Crime News ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ

Published : Mar 05, 2022, 05:46 PM IST
Crime News ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ

ಸಾರಾಂಶ

* ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ * ಬಂಧಿತರಿಂದ 50 ಲಕ್ಷ ರೂ. ಮೌಲ್ಯದ 400 ಗ್ರಾಂ ಎಂಡಿಎಂಎ ವಶ * ನ್‌ಲೈನ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಗಳು

ಬೆಂಗಳೂರು, (ಮಾ.05): ಬೆಂಗಳೂರಿನ (Bengaluru) ಕೆ.ಜೆ‌.ಹಳ್ಳಿ ಪೊಲೀಸರ ಕಾರ್ಯಾಚರಣೆ ವೇಳೆ ಆನ್‌ಲೈನ್‌ನಲ್ಲಿ (Online) ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ಆನ್‌ಲೈನ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ನೆಲ್ಸನ್‌(29) ಬಂಧಿತ ಆರೋಪಿ. 

ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ಬೆಂಗಳೂರು 'ತೀಟೆ ತಾತ'!

ಬಂಧಿತನಿಂದ 25 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇಂಟರ್‌ನೆಟ್‌, ವಾಟ್ಸಾಪ್‌ ಕಾಲ್‌ನಲ್ಲಿ ಗ್ರಾಹಕರ ಜತೆ ಡೀಲ್‌ ಮಾಡಿ, ಆನ್‌ಲೈನ್ ಮೂಲಕವೇ ಗ್ರಾಹಕರಿಂದ ಹಣ ಸ್ವೀಕರಿಸುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಡ್ರಗ್ಸ್ ತಂದಿಟ್ಟು ಲೊಕೇಷನ್, ಫೋಟೋ ಕಳುಹಿಸುತ್ತಿದ್ದ. ವಿಡಿಯೋ ತನ್ನ ಗ್ರಾಹಕರಿಗೆ ಶೇರ್‌ ಮಾಡಿ ಡ್ರಗ್ಸ್‌ ಪೂರೈಸುತ್ತಿದ್ದ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ನೈಜೀರಿಯ ಪ್ರಜೆಗಳು ಸೆರೆ
ಇನ್ನು ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರ(CCB Police) ಕಾರ್ಯಾಚರಣೆ ವೇಳೆ ವಿದ್ಯಾರ್ಥಿಗಳು(Students), ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. 

ನೈಜೀರಿಯ ಪ್ರಜೆಗಳಾದ ಕ್ರಿಸ್ಟಿಯನ್ ಇಯ್ಕ್ ಚುಕ್ವು ಹಾಗೂ ಜಾನ್ ಓಬಿನಾ ಬಂಧಿತ ಆರೋಪಿಗಳು. ಬಂಧಿತರಿಂದ 50 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ(MDMA) ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸೈಬರ್‌ ವಂಚಕರಿಗೆ ಸಿಮ್‌ ಮಾರುತ್ತಿದ್ದವರ ಬಂಧನ
ಹಣಕ್ಕಾಗಿ ಸೈಬರ್‌ ವಂಚನೆ(Cyber Fraud) ಜಾಲಕ್ಕೆ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಏರ್‌ಟೆಲ್‌ ಕಂಪನಿಯ ಉದ್ಯೋಗಿ ಹಾಗೂ ಆತನ ಸ್ನೇಹಿತ ಈಶಾನ್ಯ ವಿಭಾಗ ಸಿಇಎನ್‌ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.

ಯಲಹಂಕದ ಹರ್ಷ ಹಾಗೂ ಚಿಕ್ಕಬ್ಯಾಲಕೆರೆಯ ಎಸ್‌.ಚೇತನ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ರೆವಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಭಾಗಕ್ಕೆ ಪ್ರವೇಶ ಕೊಡಿಸುವುದಾಗಿ ವಿದ್ಯಾರ್ಥಿಯೊಬ್ಬನಿಂದ .1.27 ಲಕ್ಷ ಪಡೆದು ವಂಚಿಸಿದ ಪ್ರಕರಣದಲ್ಲಿ ರಾಜೇಶ್ವರ್‌ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ ಆತ ವಿಚಾರಣೆ ವೇಳೆ ಸೈಬರ್‌ ವಂಚನೆಗೆ ಸಿಮ್‌(Sim) ಪೂರೈಸಿದವರ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

1,500 ಸಾವಿರಕ್ಕೆ ಸಿಮ್‌ ಮಾರಾಟ
ಏರ್‌ಟೆಲ್‌ ಸೇಲ್ಸ್‌ ಎಕ್ಸಿಕ್ಯೂಟಿವ್‌ ಹರ್ಷ ಹಾಗೂ ಸಿಮ್‌ ಮಾರಾಟಗಾರ ಚೇತನ್‌ ಬಾಲ್ಯ ಸ್ನೇಹಿತರಾಗಿದ್ದು, ಹಣಕ್ಕಾಗಿ(Money) ಬಿಹಾರ(Bihar) ಮೂಲದ ಸೈಬರ್‌ ವಂಚಕ ರಾಜೇಶ್ವರ್‌ಗೆ ನೆರವಾಗಿದ್ದರು. ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಚೇತನ್‌ ಸಿಮ್‌ ಮಾರುತ್ತಿದ್ದ. ಆಗ ಗ್ರಾಹಕರಿಂದ ಹೆಚ್ಚಿನ ಅರ್ಜಿಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದಲ್ಲದೆ ಭಾವಚಿತ್ರಗಳನ್ನು ಕೂಡಾ ಚೇತನ್‌ ಪಡೆಯುತ್ತಿದ್ದ. ಈ ದಾಖಲೆಗಳನ್ನು ಬಳಸಿಕೊಂಡು ಆತ, ಸಿಮ್‌ಗಳನ್ನು ಆಕ್ಟೀವ್‌ ಮಾಡಿ ರಾಜೇಶ್ವರ್‌ಗೆ ಮಾರುತ್ತಿದ್ದ.

ಒಂದಕ್ಕಿಂತ ಹೆಚ್ಚಿನ ಬಾರಿ ಬೆರಳು ಮುದ್ರೆಗಳನ್ನು ಪಡೆದು ಆ ಗ್ರಾಹಕರ ಹೆಸರಿನಲ್ಲಿಯೇ ಹೆಚ್ಚಿನ ಸಿಮ್‌ ಕಾರ್ಡ್‌ ಆಕ್ಟೀವ್‌ ಮಾಡುತ್ತಿದ್ದರು. ಉಚಿತ ಅಥವಾ .50 ಮೌಲ್ಯದ ಸಿಮ್‌ಗಳನ್ನು ಸ್ನೇಹಿತ ರಾಜೇಶ್ವರ್‌ಗೆ ತಲಾ ಒಂದಕ್ಕೆ 1,500 ರುಗೆ ಮಾರುತ್ತಿದ್ದರು. ವಿಚಾರಣೆ ವೇಳೆ ರಾಜೇಶ್ವರ್‌ಗೆ 6 ಸಿಮ್‌ಗಳನ್ನು ಕೊಟ್ಟಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮತ್ತಷ್ಟುಮಾಹಿತಿ ಹೊರಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಮ್‌ ಬಳಸಿ ವಿದ್ಯಾರ್ಥಿಗಳಿಗೆ ವಂಚನೆ
ಬಿಹಾರ ಮೂಲದ ರಾಜೇಶ್ವರ್‌ ವೃತ್ತಿಪರ ಸೈಬರ್‌ ವಂಚಕನಾಗಿದ್ದು, ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ(Students) ಲಕ್ಷಾಂತರ ಹಣ ಪಡೆದು ಆತ ಮೋಸ ಮಾಡುತ್ತಿದ್ದ. ಈ ದಂಧೆಗೆ ಅಗತ್ಯವಾದ ಮೊಬೈಲ್‌ ಸಿಮ್‌ಗಾಗಿ ಆರೋಪಿ ಹುಡುಕಾಟ ನಡೆಸಿದ್ದ. ಆಗ ಮೊದಲು ಚೇತನ್‌ ಪರಿಚಯವಾಗಿದೆ. ಆತನಿಂದ ಹರ್ಷ ಕೂಡಾ ರಾಜೇಶ್ವರ್‌ ಸಂಪರ್ಕಕ್ಕೆ ಬಂದಿದ್ದಾನೆ. ಹಣದಾಸೆ ತೋರಿಸಿ ಈ ಇಬ್ಬರನ್ನು ತನ್ನ ಮೋಸದ ಬಲೆಗೆ ರಾಜೇಶ್ವರ್‌ ಸೆಳೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು