ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್‌

By Manjunath Nayak  |  First Published Oct 14, 2022, 3:18 PM IST

Bengaluru Crime News: ಹದಿಮೂರಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿಗಳಿಂದ 49 ಲಕ್ಷ ಮೌಲ್ಯದ 1.1 ಕೇಜಿ ಚಿನ್ನಾಭರಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಅ. 14): ಒಂದು ಬಾರಿ ನಶೆ ಏರಿಸಿಕೊಂಡು ರಸ್ತೆಗಿಳಿದರೆ ಮುಗೀತು ಅಂದು ಕಳ್ಳತನ ಫಿಕ್ಸ್, ಹುಟ್ಟುತ್ತಾ ಅಣ್ಣ ತಮ್ಮಂದಿರು  ಬೆಳೆಯುತ್ತಲೇ ದಾಯಾದಿಗಳು ಎಂಬ ವಾಕ್ಯದ ತದ್ವಿರುದ್ಧ ಇವರು. ಯಸ್ ನಟೋರಿಯಸ್ ಕ್ರಿಮಿನಲ್‌ ಅಣ್ಣ ತಮ್ಮಂದಿರನ್ನ ಪೊಲೀಸರು ಬಂಧಿಸಿದ್ದಾರೆ. ಗುಣಶೇಖರ@ಗುಣ@ಕೊರಂಗು ಹಾಗು ಅಜಿತ್ ಇಬ್ಬರು ಅಣ್ಣ ತಮ್ಮಂದಿರು. ಇವರ ಜೊತೆ ಸೇರಿಕೊಂಡಿದ್ದವನೇ ಮುತ್ತು. ಈ ಮೂವರು  ಸೇರಿಕೊಂಡು ಸ್ಕೆಚ್ ಹಾಕಿದ್ರೆ ಆ ಮನೆಯಲ್ಲಿ ಕಳ್ಳತನ ಫಿಕ್ಸ್ . ಹೀಗೆ ಹದಿಮೂರಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿಗಳಿಂದ 49 ಲಕ್ಷ ಮೌಲ್ಯದ 1.1 ಕೇಜಿ ಚಿನ್ನಾಭರಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಮೂಲತಃ ತಮಿಳುನಾಡಿನವರು. ಕದ್ದ ಚಿನ್ನಾಭರಣವನ್ನ ವಿಲೇವಾರಿ ಮಾಡ್ತಿದ್ದಿದ್ದೂ ತಮಿಳುನಾಡಿನಲ್ಲೇ.

Tap to resize

Latest Videos

ಈ ಅಣ್ತಮ್ಮಂದಿರಲ್ಲಿ ತಮ್ಮನಾಗಿರುವ ಗುಣಶೇಖರ ನಟೋರಿಯಸ್ ಕ್ರಿಮಿನಲ್. ಚಿಕ್ಕವಯಸ್ಸಿನಲ್ಲಿ ಎಲ್ಲಾರೂ ಪೆನ್ನು ಪೇಪರ್ ಹಿಡಿದ್ರೆ ಈತ ಕಳ್ಳತನ ಮಾಡಲು ರಾಡ್ ಹಿಡಿದು ಓಡಾಡುತ್ತಿದ್ದ. ಕಳ್ಳತನ ವಿಚಾರವಾಗಿ ಈ ಹಿಂದೆ ಬಾಲಾಪರಾಧಿಯಾಗಿ ರಿಮ್ಯಾಂಡ್ ಹೋಂಗೆ ಸೇರಿದ್ದ. ಸುಲಭವಾಗಿ ದುಡ್ಡು ಸಿಗುತ್ತೆ ಎಂದು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು ಜೊತೆಗೆ ಅಣ್ಣ ಅಜಿತ್ ಹಾಗು ಮುತ್ತು ಎಂಬಾತನನ್ನ ಜೊತೆಗೆ ಸೇರಿಸಿಕೊಂಡಿದ್ದ. ಮೂವರೂ ಕೂಡ ಡ್ರಗ್ ವ್ಯಸನಿಗಳು. ಡ್ರಗ್ಸ್‌ ಹಾಗೂ ಐಷಾರಾಮಿ ಜೀವನಕ್ಕೆ ಕಳ್ಳತನ ಮಾಡ್ತಿದ್ದರು. 

ಉಂಡ ಮನೆಗೆ ಕನ್ನ: ಅಮೇಜಾನ್ ಸೆಲ್ಲರ್ ಸರ್ವೀಸ್‌ನಲ್ಲಿ ಕಳ್ಳತನ

ಇನ್ನು  ಇವರು ಮುಖ್ಯವಾಗಿ  ಟಾರ್ಗೆ್ಟ್ ಮಾಡ್ತಿದ್ದಿದ್ದೇ ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳನ್ನ. ಫ್ಯಾಷನ್ ಎಂದು  ಬಾಲ್ಕನಿಗೆ ಗ್ಲಾಸ್ ಅಳವಡಿಸುವ ಫ್ಲಾಟ್‌ಗಳಿಗೆ ನುಗ್ಗಿ ದೋಚೋದೆ ಇವರ ಕೆಲಸ. ಇನ್ನು ಮುತ್ತು ಎಂಬಾತ ಹಗಲಿನಲ್ಲಿ ಮನೆಗಳನ್ನ ಗುರುತಿಸುತ್ತಿದ್ದ. ನಂತರ ರಾತ್ರಿ ವೇಳೆ ಮೂವರು ಫ್ಲಾಟ್‌ಗಳ ಬಾಲ್ಕನಿಯ  ಸ್ಲೈಡಿಂಗ್  ಡೋರ್ ಮೂಲಕ ಒಳಗೆ ಹೋಗಿ ಕಳ್ಳತನ ಮಾಡ್ತಿದ್ರು. ಬೀಗ ಹಾಕಿದ ಮನೆಗಳಿಗೆ ರಾಡ್ ಹಾಕಿ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ರು. 

ಇನ್ನು ಐಷಾರಾಮಿ ಜೀವನಕ್ಕೆ ಅಲ್ಲದೆ  ತಮಿಳುನಾಡಿನ ಕೋಳಿ‌ ಅಂಕಕ್ಕೂ ಹಣ ಕಟ್ಟುತ್ತಿದ್ರು . ಇನ್ನು ಮೊಬೈಲ್ ವಾಟ್ಸಪ್ ಮುಖಾಂತರವೇ ಇವರು ಮಾತನಾಡಿಕೊಂಡು ಕೃತ್ಯವನ್ನ ಎಸಗುತ್ತಿದ್ರು ಎನ್ನಾಲಾಗಿದೆ.  ಸದ್ಯ ಆರೋಪಿಗಳು ಕೊತ್ತನೂರು ಬಳಿ ಕೂಡ ಚಿನ್ನಾಭರಣ ಕಳವು ಪ್ರಕರಣ ಇವರ ಮೇಲಿದೆ.  ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

click me!