌ ಲೈಫ್ ನಲ್ಲಿ ಕೈ ಹಿಡಿದ ನಟಿ ಸಿರಿ!

ಕೆಲ ವರ್ಷಗಳ ಹಿಂದೆ ಹೆಂಡತಿ ಜೊತೆ ಗಲಾಟೆ ಮಾಡಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಈಗ ಪವಿತ್ರಗೌಡ ಜೊತೆ ಸಂಬಂಧ ಇಟ್ಟುಕೊಂಡ ಕಾರಣ ಈ ಪರಿಸ್ಥಿತಿ ಬಂದಿದೆ. ಈತ ಶೌರ್ಯದ ಮೂವಿ ಮಾಡಿ ಕ್ರೌರ್ಯ ಮೆರೆದಿದ್ದಾನೆ. ಆತ ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು ಎಂದು ನಟ ದರ್ಶನ್ ಮಾವ ಟಿ ಎಲ್ ಶ್ರೀನಿವಾಸ್ ಪೊನ್ನಪೇಟೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಲೆ ಆಗಿರುವ ವ್ಯಕ್ತಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾವು ಎತ್ತಿ ಆಡಿಸಿ ಬೆಳೆಸಿದ ದರ್ಶನ್ ಕೊಲೆಯಲ್ಲಿ ಭಾಗಿರುವುದು ಬೇಸರವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಡಿ ಗ್ಯಾಂಗ್‌ನಲ್ಲಿ 19 ಮಂದಿ, ಇಂದು ಜೈಲಿಗೆ?, ಪರಪ್ಪನ ಅಗ್ರಹಾರದಲ್ಲಿನ ದರ್ಶನ್ ಆಪ್ತ ರೌಡಿಶೀಟರ್‌ಗಳು ಬೇರೆಡೆಗೆ!

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ದರ್ಶನ್ ಕ್ರೌರ್ಯ ಮೆರೆದಿದ್ದರು. ಸ್ನೇಹಿತರ ಜೊತೆ ಹೋಂ ಸ್ಟೇಯಲ್ಲಿ ಉಳಿದಿದ್ದ ದರ್ಶನ್, ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್ ನಿಂದ ಸುಟ್ಟು ಹಲ್ಲೆ ಮಾಡಿರುವ ಆರೋಪ‌ ಇದೆ ಎಂದು ದರ್ಶನ್ ಹುಟ್ಟೂರು ಪೊನ್ನಂಪೇಟೆಯಲ್ಲಿ ಕೆಲವು ಸ್ಥಳೀಯರು ಆರೋಪಿಸಿದ್ದಾರೆ.

click me!