
ತುಮಕೂರು(ಜೂ.24): ಇಂದು ತುಮಕೂರಿನಲ್ಲಿ ಬೆಳಗ್ಗೆ ವ್ಯಕ್ತಿಯೋರ್ವನ ಕೊಲೆಗೆ ಯತ್ನ ನಡೆದಿದೆ. ಹೌದು, ನಗರದ ಹೊರವಲಯ ಭೀಮಸಂದ್ರದಲ್ಲಿ ಘಟನೆ ನಡೆದಿದೆ. 40 ವರ್ಷದ ರಂಗರಾಜು ಎಂಬುವರ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಇದ್ರಿಂದಾಗಿ ರಂಗರಾಜುಗೆ ಗಂಭೀರವಾಗಿ ಗಾಯಗೊಂಡಿದೆ. ಹಲ್ಲೆ ನಡೆಸಿರುವ ವ್ಯಕ್ತಿ ಕಿರಣ್ ಎಂದು ತಿಳಿದುಬಂದಿದೆ .
ಹಲ್ಲೆಗೆ ಕಾರಣವೇನು?
ವೈಯಕ್ತಿಕ ದ್ವೇಷದಿಂದಾಗಿ ಈ ಹಿಂದೆ ಕಿರಣ್ ತಂದೆ ಮೇಲೆ ರಂಗರಾಜು ಮಾರಣಾಂತಿಕ ಹಲ್ಲೆ ನಡೆಸಿದ್ದ, ಇದ್ರಿಂದ ಕುಪಿತಗೊಂಡಿದ್ದ ಕಿರಣ್ , ರಂಗರಾಜುನನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಕೊಂಡಿದ್ದ, ಹೀಗಾಗಿ ಇಂದು ಬೆಳಗ್ಗೆ ನಡು ರಸ್ತೆಯಲ್ಲಿ ಹಲ್ಲೆ ಮಚ್ಚಿನಿಂದ ಕೊಚ್ಚಿದ್ದಾನೆ. ನಡು ರಸ್ತೆಯಲ್ಲಿ ನಡೆದ ಈ ಹಲ್ಲೆಯನ್ನು ಕಂಡ ಜನರು ಒಂದು ಕ್ಷಣ ಗಾಬರಿಗೊಂಡಿದ್ದರು.
ಸಾವಿರಾರು ಕಿಮೀ ಕ್ರಮಿಸಿ ಕಳ್ಳರ ಹೆಡೆಮುರಿ ಕಟ್ಟಿದ ಉಡುಪಿ ಪೊಲೀಸ್..!
ಘಟನೆಯ ವಿವರ
ಇಂದು ಬೆಳಗ್ಗೆ ಕಿರಣ್ ಜೊತೆ ಜಗಳಕ್ಕೆ ಇಳಿದಿದ್ದ ರಂಗರಾಜು ಈ ವೇಳೆ ನಿನ್ನನ್ನು ಹೆಚ್ಚು ದಿನ ಬದುಕಲು ಬಿಡುವುದಿಲ್ಲ ನಿನ್ನ ತಂದೆಗೆ ಆದ ಗತಿಯೇ ನಿನಗೆ ಆಗುತ್ತದೆ ಎಂದು ಕಿರಣ್ ಗೆ ಅವಾಜ್ ಹಾಕಿದ್ದ , ಈ ವೇಳೆ ಮೊದಲೇ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಹಲ್ಲೆ ಮಾಡಿರುವ ಕಿರಣ್, ರಂಗರಾಜು ಸಾವನ್ನಪ್ಪಿದ್ದಾನೆ ಎಂದು ತಿಳಿದುಕೊಂಡು ಸ್ಥಳದಿಂದ ತೆರಳಿದ್ದಾನೆ. ಇನ್ನೂ ತೀವ್ರವಾಗಿ ಗಾಯಗೊಂಡಿರುವ ರಂಗರಾಜುನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಇನ್ನೂ ಹಲ್ಲೆಯ ಆರೋಪಿ ಕಿರಣ್‌ನನ್ನು ವಶಕ್ಕೆ ಪಡೆದಿರುವ ತಿಲಕ್ ಪಾರ್ಕ್ ಪೊಲೀಸರು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ