ಬೆಂಗಳೂರು: ಗೆಳತಿಗಾಗಿ ಬಾಲ್ಯ ಸ್ನೇಹಿತನನ್ನೇ ಇಟ್ಟಿಗೆಯಲ್ಲಿ ಜಜ್ಜಿ ಕೊಲೆಗೈದ..!

Published : Sep 22, 2024, 08:39 AM IST
ಬೆಂಗಳೂರು: ಗೆಳತಿಗಾಗಿ ಬಾಲ್ಯ ಸ್ನೇಹಿತನನ್ನೇ ಇಟ್ಟಿಗೆಯಲ್ಲಿ ಜಜ್ಜಿ ಕೊಲೆಗೈದ..!

ಸಾರಾಂಶ

ವರುಣ್ ಹುಟ್ಟುಹಬ್ಬದ ನಿಮಿತ್ತ ಆತನ ಮನೆಗೆ ಶುಕ್ರವಾರ ರಾತ್ರಿ ಬಂದಿದ್ದ ದಿವೇಶ್‌, ರಾತ್ರಿ ಪಾರ್ಟಿ ಬಳಿಕ ಗೆಳೆಯನ ಮನೆಯಲ್ಲೇ ಇದ್ದ. ಆಗ ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. 

ಬೆಂಗಳೂರು(ಸೆ.22): ಮಾಟ ಮಂತ್ರ ಮಾಡಿ ಗೆಳೆತಿಯನ್ನು ಒಲಿಸಿಕೊಂಡಿದ್ದಾನೆ ಎಂದು ಸಿಟ್ಟಿಗೆದ್ದು ತನ್ನ ಬಾಲ್ಯದ ಗೆಳೆಯನನ್ನು ಹುಟ್ಟುಹಬ್ಬದ ದಿನವೇ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್‌ (24) ಹತ್ಯೆಯಾದ ದುರ್ದೈವಿ. ಈ ಕೊಲೆ ಕೃತ್ಯ ಎಸಗಿದ ಸ್ನೇಹಿತ ದಿವೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ಹುಟ್ಟುಹಬ್ಬದ ನಿಮಿತ್ತ ಆತನ ಮನೆಗೆ ಶುಕ್ರವಾರ ರಾತ್ರಿ ಬಂದಿದ್ದ ದಿವೇಶ್‌, ರಾತ್ರಿ ಪಾರ್ಟಿ ಬಳಿಕ ಗೆಳೆಯನ ಮನೆಯಲ್ಲೇ ಇದ್ದ. ಆಗ ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

News Hour: ಫ್ರೀಡ್ಜ್​ನಲ್ಲಿ ಮಹಿಳೆಯ 50-60 ಪೀಸ್..!

ಉಡುಪಿ ಜಿಲ್ಲೆ ಕುತ್ಪಡಿ ಗ್ರಾಮದ ವರುಣ್ ಕೋಟ್ಯಾನ್ ಹಾಗೂ ಆರೋಪಿ ದಿವೇಶ್ ಬಾಲ್ಯ ಸ್ನೇಹಿತರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜಯನಗರ ಸಮೀಪದ ಗೆದ್ದಲಹಳ್ಳಿಯಲ್ಲಿ ವರುಣ್ ವಾಸವಾಗಿದ್ದ. ಈ ಗೆಳೆಯರಿಗೆ ಬಾಲ್ಯದ ಸ್ನೇಹಿತೆ ಇದ್ದು, ಕೆಲ ದಿನಗಳಿಂದ ವರುಣ್‌ ಜತೆ ಆಕೆ ಆತ್ಮೀಯವಾಗಿದ್ದಳು. ಈ ವಿಚಾರ ತಿಳಿದು ಗೆಳೆಯನ ಮೇಲೆ ದಿವೇಶ್ ಅಸಮಾಧಾನಗೊಂಡಿದ್ದ.

ವರುಣನ ಹುಟ್ಟಹಬ್ಬದ ಆಚರಣೆಗೆ ಶುಕ್ರವಾರ ರಾತ್ರಿ ಆತನ ಗೆಳತಿ, ದಿವೇಶ್ ಹಾಗೂ ದೀಕ್ಷಿತ್‌ ಮನೆಗೆ ಬಂದಿದ್ದರು. ಬಳಿಕ ಈ ನಾಲ್ವರು ಸ್ನೇಹಿತರು ಮನೆಯಿಂದ ಹೊರ ಹೋಗಿ ಬರ್ತ್‌ ಡೇ ಪಾರ್ಟಿ ಮುಗಿಸಿ ಮತ್ತೆ ವರುಣ್‌ ಮನೆಗೆ ಬಂದಿದ್ದರು. ಆಗ ರೂಮ್‌ನಲ್ಲಿ ಇವರ ಸ್ನೇಹಿತೆ ಮಲಗಿದರೆ, ಮತ್ತೊಂದು ರೂಮ್‌ನಲ್ಲಿ ಮೂವರು ಗೆಳೆಯರು ನಿದ್ರೆ ಜಾರಿದ್ದರು. ಆ ವೇಳೆ ಸ್ನೇಹಿತೆ ವಿಚಾರವಾಗಿ ವರುಣ್‌ ಮತ್ತು ದಿವೇಶ್ ಮಧ್ಯೆ ಜಗಳ ಶುರುವಾಗಿದೆ. ಕೊನೆಗೆ ಮತ್ತೊಬ್ಬ ಸ್ನೇಹಿತ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದ್ದ. ಮುಂಜಾನೆ ನಿದ್ರೆಯಿಂದ ಎದ್ದಾಗ ಮತ್ತೆ ವರುಣ್ ಹಾಗೂ ದಿವೇಶ್ ಮಧ್ಯೆ ಜಗಳ ಆರಂಭವಾಗಿದೆ. ನೀನು ಮಾಟ ಮಂತ್ರ ಮಾಡಿ ಆಕೆಯನ್ನು ವಶೀಕರಣ ಮಾಡಿಕೊಂಡಿದ್ದೀಯಾ ಎಂದು ದಿವೇಶ್ ಕೂಗಾಡಿದ್ದಾನೆ. ಆಗ ತಳ್ಳಾಟ ನೂಕಾಟ ಮಾಡಿಕೊಂಡು ಮನೆಯಿಂದ ಇಬ್ಬರು ಹೊರಗೆ ಬಂದಿದ್ದಾರೆ. ಈ ಹಂತದಲ್ಲಿ ಸಿಟ್ಟಿಗೆದ್ದ ದಿವೇಶ್‌, ಮನೆ ಮುಂದೆ ಬಿದ್ದಿದ್ದ ಸಿಮೆಂಟ್‌ ಇಟ್ಟಿಗೆ ತೆಗೆದುಕೊಂಡು ವರುಣ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ವರುಣ್ ಕೊನೆಯುಸಿರೆಳೆದಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ದಿವೇಶ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹತ್ಯೆ ವೇಳೆ ಮನೆಯಲ್ಲೇ ಇದ್ದ ಗೆಳತಿ

ತನ್ನ ಸ್ನೇಹದ ವಿಚಾರವಾಗಿ ಬಾಲ್ಯದ ಗೆಳೆಯರು ಪರಸ್ಪರ ಬಡಿದಾಡಿಕೊಳ್ಳುವ ವೇಳೆ ಅದೇ ಮನೆಯಲ್ಲಿ ಸ್ನೇಹಿತೆ ನಿದ್ರೆ ಮಾಡುತ್ತಿದ್ದಳು. ಹತ್ಯೆ ವಿಚಾರ ತಿಳಿದ ಕೂಡಲೇ ಭೀತಿಗೊಂಡು ಆಕೆ ತನ್ನ ಮನೆಗೆ ತೆರಳಿದ್ದಳು. ಬಳಿಕ ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ನಿರ್ದೋಷಿ ಎಂಬುದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Chikkaballapur: ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ
₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ