
ಬೆಂಗಳೂರು(ಫೆ.01): ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ₹3 ಕೋಟಿ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೆಟ್‌ಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗುರಪ್ಪನಪಾಳ್ಯದ ಶೋಯೆಬ್ ಬಂಧಿತನಾಗಿದ್ದು, ಆರೋಪಿಯಿಂದ ₹3 ಕೋಟಿ ಮೌಲ್ಯದ ಇ-ಸಿಗರೆಟ್ ಜಪ್ತಿ ಮಾಡಲಾಗಿದೆ. ಎರಡು ವರ್ಷಗಳಿಂದ ಅಕ್ರಮವಾಗಿ ಇ-ಸಿಗರೆಟ್ ಮಾರಾಟದಲ್ಲಿ ಶೋಯೆಬ್ ತೊಡಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನ ಮನೆ ಮೇಲೆ ದಾಳಿ ನಡೆಸಿದಾಗ ಮಾಲಿನ ಸಮೇತ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರಾವಳಿಯ ಶಿಕ್ಷಣ ಕ್ಯಾಂಪಸ್‌ಗಳ ಸುತ್ತಮುತ್ತ ಮಾದಕದ್ರವ್ಯ ಘಾಟು..!
ದುಬೈನಿಂದ ಕೊರಿಯರ್ ಮೂಲಕ ಇ-ಸಿಗರೆಟ್?:
ಈ ಮೊದಲು ದುಬೈನಲ್ಲಿ ಕೆಲಸದಲ್ಲಿದ್ದ ಕೇರಳ ಮೂಲದ ಶೋಯೆಬ್, ಕೊರೋನಾ ವೇಳೆ ಕೆಲಸ ಕಳೆದುಕೊಂಡು ನಗರಕ್ಕೆ ಮರಳಿದ್ದ. ದುಬೈನಲ್ಲಿದ್ದಾಗ ಆತನಿಗೆ ಇ-ಸಿಗರೆಟ್ ಮಾರಾಟಗಾರರ ಜತೆ ಸಂಪರ್ಕವಿತ್ತು. ಬೆಂಗಳೂರಿಗೆ ಮರಳಿದ ಬಳಿಕ ನಗರದಲ್ಲಿ ಇ-ಸಿಗರೆಟ್‌ಗೆ ಒಳ್ಳೆಯ ಬೇಡಿಕೆ ಇದೆ ಎಂಬ ಮಾಹಿತಿ ತಿಳಿದ ಆತ, ದುಬೈನ ಸ್ನೇಹಿತರ ಮೂಲಕ ಇ-ಸಿಗರೆಟ್ ತರಿಸಿಕೊಂಡು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ.
ಕೆಲ ದಿನಗಳ ಹಿಂದೆ ಶೋಯೆಬ್‌ಗೆ ದುಬೈನಿಂದ ಕೊರಿಯರ್ ಮೂಲಕ ಸಿಗರೆಟ್ ಪಾರ್ಸಲ್ ಬಂದಿತ್ತು. ಚೆನ್ನೈ ವಿಮಾನ ನಿಲ್ದಾಣಕ್ಕೆ ಪಾರ್ಸಲ್ ಬಂದು ಅಲ್ಲಿಂದ ಶೋಯೆಬ್‌ಗೆ ಕೈ ಸೇರಿತ್ತು. ಹೀಗಾಗಿ ಈ ಕೊರಿಯರ್ ಕುರಿತು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳಿಂದ ಮಾಹಿತಿ ಕೋರಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ