
ಬೆಂಗಳೂರು (ಮೇ.28): ವೈಯಕ್ತಿಕ ಕಾರಣ ಹಿನ್ನಲೆಯಲ್ಲಿ ಮಾಜಿ ಭೂಗತ ದೊರೆ, ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೂ ಉದ್ಯಮಿ ಶ್ರೀನಿವಾಸ್ ನಾಯ್ಡು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಗರದ ಲ್ಯಾವೆಲ್ಲೆ ರಸ್ತೆಯ ಖಾಜಿ ಬಾರ್ ಆ್ಯಂಡ್ ಕಿಚನ್ ರೆಸ್ಟೋರೆಂಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಖಾಜಿ ರೆಸ್ಟೋರೆಂಟ್‌ಗೆ ಶುಕ್ರವಾರ ಊಟಕ್ಕೆ ರೈ ಹಾಗೂ ನಾಯ್ಡು ತೆರಳಿದ್ದಾಗ ಈ ಗಲಾಟೆ ನಡೆದಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ದೂರುಗಳ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಯ್ಡು ಡಿಚ್ಚಿ, ರಿಚ್ಚಿ ಪಂಚ್: ಹಲವು ದಿನಗಳಿಂದ ಹಣಕಾಸು ವಿಚಾರವಾಗಿ ರಿಕ್ಕಿ ರೈ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಮಧ್ಯೆ ಮನಸ್ತಾಪವಿದೆ. ಇದೇ ಹಗೆತನದಲ್ಲಿ ಆಗಾಗ್ಗೆ ಜಗಳಗಳು ಸಹ ನಡೆದಿದ್ದವು. ಕೆಲ ತಿಂಗಳ ಹಿಂದೆ ನಾಯ್ಡು ಮನೆ ಆವರಣದಲ್ಲಿ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿ ರಿಕ್ಕಿ ದುಂಡಾವರ್ತನೆ ತೋರಿದ್ದ. ಈ ಕೃತ್ಯದ ಬಗ್ಗೆ ತನಿಖೆ ನಡೆಸಿ ರಿಕ್ಕಿ ಹಾಗೂ ಆತನ ಸಹಚರರ ವಿರುದ್ಧ ನ್ಯಾಯಾಲಯಕ್ಕೆ ಸದಾಶಿವನಗರ ಠಾಣೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ತಮ್ಮ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡ ಸಿದ್ದು: ಬಿ.ಕೆ.ಹರಿಪ್ರಸಾದ್ ಆಕ್ರೋಶ
ಹೀಗಿರುವಾಗ ಲ್ಯಾವೆಲ್ಲೆ ರಸ್ತೆಯ ಖಾಜಿ ಬಾರ್ ಆ್ಯಂಡ್ ಕಿಚನ್ ರೆಸ್ಟೋರೆಂಟ್‌ಗೆ ತಮ್ಮ ಸ್ನೇಹಿತರ ಜತೆ ರಿಕ್ಕಿ ಊಟಕ್ಕೆ ತೆರಳಿದ್ದ. ಕೆಲ ಹೊತ್ತಿನ ಬಳಿಕ ಅದೇ ರೆಸ್ಟೋರೆಂಟ್‌ಗೆ ಶ್ರೀನಿವಾಸ್ ನಾಯ್ಡು ಸಹ ಹೋಗಿದ್ದಾನೆ. ಆ ವೇಳೆ ರಿಕ್ಕಿ ನೋಡಿದ ನಾಯ್ಡು, ಆತನನ್ನು ಗುರಾಯಿಸಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ರಿಕ್ಕಿಗೆ ನಾಯ್ಡು ಡಿಚ್ಚಿ ಹೊಡೆದರೆ, ನಾಯ್ಡುಗೆ ಮುಖಕ್ಕೆ ರಿಕ್ಕಿ ಪಂಚ್ ಮಾಡಿದ್ದಾನೆ. ಕೂಡಲೇ ರೆಸ್ಟೋರೆಂಟ್ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ.
ಬಿಬಿಎಂಪಿಗೆ ಸಾಲ ಕೊಡಲು ಬ್ಯಾಂಕ್‌ಗಳ ಹಿಂದೇಟು: ಕಾರಣವೇನು?
ಅಷ್ಟರಲ್ಲಿ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಇಬ್ಬರಿಗೂ ಗಲಾಟೆ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ತನ್ನ ಕಾರು ಚಾಲಕ ಸೋಮಶೇಖರ್ ಮೂಲಕ ಕಬ್ಬನ್ ಪಾರ್ಕ್ ಠಾಣೆಗೆ ರಿಕ್ಕಿ ರೈ ದೂರು ಸಲ್ಲಿಸಿದ್ದಾನೆ. ವಕೀಲರ ಜತೆ ಬಂದು ಪೊಲೀಸರಿಗೆ ನಾಯ್ಡು ದೂರು ಕೊಟ್ಟಿದ್ದಾರೆ. ಈ ದೂರು-ಪ್ರತಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ