ಸೆಕ್ಯುರಿಟಿ ಗಾರ್ಡ್ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು ತಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರೋರಾತ್ರಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಹೆಣವಾಗಿ ಹೋಗಿದ್ದಾನೆ.
ಕಿರಣ್. ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜು.10): ಸೆಕ್ಯುರಿಟಿ ಗಾರ್ಡ್ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು ತಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರೋರಾತ್ರಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಹೆಣವಾಗಿ ಹೋಗಿದ್ದಾನೆ. ಬೆಂಗಳೂರಿನ ಎಚ್ಎಎಲ್ ಬಳಿಯಲ್ಲೊಂದು ಆಕಸ್ಮಿಕ ಘಟನೆ ನಡೆದಿದೆ. ಕಳ್ಳ ಎಂದು ಬ್ಯಾಂಕ್ ಉದ್ಯೋಗಿ ಹತ್ಯೆ ಮಾಡಿದ ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಹೆಚ್‌ಎಎಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೆಲಸ ಹೋಗುತ್ತೆ ಅನ್ನೋ ಭಯದಲ್ಲಿ ಬ್ಯಾಂಕ್ ಉದ್ಯೋಗಿಯ ಕೊಲೆ ಮಾಡಿದಾಗಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಪೊಲೀಸರ ವಿಚಾರಣೆ ಹೇಳಿದ್ದಾನೆ.
ಇದೇ 5ರಂದು ಮಾರತ್ತಹಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ಗೆ ರಾತ್ರಿ ಎರಡು ಗಂಟೆ ಸುಮಾರಿಗೆ ಅಭಿಷೇಕ್ ಕಾಂಪೌಂಡ್ ಹಾರಿ ಎಂಟ್ರಿ ಕೊಟ್ಟಿದ್ದ. ಅಪರಿಚಿತ ವ್ಯಕ್ತಿ ಅಪಾರ್ಟ್‌ಮೆಂಟ್ ಒಳಗೆ ಬರುತ್ತಿರುವುದನ್ನ ಗಮನಿಸಿದ ಸೆಕ್ಯುರಿಟಿ ಗಾರ್ಡ್, ಈ ವೇಳೆ ಆತನನ್ನ ಪ್ರಶ್ನೆ ಮಾಡಲು ಸೆಕ್ಯೂರಿಟಿ ಗಾರ್ಡ್ ಮುಂದಾಗಿದ್ದ. ಯಾರು ನೀನು, ಏಕೆ ಬಂದಿದ್ದೀಯಾ ಎಂದು ಸೆಕ್ಯುರಿಟಿ ಶ್ಯಾಮನಾಥ್ ರೀ ಪ್ರಶ್ನೆ ಮಾಡಿದ್ದ. ಸೆಕ್ಯುರಿಟಿ ಎಷ್ಟೆ ಕೇಳಿದರು ಬಾಯ್ಬಿಡದೆ ಮನೆಗಳಿಗೆ ನುಗ್ಗಲು ಅಭಿಷೇಕ್ ಯತ್ನಿಸಿದ. ಸೆಕ್ಯುರಿಟಿ ಗಾರ್ಡ್ ಎಷ್ಟು ಪ್ರಯತ್ನಿಸಿದರು ನಿಲ್ಲದೆ ಮನೆಗೆ ನುಗ್ಗಲು ಅಭಿಷೇಕ್ ಯತ್ನಿಸಿದ್ದ.
Bengaluru: ಜೈಲಿನಿಂದಲೇ ಹಣಕ್ಕಾಗಿ ರೌಡಿ ಬೆದರಿಕೆ: ಇನ್‌ಸ್ಪೆಕ್ಟರ್ ಅಮಾನತು
ಕೊನೆಗೆ ಜಿಮ್‌ನಲ್ಲಿದ್ದ ರಾಡ್‌ನಿಂದ ಅಭಿಷೇಕ್ ತಲೆಗೆ ಹೊಡೆದಿದ್ದ. ಅಭಿಷೇಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವನ್ನಪ್ಪಿದ್ದ. ಕಳ್ಳತನ ಮಾಡಲು ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾನೆ ಎಂದು ಭಾವಿಸಿ ಹೊಡೆದು ಹತ್ಯೆ ಮಾಡಿದಾಗಿ ಸೆಕ್ಯುರಿಟಿ ಗಾರ್ಡ್ ಹೇಳಿದ್ದಾನೆ. ಕಳ್ಳತನ ಮಾಡಿದರೆ ತನ್ನ ಕೆಲಸ ಹೋಗುತ್ತದೆ ಎಂದು ಸೆಕ್ಯುರಿಟಿ ಗಾರ್ಡ್ ಹೊಡೆದಿದ್ದಾನೆ. ಪೊಲೀಸರ ತನಿಖೆ ವೇಳೆ ಕೊಲೆಯಾದ ವ್ಯಕ್ತಿಯ ಅಸಲಿ ಸತ್ಯ ಬಯಲಾಗಿದೆ. ಕೊಲೆಯಾದ ವ್ಯಕ್ತಿ ಬ್ಯಾಂಕ್ ಉದ್ಯೋಗಿ ಎಂಬುದು ಪತ್ತೆಯಾಗಿದೆ. ಛತ್ತೀಸ್‌ಗಢ ಮೂಲದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಎಂದು ತಿಳಿದು ಬಂದಿದೆ. ಈತ ಟ್ರೈನಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ.ಇದೇ 5 ರಂದು ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ.
ವಿವಿಧ ನಂಬರ್‌ಗಳಿಂದ ಮಹಿಳೆಯರಿಗೆ ಪೋರ್ನ್ ವಿಡಿಯೋ ಕಳುಹಿಸುತ್ತಿದ್ದ 58 ವರ್ಷದ ವ್ಯಕ್ತಿ ಬಂಧನ
ಬಳಿಕ ಒಬ್ಬನೇ ನಡೆದುಕೊಂಡು ಸ್ನೇಹಿತನ ಮನೆಗೆ ಹೊರಟಿದ್ದ .ಮೊಬೈಲ್‌ನಲ್ಲಿ ಅಡ್ರೆಸ್ ಕೇಳುತ್ತಾ ಹೊರಟಿದ್ದ. ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್ ಆಫ್ ಆಗಿ ಗೊಂದಲವಾಗಿತ್ತು. ಬಳಿಕ ರಸ್ತೆ ಬದಿ ಸಿಕ್ಕ ಮತ್ತೊಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ. ಅಪಾರ್ಟ್‌ಮೆಂಟ್ ಒಳಗೆ ಹೋದಾಗ ಪ್ರಶ್ನೆ ಮಾಡಿದ, ಸೆಕ್ಯುರಿಟಿ ಎಷ್ಟು ಕೇಳಿದರು ಮಾತನಾಡದೆ ಅಪಾರ್ಟ್‌ಮೆಂಟ್ ಮನೆಗೆ ಹೋಗಲು ಯತ್ನಿಸಿದ್ದ. ಈ ವೇಳೆ ಕಳ್ಳ ಇರಬೇಕೆಂದು ರಾಡ್‌ನಿಂದ ಅಭಿಷೇಕ್ ತಲೆಗೆ ಹೊಡೆದ ಸೆಕ್ಯುರಿಟಿ ಗಾರ್ಡ್. ಈ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಮಾಡಿದ ಸೆಕ್ಯುರಿಟಿ ಶ್ಯಾಮನಾಥ್ ರೀ ಹಾಗೂ ಆತನ ಸ್ನೇಹಿತನ ಬಂಧನವಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.