* ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ್ ಗ್ರಾಮದಲ್ಲಿ ನಡೆದ ಘಟನೆ
* ಏ.13 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದ ಪ್ರಕರಣ
* ಈ ಸಂಬಂಧ ಖಡಕಲಾಟ್ ಠಾಣೆಯಲ್ಲಿ ಪ್ರಕರಣ ದಾಖಲು
ಚಿಕ್ಕೋಡಿ(ಏ.16): ಸಹೋದರ ಸಂಬಂಧಿಯ ಮಗಳನ್ನ ಚುಡಾಯಿಸಿದ ಅಂತ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೋರ್ವ ಚಾಕು ಇರಿದು ಕೊಲೆ(Murder) ಮಾಡಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ ಶಿರಗಾಂವ್ ಗ್ರಾಮದಲ್ಲಿ ನಡೆದಿದೆ. ಏ.13 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂತೋಷ್ ಅಪ್ಪಾಸಾಬ ತೇಲಿ(35) ಕೊಲೆಯಾದ ದುರ್ದೈವಿಯಾಗಿದ್ದಾನೆ. ಭೀಮಪ್ಪ ಮಗದುಮ್(32) ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕೊಲೆ ಭೀಕರ ದೃಶ್ಯ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭೀಮಪ್ಪನನ್ನ ಖಡಕಲಾಟ್ ಠಾಣಾ ಪೊಲೀಸರು(Police) ಬಂಧಿಸಿದ್ದಾರೆ(Arrest). ಈ ಸಂಬಂಧ ಖಡಕಲಾಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರೀ ಚಿನ್ನ, ಹಣದ ದುರಾಸೆಯಿಂದ ನಿವೃತ್ತ ಯೋಧನ ಹತ್ಯೆ, ಹಂತಕರಿಗೆ ಸಿಕ್ಕಿದ್ದು ಪುಡಿಗಾಸು!
ಪತ್ನಿ ಕೊಂದು ಠಾಣೆಗೆ ಬಂದು ಶರಣಾದ ಪತಿ
ಚಳ್ಳಕೆರೆ: ಪತ್ನಿಯ ಶೀಲಶಂಕಿಸಿ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಲ್ಲದೆ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ನಡೆದಿದೆ. ನನ್ನಿವಾಳ ಗ್ರಾಮದ ನೇತ್ರಾವತಿ(30) ಕೊಲೆಯಾದ ಮಹಿಳೆ(Woman). 36 ವರ್ಷದ ದ್ಯಾಮಣ್ಣ ಕೊಲೆ ಮಾಡಿದ ಆರೋಪಿ. 12 ವರ್ಷಗಳ ಹಿಂದೆ ಸೋಮಗುದ್ದು ಗ್ರಾಮದ ದ್ಯಾಮಣ್ಣನಿಗೆ ನನ್ನಿವಾಳದ ನೇತ್ರಾವತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಆಗಾಗ, ಪತಿ, ಪತ್ನಿ ನಡುವೆ ಜಗಳ ನಡೆಯುತ್ತಿದ್ದು, ಹಲವಾರು ಬಾರಿ ಹಿರಿಯರ ಸಮ್ಮುಖದಲ್ಲಿ ಪರಿಹರಿಸಲಾಗಿತ್ತು. ಆದರೆ, ದ್ಯಾಮಣ್ಣ ಸಹೋದರಿ ರೂಪಾ, ಆಕೆಯ ಪತಿ ತಿಪ್ಪೇಸ್ವಾಮಿ ಮತ್ತು ಸಂಬಂಧಿ ಶಿವಕುಮಾರ್ ಎಂಬುವರು ನೇತ್ರಾವತಿ ವಿರುದ್ಧ ಇಲ್ಲ ಸಲ್ಲದ ದೂರುಗಳನ್ನು ಹೇಳಿ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.
ಮರ್ಯಾದಾ ಹತ್ಯೆ, ಪ್ರೇಮಿ ಮನೆ ತಲುಪಿದ ವಿದ್ಯಾರ್ಥಿನಿಯ ಕೊಂದ ತಂದೆ-ಮಗ!
ಇದರಿಂದ ಪತ್ನಿಯ ಶೀಲಶಂಕಿಸಿ ಪತಿ ದ್ಯಾಮಣ್ಣ ತನ್ನ ಜಮೀನಿಗೆ ಕರೆದೊಯ್ದು ಕುಡಗೋಲಿನಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಠಾಣೆಗೆ ಆಗಮಿಸಿ ಪತ್ನಿ ಕೊಲೆ ಮಾಡಿದ್ದಾಗಿ ತಾನೇ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಳ್ಳಕೆರೆ ಪೊಲೀಸರು ದ್ಯಾಮಣ್ಣ ಮತ್ತಿತರರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮಹಿಳೆ ಕೊಲೆ ಮಾಡಿದ್ದ ಇಬ್ಬರ ಬಂಧನ
ಬೆಂಗಳೂರು(Bengaluru): ಹಣಕಾಸು ವಿಚಾರ ಹಿನ್ನೆಲೆಯಲ್ಲಿ ಪರಿಚಿತ ಮಹಿಳೆಯೊಬ್ಬಳನ್ನು ಹತ್ಯೆಗೈದಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಚಮಾರನಹಳ್ಳಿ ನಿವಾಸಿ ಇಮ್ರಾನ್ ಹಾಗೂ ವೆಂಕಟೇಶ್ ಬಂಧಿತರಾಗಿದ್ದು, ಈ ಕೃತ್ಯ ಸಂಬಂಧ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಕಿರಣ್ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಕಾಚಮಾರನಹಳ್ಳಿಯ ಅಪಾರ್ಚ್‌ಮೆಂಟ್‌ನಲ್ಲಿ ಸುನೀತಾ ಪ್ರಸಾದ್(55) ಅವರ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.