ಬೆಂಗಳೂರು: ತನ್ನ ಆಟೋ ಹತ್ತಿದವರ ಮನೆ ದೋಚಿದವ ಅರಸ್ಟ್‌

Published : Jan 22, 2025, 11:54 AM IST
ಬೆಂಗಳೂರು: ತನ್ನ ಆಟೋ ಹತ್ತಿದವರ ಮನೆ ದೋಚಿದವ ಅರಸ್ಟ್‌

ಸಾರಾಂಶ

ಆರೋಪಿ ಸತೀಶ್ ಮೂಲತಃ ತಮಿಳುನಾಡು ರಾಜ್ಯದ ವೆಲ್ಲೂರಿನವನಾಗಿದ್ದು, ತನ್ನ ತಾಯಿ ಹಾಗೂ ಅಣ್ಣನ ಜತೆ ಕಾವೇರಿಪುರದಲ್ಲಿ ಆತ ವಾಸವಾಗಿದ್ದ. ಉಬರ್ ಹಾಗೂ ಓಲಾಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಸತೀಶ್, ಈಗ ಸುಲಭ ವಾಗಿ ಹಣ ಸಂಪಾದನೆಗೆ ಮನೆ ಕಳ್ಳತನ ಕೃತ್ಯಕ್ಕಿಳಿದುಪರಪ್ಪನ ಅಗ್ರಹಾರಕೇಂದ್ರ ಕಾರಾಗೃಹ ಸೇರುವಂತಾಗಿದೆ. 

ಬೆಂಗಳೂರು(ಜ.22): ತಾನು ಬಾಡಿಗೆ ಹೋಗುವ ಗ್ರಾಹಕರ ಬಗ್ಗೆ ಮಾಹಿತಿ ಪಡೆದು ಬಳಿಕ ಅವರ ಮನೆಗೆ ಕನ್ನ ಹಾಕುತ್ತಿದ್ದ ಚಾಲಾಕಿ ಉಬರ್‌ ಆಟೋ ಚಾಲಕನೊಬ್ಬ ಚಂದ್ರಾ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾಮಾಕ್ಷಿಪಾಳ್ಯ ಸಮೀಪದ ಕಾವೇರಿಪುರದ ನಿವಾಸಿ ಸತೀಶ್ ಬಂಧಿತನಾಗಿದ್ದು, ಆರೋಪಿಯಿಂದ 237 ಗ್ರಾಂ ಚಿನ್ನಾಭರಣ ಹಾಗೂ 47 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಕೆಲ ದಿನಗಳ ಹಿಂದೆ ಭೈರವೇಶ್ವರ ನಗರದಲ್ಲಿ ಅಕ್ಕಸಾಲಿಗರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟ‌ರ್ ಭರತ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆಟೋ ಚಾಲಕನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪಾಕಿಸ್ತಾನದವನನ್ನ ಮದುವೆಯಾಗಲು ಹೊರಟಿದ್ದವಳು ಹೆಣವಾದಳು: ನ್ಯೂ ಇಯರ್​​ ಪಾರ್ಟಿಯಲ್ಲಿ ನಡೆದಿದ್ದೇನು?

ಆಟೋ ಬುಕ್ ಮುನ್ನ ಎಚ್ಚರವಾಗಿರಿ: 

ಆರೋಪಿ ಸತೀಶ್ ಮೂಲತಃ ತಮಿಳುನಾಡು ರಾಜ್ಯದ ವೆಲ್ಲೂರಿನವನಾಗಿದ್ದು, ತನ್ನ ತಾಯಿ ಹಾಗೂ ಅಣ್ಣನ ಜತೆ ಕಾವೇರಿಪುರದಲ್ಲಿ ಆತ ವಾಸವಾಗಿದ್ದ. ಉಬರ್ ಹಾಗೂ ಓಲಾಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಸತೀಶ್, ಈಗ ಸುಲಭ ವಾಗಿ ಹಣ ಸಂಪಾದನೆಗೆ ಮನೆ ಕಳ್ಳತನ ಕೃತ್ಯಕ್ಕಿಳಿದುಪರಪ್ಪನ ಅಗ್ರಹಾರಕೇಂದ್ರ ಕಾರಾಗೃಹ ಸೇರುವಂತಾಗಿದೆ. 

ಮುಂಜಾನೆ ವೇಳೆ ಆಟೋ ಬುಕ್ ಮಾಡುವ ಗ್ರಾಹಕರನ್ನು ಬಸ್ ನಿಲ್ದಾಣಕ್ಕೆ ಬಿಟ್ಟ ನಂತರ ಮರುದಿನ ಆ ಗ್ರಾಹಕರ ಮನೆಗೆ ಕನ್ನ ಹಾಕಿ ಕೈಗೆ ಸಿಕ್ಕಿದ್ದನ್ನು ಸತೀಶ್ ದೋಚುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಂದ್ರಾಲೇಔಟ್‌ನ ಭೈರವೇಶ್ವರ ನಗರದಲ್ಲಿ ಅಕ್ಕಸಾಲಿಗರಾದ ಪ್ರೀತಿ ಕುಟುಂಬ ನೆಲೆಸಿದೆ. ಜ.1 ರಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ತಮ್ಮ ಪತಿ ಭೇಟಿಗೆ ಅವರು ತೆರಳಬೇಕಿತ್ತು. ಆಗ ಬಸ್ ನಿಲ್ದಾಣಕ್ಕೆ ಹೋಗಲು ಉಬರ್ ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿದಾಗ ಆ ಅರ್ಡರ್ ಅನ್ನು ಓಕೆ ಮಾಡಿ ಸತೀಶ್ ತೆರಳಿದ್ದ. ಆದರೆ ಕೊನೆ ಕ್ಷಣದಲ್ಲಿ ತಮ್ಮ ಯೋಜನೆ ಬದಲಿಸಿದ ಪ್ರೀತಿ, ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ತಾನು ಕಾರಿನಲ್ಲೇ ಸಾಗರಕ್ಕೆ ಹೋಗಬೇಕಿದೆ. ನಿಮಗೆ ಯಾರಾದರೂ ಪರಿಚಯ ಸ್ಥರಿದ್ದರೆ ತಿಳಿಸುವಂತೆ ಕೋರಿದ್ದರು. 

ಕೊನೆಗೆ ತನ್ನ ಸ್ನೇಹಿತನ ಕಾರಿನಲ್ಲಿ ಅವರನ್ನು ಸತೀಶ್ ಕಳುಹಿಸಿಕೊಟ್ಟಿದ್ದ. ಇನ್ನು ಪ್ರೀತಿ ಅವರನ್ನು ಬಸ್ ನಿಲ್ದಾಣಕ್ಕೆ ಕರೆದು ಕೊಂಡು ಬಿಡಲು ತೆರಳಿದ್ದಾಗ ಅವರ ಮನೆಯ ಪರಿಸ್ಥಿತಿಯನ್ನು ಆತ ತಿಳಿದುಕೊಂಡಿದ್ದ. ಮರು ದಿನ ಅವರ ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ತನ್ನೂರು ತಮಿಳುನಾಡಿಗೆ ಸತೀಶ್ ಪರಾರಿಯಾಗಿದ್ದ. 

ಜ.3 ರಂದುಮನೆಗೆ ಮರಳಿದಾಗ ಕಳ್ಳತನ ಬಗ್ಗೆ ಪ್ರೀತಿ ಅವರಿಗೆ ಗೊತ್ತಾಯಿತು. ಬಳಿಕ ಚಂದ್ರಾ ಲೇಔಟ್ ಠಾಣೆಗೆ ಅವರು ದೂರು ನೀಡಿದರು. ಅಂತಿಮವಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಾಡಹಗಲೇ ಬೀಗ ಮುರಿಯುತ್ತಿದ್ದ ಮನೆಗಳ ಬಂಧನ: ಚಿನ್ನಾಭರಣ ವಶ 

ಬೆಂಗಳೂರು: ಇತ್ತೀಚೆಗೆ ಹಾಡಹಗಲೇ ಮನೆ ಯೊಂದರ ಬೀಗ ಮುರಿದು ನಗದು ಹಾಗೂ ಚಿನ್ನಾ ಭರಣ ಕಳವು ಮಾಡಿದ್ದ ಆರೋಪಿಯನ್ನು ಬೊಮ್ಮನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 2.50 ಲಕ್ಷ ರು. ಮೌಲ್ಯದ 42 ಗ್ರಾಂ ಚಿನ್ನಾಭರಣ, 137 ಗ್ರಾಂ ಬೆಳ್ಳಿವಸ್ತುಗಳು ಹಾಗೂ 2 ಸಾವಿರ ರು. ನಗದು ಜಪ್ತಿ ಮಾಡಲಾಗಿದೆ. 

ಒಂದೇ ವಾರದಲ್ಲಿ 10 ಭಯಾನಕ ಅಪರಾಧ, ಉತ್ತರದಿಂದ ದಕ್ಷಿಣವರೆಗೂ ದರೋಡೆ: ಕರ್ನಾಟಕದಲ್ಲಿ ಏನಾಗ್ತಿದೆ?

ಆನೇಕಲ್ ನಿವಾಸಿ ವೆಂಕಟೇಶ್ ಅಲಿಯಾಸ್ ವೆಂಕಿ (27) ಬಂಧಿತ ಕಳೆದ ಡಿ.12ರಂದು ವಿರಾಟ್ ನಗರದ ನಾಡಮ್ಮ ಲೇಔಟ್ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದರು. ಸಂಜೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾತ್ಮೀದಾರು ನೀಡಿದ ಮಾಹಿತಿ ಮೇರೆಗೆ ಇತ್ತೀಚೆಗೆ ಆಂಧ್ರಹಳ್ಳಿ 2ನೇಕ್ರಾಸ್ ನಲ್ಲಿ ವೆಂಕಟೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. 

ಠಾಣೆಯಲ್ಲಿ ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಹನುಮಂತನಗರದ ವಿದ್ಯಾಪೀಠ ಸರ್ಕಲ್‌ ಜುವೆಲರಿ ಅಂಗಡಿಯಲ್ಲಿ ಅಡಮಾನವಿರಿಸಿದ್ದ 30 ಗ್ರಾಂ ಚಿನ್ನಾಭರಣ, ಸಂಬಂಧಿಗೆ ನೀಡಿದ್ದ 12 ಗ್ರಾಂ ಚಿನ್ನಾಭರಣ ಮತ್ತು 137 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?