
ಕಲಬುರಗಿ (ಮೇ.28) : ತವರು ಮನೆಯಿಂದ ಹಣ, ಬಂಗಾರ ತರುವಂತೆ ಗಂಡ, ಅತ್ತೆ ಮತ್ತು ನಾದಿನಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಬಗ್ಗೆ ತಾಡತೆಗನೂರ ಗ್ರಾಮದ ಶೋಭಾ ಗುರುರಾಜ ಸುತಾರ (35) ಅವರು ಫರತಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
10 ವರ್ಷಗಳ ಹಿಂದೆ ಗುರುರಾಜ ಸುತಾರ(Gururaj sutar) ಜೊತೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿವೆ. ಮನೆ ಕಟ್ಟಲು, ಜಾಗ ಖರೀದಿಸಲು ಮತ್ತು ಬೈಕ್ ಕೊಳ್ಳಲು ತನ್ನ ಸಹೋದರ 2.35 ಲಕ್ಷ ರುಪಾಯಿಗಳನ್ನು ತನ್ನ ಪತಿಗೆ ನೀಡಿದ್ದಾನೆ. ಇಷ್ಟಾದರೂ ಇನ್ನೂ ತವರು ಮನೆಯಿಂದ 1 ಲಕ್ಷ ರು.ನಗದು, ಬಂಗಾರ ತರುವಂತೆ ಪತಿ ಗುರುರಾಜ, ಅತ್ತೆ ಮಲ್ಲಮ್ಮ, ಮೈದುನ ಅಪ್ಪಾಸಾಬ ಮತ್ತು ನಾದಿನಿಯರಾದ ರೇಖಾ, ರಮಾದೇವಿ, ಸಂಗೀತಾ, ನೆಗೆಣ್ಣಿ ಕಾವೇರಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ವರದಕ್ಷಿಣೆ ಕಿರಕುಳ, ಮಹಿಳಾ ಟೆಕಿ ಆತ್ಮಹತ್ಯೆ
ಇನ್ನೊಂದು ಪ್ರಕರಣದಲ್ಲಿ ಕೋರಂಟಿ ಹನುಮಾನ ಮಂದಿರ ಹತ್ತಿರದ ಕೋಟನೂರ ದರಿಯಾಪುರ ನಿವಾಸಿ ಸಂಧ್ಯಾಲತಾ ಪ್ರವೀಣಕುಮಾರ (34) ಅವರು ಪತಿ ಪ್ರವೀಣಕುಮಾರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮದುವೆ ಸಂದರ್ಭದಲ್ಲಿ 5 ತೊಲೆ ಬಂಗಾರ, 2 ಲಕ್ಷ ರೂ.ನಗದು ಕೊಟ್ಟಿದ್ದರೂ ತವರು ಮನೆಯಿಂದ ಇನ್ನೂ ಹಣತರುವಂತೆ ಪತಿ, ಅತ್ತೆ, ಮಾವ ಮತ್ತು ಕಿರುಕುಳ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೆ.ಕೆ.ನಗರದ ನಾಗರತ್ನ ಅಶೋಕ ಗುತ್ತೇದಾರ (35) ಅವರು ಗಂಡ, ಅತ್ತೆ ಮತ್ತು ನಾದಿನಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಏನು ತಂದಿರುವುದಿಲ್ಲ ಎಂದು ಮಾನಸಿಕ, ದೈಹಿಕ ಕಿರುಕುಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಫರತಾಬಾದ, ಮಹಿಳಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕುಳ: ಪ್ರಕರಣ ದಾಖಲು
ಉಳ್ಳಾಲ: ಯುವತಿಯೊಬ್ಬಳಿಗೆ ಅಪರಿಚಿತ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಭಗವತೀ ದೇವಸ್ಥಾನ ಬಳಿ ಶುಕ್ರವಾರ ತಡರಾತ್ರಿ ನಡೆದಿದ್ದು, ಸಂತ್ರಸ್ತೆ ಯುವತಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ್ನ ವಿಡಿಯೋ ಇಟ್ಟುಕೊಂಡು ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿತ
ಸಂತ್ರಸ್ತೆ ಯುವತಿ ಬಸ್ತಿಪಡ್ಪು ತನ್ನ ನಿವಾಸದಿಂದ ಭಗವತಿ ದೇವಸ್ಥಾನ ದ ಒಳರಸ್ತೆಯಾಗಿ ನಡೆದುಕೊಂಡು ಬರುತ್ತಿದ್ದಾಗ ಕಬ್ಬಿಣದ ಕಪಾಟು ತಯಾರು ಮಾಡುವ ಅಂಗಡಿ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿ ಈಕೆ ಬಳಿ ಬೈಕ್ ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ