ಕೊಡಗು: ಹಸುವಿನ ಮೇಲೂ ಪೈಶಾಚಿಕ ಕೃತ್ಯ, ವಿಕೃತ ಕಾಮಿಯ ಬಂಧನ

By Girish Goudar  |  First Published Nov 29, 2022, 10:27 AM IST

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದ ಘಟನೆ 


ಕೊಡಗು(ನ.29):  ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಹೇಯ ಕೃತ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದಿದೆ. ನ. 27ರಂದು ಹೇಯ್ಯ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬ೦ಧನಕ್ಕೆ ಒಳಪಡಿಸಿದ್ದಾರೆ.

ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ. ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು ತಾವು ಸಂತೆಗೆ ಹೋಗಿ ವಾಪಾಸ್ಸು ಬರುವ ಸಂದರ್ಭ ತಮ್ಮ ಗದ್ದೆಯ ದಾರಿಯಲ್ಲಿ ಮೋಟಾರ್ ಬೈಕ್‌ ನಿಂತಿದ್ದನ್ನು ಗಮನಿಸಿದ್ದಾರೆ. ದೇವಯ್ಯ ಮನೆ ಹೋಗಿ ಮೇಯಲು ಬಿಟ್ಟಿದ್ದ ಹಸುವನ್ನು ವಾಪಾಸು ಕೊಟ್ಟಿಗೆಗೆ ತರಲು ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿ ಕೃತ್ಯ ಎಸಗುತ್ತಿರುವುದನ್ನು ನೋಡಿ ಆತನನ್ನು ಹಿಡಿದು ವಿಚಾರಿಸಿದಾಗ ಆತ  ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಎಂದು ತಿಳಿದ ಬಂದಿದೆ. 

Tap to resize

Latest Videos

undefined

ಬಾಲಕಿಯ ಮೇಲೆ ಕಣ್ಣು ಹಾಕಿದ ಕಾಮುಕನಿಗೆ ಗೂಸಾ

ಪೊಲೀಸರಿಗೆ ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಕಲಂ 377 ಪ್ರಕಾರ ಮೊಕದ್ದ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
 

click me!