ಬೆಂಗಳೂರು: ಓಲಾ, ಊಬರ್ ಚಾಲಕರೇ ಈತನ ಟಾರ್ಗೆಟ್, ಖರ್ತನಾಕ್‌ ಖದೀಮನ ಬಂಧನ

By Girish Goudar  |  First Published Jun 17, 2023, 10:24 AM IST

ಚಾಲಕರಿಗೆ ಚಾಕು ತೋರಿಸಿ ಬೆದರಿಸಿ ಫೋನ್ ಫೇ ಮೂಲಕ ಹಣ ಹಾಕಿಸಿಕೊಳ್ತಿದ್ದ, ಚಾಲಕನ ಕಡೆಯಿಂದ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಹಣ ಹಾಕಿಸುವಂತೆಯೂ ಹೆದರಿಸುತ್ತಿದ್ದನಂತೆ. 


ಬೆಂಗಳೂರು(ಜೂ.17):  ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡಿ ಚಾಕು ತೋರಿಸಿ ಸುಲಿಗೆ ಮಾಡಲು ಯತ್ನಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸರು ಆರೋಪಿ ವಿನಯ್ ಎಂಬಾತನನ್ನ ಬಂಧಿಸಿದ್ದಾರೆ.  

ಪೊಲೀಸರಿಗೆ ದೂರು ಕೊಡಲ್ಲ ಅಂತಾ ಓಲಾ ಚಾಲಕನನ್ನ ಟಾರ್ಗೆಟ್ ಮಾಡಿ ಆರೋಪಿ ವಿನಯ್ ಸುಲಿಗೆ ಮಾಡಲುತ್ತಿದ್ದನಂತೆ. ಹೆಚ್ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಈ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ ಸುಲಿಗೆ ಮಾಡಿದ್ದ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆ ಮಾಡುತ್ತಿದ್ದ ಆರೋಪಿ ವಿನಯ್. 

Tap to resize

Latest Videos

ಬೆಂಗಳೂರು: ಆಟೋ ಚಾಲಕನ ದುಂಡಾವರ್ತನೆ, ಪ್ರಯಾಣಿಕನ ಮೇಲೆ ಹಲ್ಲೆಗೆ ಯತ್ನ

ಚಾಲಕರಿಗೆ ಚಾಕು ತೋರಿಸಿ ಬೆದರಿಸಿ ಫೋನ್ ಫೇ ಮೂಲಕ ಹಣ ಹಾಕಿಸಿಕೊಳ್ತಿದ್ದ, ಚಾಲಕನ ಕಡೆಯಿಂದ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಹಣ ಹಾಕಿಸುವಂತೆಯೂ ಹೆದರಿಸುತ್ತಿದ್ದನಂತೆ. ಆಸ್ಪತ್ರೆಗೆ ಸೇರಿದ್ದೀನಿ ನನಗೆ ಹಣದ ಅವಶ್ಯಕತೆಯಿದೆ ಎಂದು ಚಾಲಕರ ಕುಟುಂಬಸ್ಥರಿಗೆ ಕರೆ ಮಾಡಿಸುತ್ತಿದ್ದ. ಉತ್ತರ ಕರ್ನಾಟಕದ ಓಲಾ, ಊಬರ್ ಚಾಲಕರನ್ನೇ ಟಾರ್ಗೆಟ್ ಈತ ಸುಲಿಗೆ ಮಾಡುತ್ತಿದ್ದ. 

ಆರೋಪಿ ಬಂಧನದಿಂದ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!