ಹಿಂದೂಗಳ ಹತ್ಯೆಗೆ ದಾವಣಗರೆ ಗಣೇಶ ಉತ್ಸವದಲ್ಲಿ ಸಂಚು..!

By Kannadaprabha News  |  First Published Sep 22, 2024, 7:40 AM IST

ಗಣೇಶ ಮೆರವಣಿಗೆಯನ್ನು ಅವಮಾನಿಸಿ, ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ 80-100 ಜನ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಆಘಾತಕಾರಿಸಂಗತಿಯು ಇದೀಗ ಹೊರ ಬಿದ್ದಿದೆ. ಗಣೇಶ ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಸಂಚಿನೊಂದಿಗೆ ಅನ್ನ ಕೋಮಿನ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಸ್ಫೋಟಕ ವಿಚಾರವು ಸ್ವತಃ ಪೊಲೀಸ್ ಇಲಾಖೆಯ ಕಾನ್ ಸ್ಟೇಬಲ್ ಇಲ್ಲಿನ ಬಸವನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಬಯಲಾಗಿದೆ. 


ದಾವಣಗೆರೆ(ಸೆ.22): ದಾವಣಗೆರೆಯಲ್ಲಿ ಗುರುವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದೆ. ಅಂದು ಗಣೇಶೋತ್ಸವ ಮೆರವಣಿಗೆಯನ್ನು ಅವಮಾನಿಸಿ, ಮೆರವಣಿಗೆ ಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದಲೇ 70-80 ಅನ್ಯ ಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು ಎಂಬ ವಿಚಾರ ಪೊಲೀಸ್ ಎಫ್ ಐಆರ್‌ನಲ್ಲಿ ದಾಖಲಾಗಿದೆ. 

ಗಣೇಶ ಮೆರವಣಿಗೆಯನ್ನು ಅವಮಾನಿಸಿ, ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ 80-100 ಜನ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಆಘಾತಕಾರಿಸಂಗತಿಯು ಇದೀಗ ಹೊರ ಬಿದ್ದಿದೆ. ಗಣೇಶ ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಸಂಚಿನೊಂದಿಗೆ ಅನ್ನ ಕೋಮಿನ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಸ್ಫೋಟಕ ವಿಚಾರವು ಸ್ವತಃ ಪೊಲೀಸ್ ಇಲಾಖೆಯ ಕಾನ್ ಸ್ಟೇಬಲ್ ಇಲ್ಲಿನ ಬಸವನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಬಯಲಾಗಿದೆ. 

Tap to resize

Latest Videos

undefined

ಪ್ಯಾಲೆಸ್ತೀನ್ ಧ್ವಜ ಹಾರಿಸುವ ದೇಶದ್ರೋಹಿಗಳನ್ನ ಹಿಡಿದು ಮುಸ್ಲಿಮರು ದೇಶಭಕ್ತಿ ಮೆರೆಯಲಿ

ಬಸವ ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಫಕೃದ್ದೀನ್ ಅಲಿ ಸೆ.19ರಂದು ಸಂಜೆ ಕೆಆರ್ ರಸ್ತೆಯ ಮುದೇಗೌಡ ಮಲ್ಲಮ್ಮ ಮುರಿಗೆಪ್ಪ ಪ್ರೌಢಶಾಲೆ ಪಕ್ಕದ ಪಾರ್ಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 70-80 ಜನ ಮುಸ್ಲಿಂ ಯುವಕರ ಗುಂಪು ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳ 13ನೇ ದಿನದ ವಿಸರ್ಜನಾ ಮೆರವ ಣಿಗೆಗಳು ಇದ್ದ ದಿನ ಮೆರವಣಿಗೆಗೆ ಅವಮಾ ನಿಸಲು, ಮೆರವಣಿಗೆಯಲ್ಲಿದ್ದವರ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಕೆಆರ್‌ರಸ್ತೆ, ಚೌಕಿಪೇಟೆಗಲ್ಲಿ ಅಂದು ಸಂಜೆ ಮೆರಣಿಗೆಗಳ ಬಂದೋಬಸ್ತ್ನಲ್ಲಿರುವಾಗ ಕೆಆರ್‌ ರಸ್ತೆಯಲ್ಲಿದ್ದಾಗ ಆರಳಿ ಮರ ವೃತ್ತದ ಕಡೆಯಿಂದ ಬಂದ ವೆಂಕಾ ಭೋವಿಕಾಲನಿಯ ಕಂಟಮ್ಮದೇವಿ ಯುವಕರ ಸಂಘದ ಮೆರವಣಿಗೆ ಸಂಜೆ ಕೆಆರ್‌ ರಸ್ತೆಯ ಜಗಳೂರು ಬಸ್ಸು ಸಿಬ್ಬಂದಿಗೂ ಕಲ್ಲಿನೇಟು ಬಿದ್ದು, ಚಿಕ್ಕಪುಟ್ಟ ಗಾಯಗಳಾಗಿವೆ. 

ತಕ್ಷಣ ಗುಂಪನ್ನು ಚೆದುರಿಸಿ, ಮೆರವಣಿಗೆ ಮುಂದೆ ಸಾಗಿಸಲಾಯಿತು. ಗಲಾಟೆ ಮಾಡಿದ ಯುವಕರು ಮುಸ್ಲಿಂ ಕೋಮಿಗೆ ಸೇರಿದವರಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಧಾರ್ಮಿಕ ಶ್ರದ್ಧೆಯನ್ನು ಅವಮಾನಿಸುವ ಉದ್ದೇಶದಿಂದ ಹಾಗೂ ಮೆರವಣಿಗೆಯಲ್ಲಿದ್ದವರನ್ನು ಕೊಲೆ ಮಾಡುವ ಉದ್ದೇಶದಿಂದ ನಿಲ್ದಾಣದ ಪಕ್ಕ ವಾಟರ್‌ಟ್ಯಾಂಕ್ ಸಮೀಪ ಬರುತ್ತಿದ್ದಂತೆಯೇ ನರಸರಾಜ ಪೇಟೆ ಮುಖ್ಯ ರಸ್ತೆ ಕಡೆಯಿಂದ ಬಂದ ಸುಮಾರು 70-80 ಮುಸ್ಲಿಂ ಯುವಕರು ಏಕಾಏಕಿ ಮೆರವಣಿಗೆ ಕಡೆಗೆ ಕಲ್ಲು ತೂರಿದರು ಎಂದು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಪ್ರಚೋದನಾಕಾರಿಯಾಗಿ ಕಲ್ಲು ತೂರಾಟ ಮಾಡಿರುವದು ತಿಳಿದು ಬಂದಿದೆ ಎಂದು ಅವರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ. 

ಗಲಾಟೆ ಮಾಡಿ, ಕಲ್ಲು ತೂರಾಟ ನಡೆಸಿದ ಪ್ರಮುಖ 10 ಜನರ ಜೊತೆಗೆ ಇತರೆ ಸುಮಾರು 70-80 ಯುವಕರ ಗುಂಪು ಇದ್ದು, ಅವರನ್ನು ಮರಳಿ ನೋಡಿದರೆ ಗುರುತಿಸಬಹುದು. ಕಲ್ಲು ತೂರಾಟ ಮಾಡಿದವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಸವ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಹೆಡ್ ಕಾನ್‌ಸ್ಟೆಬಲ್ ಫಕೃದ್ದೀನ್ ಅಲಿ ಮನವಿ ಮಾಡಿದ್ದಾರೆ. ಹೆಡ್ ಕಾನ್ಸ್‌ ಟೇಬಲ್ ದೂರಿಗೆ ಸಂಬಂಧಿಸಿದಂತೆ ಮಾಹಿತಿ ಮಾಧ್ಯಮಗಳ ಲಭ್ಯವಾಗಿದ್ದು, ಸ್ವತಃ ಮಾಧ್ಯಮದವರನ್ನೂ ಬೆಚ್ಚಿ ಬೀಳಿಸಿದೆ.

click me!