Bengaluru Crime: ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಕಾಮುಕನ ಬಂಧನ

By Kannadaprabha News  |  First Published Mar 6, 2022, 4:59 AM IST

*  ಕದ್ದ ಮೊಬೈಲ್‌ ಮೂಲಕ ಮಹಿಳಾ ಪೊಲೀಸ್‌, ವಕೀಲರಿಗೆ ಕಾಟ
*  ನಡುರಾತ್ರಿ ಕರೆ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿ ಮಹಿಳೆಯರಿಗೆ ಕಿರುಕುಳ
*  ತಾಕತ್ತಿದ್ದರೆ ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲು ಹಾಕಿದ್ದ ಮಹಿಳಾ ಪೀಡಕ
 


ಬೆಂಗಳೂರು(ಮಾ.06): ಕಳವು ಮಾಡಿದ ಮೊಬೈಲ್‌ನಿಂದ ಮಹಿಳಾ ಪೊಲೀಸರು(Women Cops), ವಕೀಲರು ಸೇರಿದಂತೆ ನೂರಾರು ಮಹಿಳೆಯರಿಗೆ ವಾಟ್ಸಾಪ್‌ನಲ್ಲಿ(WhatsApp) ಅಶ್ಲೀಲ ವಿಡಿಯೋಗಳನ್ನು(Porn Video) ಕಳುಹಿಸಿ ಕಿರುಕುಳ ನೀಡಿದ್ದಲ್ಲದೆ ತಾಕತ್ತಿದ್ದರೆ ತನ್ನನ್ನು ಬಂಧಿಸುವಂತೆ ಪೊಲೀಸರಿಗೇ ಸವಾಲು ಹಾಕಿದ್ದ ಕ್ರಿಮಿನಲ್‌ವೊಬ್ಬ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮೈದುನಹಳ್ಳಿ ನಿವಾಸಿ ಮಂಜುನಾಥ ಅಲಿಯಾಸ್‌ ಕೃಷ್ಣ ಬಂಧಿತ(Arrest). ಇತ್ತೀಚಿಗೆ ನಗರದಲ್ಲಿ ಈತನ ವಿರುದ್ಧ ನಿರಂತರ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌, ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರಿಗೆ(Police) ಸವಾಲು ಹಾಕಿದ್ದ ಆರೋಪಿ(Accused) ಕೊನೆಗೆ ಮಂಡಿಯೂರಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

Crime News ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ

ರೋಸಿ ಹೋದ ಮಹಿಳೆಯರು:

ಮಂಜುನಾಥ್‌ ಅಲಿಯಾಸ್‌ ಕೃಷ್ಣ ವೃತ್ತಿಪರ ಕ್ರಿಮಿನಲ್‌ ಆಗಿದ್ದು, 5ನೇ ತರಗತಿವರೆಗೆ ಓದಿದ ನಂತರ ತನ್ನೂರು ತೊರೆದು ಬೆಂಗಳೂರು(Bengaluru) ಸೇರಿದ್ದ. 2004ರಲ್ಲಿ ಜೇಬುಗಳ್ಳತನ ಪ್ರಕರಣದಲ್ಲಿ ಉಪ್ಪಾರಪೇಟೆ ಠಾಣೆ ಪೊಲೀಸರಿಂದ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ನಂತರ ಜಾಮೀನು ಪಡೆದು ಹೊರಬಂದ ಆತ, ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಈತನ ವಿರುದ್ಧ ಬೆಂಗಳೂರು ಮತ್ತು ತುಮಕೂರು ಸೇರಿ ಇತರೆಡೆ ಪ್ರಕರಣಗಳು ದಾಖಲಾಗಿವೆ.

ಪಿಕ್‌ ಪ್ಯಾಕೆಟ್‌, ಮೊಬೈಲ್‌ ಕಳ್ಳತನ, ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿಕೊಂಡಿದ್ದ ಆರೋಪಿ, ಎರಡು ವರ್ಷಗಳಿಂದ ಮಹಿಳಾ ಪೀಡಕನಾಗಿ ಸಮಾಜಕ್ಕೆ ಕಂಟಕವಾಗಿದ್ದ. ಕಳವು ಮಾಡಿದ ಮೊಬೈಲ್‌ನಲ್ಲಿದ್ದ ಮಹಿಳೆಯರ ನಂಬರ್‌ಗೆ ಕರೆ ಮಾಡಿ ಪರಿಚಿತನಂತೆ ಸಂಭಾಷಿಸಿ ಸ್ನೇಹಗಳಿಸುತ್ತಿದ್ದ ಆತ, ಮಧ್ಯರಾತ್ರಿ ಕರೆ ಮಾಡಿ ಕಾಡುವುದು, ವಾಟ್ಸಾಪ್‌ನಲ್ಲಿ ಅಶ್ಲೀಲ ವಿಡಿಯೋ ಮತ್ತು ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ಕೊಡುತ್ತಿದ್ದ. ಕೆಲವು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್‌(Blackmail) ಮಾಡಿ ಹಿಂಸಿಸುತ್ತಿದ್ದ. ಈ ರೀತಿ ಉಪ್ಪಾರಪೇಟೆ, ಹಲಸೂರು, ಜಾಲಹಳ್ಳಿ, ಸಿಟಿ ಮಾರ್ಕೆಟ್‌, ಸಿಟಿ ರೈಲ್ವೆ ಹಾಗೂ ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ಕೃಷ್ಣನ ಮೇಲೆ ನೊಂದ ಮಹಿಳೆಯರು(Women) ದೂರು ದಾಖಲಿಸಿದ್ದರು.

Marijuana Racket: ಗಾಂಜಾ ಚಾಕ್ಲೆಟ್‌ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರು ಅರೆಸ್ಟ್‌

ತನ್ನ ವಿರುದ್ಧ ದೂರು ನೀಡಿದ ಮಹಿಳೆಯರಿಗೆ ಕರೆ ಮಾಡಿ, ನೀನು ದೂರು ಕೊಟ್ಟರು ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲವೆಂದು ಅಬ್ಬರಿಸುತ್ತಿದ್ದ. ಅಲ್ಲದೆ ಪೊಲೀಸರಿಗೂ ಕರೆ ಮಾಡಿ ತಾಕತ್ತಿದ್ದರೆ ತನ್ನನ್ನು ಬಂಧಿಸವಂತೆ ಆರೋಪಿ ಸವಾಲು ಹಾಕಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೇಸ್‌ ಕೊಡುವುದಾಗಿ ಮಹಿಳಾ ವಕೀಲರ ನಂಬರ್‌ ಪಡೆದು ಕಾಟ

ಜೇಬುಗಳ್ಳತನ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿ, ಆ ವೇಳೆ ವಕೀಲರನ್ನು ಸಂಪರ್ಕಿಸಿದ್ದ. ‘ನಿಮಗೆ ಹೆಚ್ಚಿನ ಕೇಸ್‌ಗಳನ್ನು ಕೊಡಿಸುತ್ತೇನೆ’ ಎಂದು ನಂಬಿಸಿ ಮಹಿಳಾ ವಕೀಲರ ಮೊಬೈಲ್‌ ನಂಬರ್‌ಗಳನ್ನು ಕೃಷ್ಣ ಪಡೆದಿದ್ದ. ಹೀಗೆ ಒಬ್ಬರಿಂದ ಮತ್ತೊಬ್ಬ ಮಹಿಳಾ ವಕೀಲರ ನಂಬರ್‌ಗಳನ್ನು ಕಲೆ ಹಾಕಿದ ಆರೋಪಿ, ಬಳಿಕ ಈ ನಂಬರ್‌ಗಳಿಗೆ ಅಶ್ಲೀಲ ಮಾತು, ವಿಡಿಯೋ ಮತ್ತು ಸಂದೇಶಗಳಿಂದ ಕಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೂ ಕಾಟ

ಪೊಲೀಸ್‌ ಠಾಣೆಗಳಿಗೆ ಕರೆ ಮಾಡಿ ಮಹಿಳಾ ಪಿಎಸ್‌ಐ ಸೇರಿದಂತೆ ಪೊಲೀಸರ ಮೊಬೈಲ್‌ ನಂಬರ್‌ಗಳನ್ನು ಪಡೆದು ಆರೋಪಿ ಕಿರುಕುಳ ನೀಡಿದ್ದಾನೆ. 2020ರಲ್ಲಿ ಯಲಹಂಕ ಉಪ ವಿಭಾಗದ ಠಾಣೆಯೊಂದರ ಮಹಿಳಾ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿತ್ತು. ಜೈಲಿನಿಂದ ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಲ್ಯಾಕ್‌ಮೇಲೆ ಮಾಡಿ ಲೈಂಗಿಕ ದೌರ್ಜನ್ಯ

ಅಶ್ಲೀಲ ಸಂದೇಶ ಮಾತ್ರವಲ್ಲ ಕೆಲವು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕ ದೌರ್ಜನ್ಯವನ್ನು(Sexual Harassment) ಸಹ ಆರೋಪಿ ಎಸಗಿದ್ದಾನೆ. ಆದರೆ ಮರ್ಯಾದೆಗೆ ಅಂಜಿ ಸಂತ್ರಸ್ತೆಯರು ದೂರು ಕೊಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರಿಗೆ ಕರೆ ಮಾಡುವಾಗ ತನ್ನನ್ನು ಕೃಷ್ಣ, ಮಂಜು, ಪ್ರಶಾಂತ್‌, ದಿವ್ಯಾರಾಜ್‌ ಹೀಗೆ ನಾನಾ ಹೆಸರಿನಿಂದ ಆರೋಪಿ ಪರಿಚಯಿಸಿಕೊಂಡಿದ್ದ. ಅಲ್ಲದೆ ಕೆಲ ಮಹಿಳೆಯರ ಭೇಟಿ ವೇಳೆ ಬೇರೆ ಬೇರೆ ಪೋಷಾಕು ಧರಿಸಿ ವಂಚಿಸಿದ್ದ ಎಂದು ತಿಳಿದು ಬಂದಿದೆ.

ಆರೋಪಿ ಮೊಬೈಲ್‌ ಪರಿಶೀಲಿಸಿದಾದ ಹಲವು ಮಹಿಳೆಯರಿಗೆ ವಾಟ್ಸಾಪ್‌ ಮೆಸೇಜ್‌, ಕರೆಗಳು ಮಾಡಿ ಕಿರುಕುಳ ನೀಡಿರುವುದು ಗೊತ್ತಾಯಿತು. ಆರೋಪಿಯಿಂದ ತೊಂದರೆಗೆ ಒಳಗಾದವರು ಯಾವುದೇ ಹಿಂಜರಿಕೆಯಿಲ್ಲದೆ ಸ್ಥಳೀಯ ಠಾಣೆಗೆ ಬಂದು ದೂರು ನೀಡಿದರೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ ಅಂತ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.  
 

click me!