ಎಸ್‌ಐ ಹುದ್ದೆ ಆಸೆ ತೋರಿಸಿ 18 ಲಕ್ಷ ವಂಚನೆ

By Kannadaprabha NewsFirst Published Oct 9, 2021, 9:53 AM IST
Highlights

*  ರಾಜಕೀಯ ನಾಯಕರ ಪರಿಚಯವಿದೆ ಎಂದು ನಂಬಿಸಿದ್ದ ವಂಚಕ
*  ಈ ಸಂಬಂಧ ಸದಾಶಿವನಗರ ಠಾಣೆಗೆ ದೂರು
*  ದೇವನಹಳ್ಳಿಯ ನಿವಾಸಿ ಶ್ರೀನಿವಾಸ್‌ ಬಂಧಿತ ಆರೋಪಿ
 

ಬೆಂಗಳೂರು(ಅ.09): ಸಬ್‌ಇನ್‌ಸ್ಪೆಕ್ಟರ್‌(Subinspector) ಹುದ್ದೆ ಕೊಡಿಸುವುದಾಗಿ ಹೇಳಿ 18 ಲಕ್ಷ ವಂಚನೆ(Fraud) ಮಾಡಿದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿಯ ನಿವಾಸಿ ಶ್ರೀನಿವಾಸ್‌ (45) ಬಂಧಿತ(Arrest) ಆರೋಪಿ. ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿರುವ ಆರೋಪಿಯು ಪ್ರಭಾವಿ ರಾಜಕಾರಣಿಗಳ(Politicians) ಸಂಪರ್ಕವಿದೆ ಎಂದು ಹೇಳಿಕೊಳ್ಳುತ್ತಿದ್ದ. ತುಮಕೂತು ಮೂಲಕ ಪುಟ್ಟರಾಜು ಎಂಬುವವರ ಪುತ್ರಿ ಪಿಎಸ್‌ಐ(PSI) ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಇದನ್ನು ತಿಳಿದ ಆರೋಪಿಯು ಪುಟ್ಟರಾಜು ಅವರನ್ನು ಭೇಟಿಯಾಗಿ, ನನಗೆ ರಾಜಕೀಯ(Politics) ನಾಯಕರ ಪರಿಚಯ ಇದ್ದು, 70 ಲಕ್ಷ ನೀಡಿದರೆ ನಿಮ್ಮ ಮಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಇದನ್ನು ನಂಬಿದ ಪುಟ್ಟರಾಜು ಅವರು 55 ಲಕ್ಷ ನೀಡುವುದಾಗಿ ಒಪ್ಪಿಕೊಂಡಿದ್ದರು ಎಂದು ಪೊಲೀಸರು(Police) ಹೇಳಿದ್ದಾರೆ.

ವಾಮಾಚಾರದ ಸೋಗಲ್ಲಿ ಮನೆ ಮಾಲಕಿಗೆ 4 ಕೋಟಿ ಪಂಗನಾಮ..!

ಮುಂಗಡವಾಗಿ 18 ಲಕ್ಷ ಪಡೆದಿದ್ದ ಆರೋಪಿಯು ಒಂದು ತಿಂಗಳಲ್ಲಿ ನಿಮ್ಮ ಮಗಳಿಗೆ ಕೆಲಸ ನೇಮಕಾತಿ(Appointment) ಪತ್ರ ಸಿಗಲಿದೆ ಎಂದು ನಂಬಿಸಿದ್ದ. ಆದರೆ, ಪುಟ್ಟರಾಜು ಪರಿಚಿತರೊಬ್ಬರು ಭೇಟಿಯಾಗಿ, ಪಿಎಸ್‌ಐ ಪರೀಕ್ಷೆಯು ಪಾರದರ್ಶಕವಾಗಿ ನಡೆಯಲಿದ್ದು, ನಿಮಗೆ ಹಣ ಪಡೆದು ವಂಚಿಸಿದ್ದಾರೆ ಎಂದಿದ್ದರು. ನಂತರ ಎಚ್ಚೆತ್ತುಕೊಂಡ ಪುಟ್ಟರಾಜು ಅವರು ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಮತ್ತಷ್ಟುಮಂದಿಗೆ ಆರೋಪಿ ಶ್ರೀನಿವಾಸ ಹಣ ಪಡೆದು ವಂಚನೆ ಮಾಡಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
 

click me!