ವಿಜಯಪುರ: ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣ, ಆರೋಪಿ ಸೊಹೇಲ್ ಜಮಾದಾರ್ ಹೆಡೆಮುರಿ ಕಟ್ಟಿದ ಪೊಲೀಸ್‌!

By Girish Goudar  |  First Published Oct 3, 2024, 8:10 PM IST

ಖದೀಮ ಸೋಹೆಲ್ ಜಮಾದಾರ್ ಕೋಮು ಗಲಭೆ ಸೃಷ್ಟಿಸಲು ಕಲ್ಲು ಎಸೆದಿದ್ದನು. ಗಾಂಧಿ ಚೌಕ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡ ಸೊಹೇಲ್ ನನ್ನ ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಸೊಹೇಲ್ ಸ್ನೇಹಿತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಪೊಲೀಸುರ ಬಲೆ ಬೀಸಿದ್ದಾರೆ. 

ವಿಜಯಪುರ(ಅ.03):  ನಗರದ ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 10 ಗಂಟೆಯಲ್ಲೇ ಗಾಂಧಿಚೌಕ ಪೊಲೀಸರು ಪ್ರಕರಣವನ್ನ ಭೇದಿಸಿದ್ದಾರೆ. ಈ ಸಂಬಂಧ ಸೊಹೇಲ್ ಜಮಾದಾರ್ (21) ಎಂಬಾತನನ್ನ ಬಂಧಿಸಿದ್ದಾರೆ.

ಖದೀಮ ಸೋಹೆಲ್ ಜಮಾದಾರ್ ಕೋಮು ಗಲಭೆ ಸೃಷ್ಟಿಸಲು ಕಲ್ಲು ಎಸೆದಿದ್ದನು. ಗಾಂಧಿ ಚೌಕ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡ ಸೊಹೇಲ್ ನನ್ನ ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಸೊಹೇಲ್ ಸ್ನೇಹಿತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಪೊಲೀಸುರ ಬಲೆ ಬೀಸಿದ್ದಾರೆ. 

Latest Videos

undefined

ಮಹಾರಾಷ್ಟ್ರದಲ್ಲಿಯು ಮೊಳಗಿದ ಕನ್ನಡ ಕಹಳೆ: ಕನ್ನಡ ಸಂಭ್ರಮ-50ಕ್ಕೆ ಸಾಕ್ಷಿಯಾದ ದಾನಮ್ಮ ದೇವಿಯ ಕ್ಷೇತ್ರ!

ಘಟನೆ ನಡೆದ ಬೆನ್ನಲ್ಲೇ ಎಸ್ಪಿ ಹೃಷಿಕೇಶ್ ಸೋನಾವಣೆ ಅವರು ಸಿಪಿಐ ತಳಕೇರಿ ನೇತೃತ್ವದಲ್ಲಿ ತಂಡವೊಂದನ್ನ ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೃತ್ಯದ ವೇಳೆ ಬಳಸಿದ್ದ ಆಟೋ ನಂಬರ್ ಮೂಲಕ ಆರೋಪಿಯನ್ನ ಪತ್ತೆ ಮಾಡಿದ್ದಾರೆ. 

ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಗಣಪತಿ ಚೌಕ್ ಮೇಲೆ ಆರೋಪಿ ಸೊಹೇಲ್ ಜಮಾದಾರ್ ಕಲ್ಲು ಎಸೆದಿದ್ದ. ಕುಡಿದ ನಶೆಯಲ್ಲಿದ್ದ ಖದೀಮರು ಕಲ್ಲು ತೂರಿ, ಸ್ಥಳದಲ್ಲಿದ್ದ ಹೋಮ್‌ಗಾರ್ಡ್‌ಗೆ ಅವಾಚ್ಯವಾಗಿ ನಿಂದಿಸಿದ್ದರು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಸ್ಪಿ ಹೃಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. 

click me!