ಬಾಲಕಿ ಮೇಲೆ ಅತ್ಯಾಚಾರ ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿದ್ದ ಆರೋಪಿಗಳ ಬಂಧನ

By Kannadaprabha News  |  First Published Jan 8, 2023, 2:46 PM IST

ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಪರಿಸರದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾದ ಬಳಿಕ ಗರ್ಭಪಾತ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ನಿವಾಸಿ ಮನೋಹರ (23) ಹಾಗೂ ಮಂಗಳೂರು ಕೋಣಾಜೆಯ ಮಾಧವ ಯಾನೆ ಮಾಧು (30)ಬಂಧಿತ ಆರೋಪಿಗಳು.


ನಂಜನಗೂಡು: ಯುವತಿಯ ಬೆತ್ತಲೆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನನ್ನು ಆಕೆಯ ಸಹೋದರ ತನ್ನ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿ ನದಿಗೆ ಬಿಸಾಡಿದ್ದಾನೆ. ಪ್ರಕರಣ ಭೇದಿಸಿರುವ ಮೈಸೂರು ಜಿಲ್ಲೆಯ ಬಿಳಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಚಂದ್ರಗೌಡ(25) ಮೃತ ಯುವಕ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದ ಲಿಂಗರಾಜು ಹಾಗೂ ಎರಗನಹುಂಡಿ ಗ್ರಾಮದ ಕಿರಣ್‌ ಬಂಧಿತ ಆರೋಪಿಗಳು. ಹತ್ಯೆಯಾದ ಚಂದ್ರಗೌಡ ಸೋದರಿ ಸಂಬಂಧಿ ಹುಡುಗಿ ಹಾಗೂ ಕೊಲೆ ಆರೋಪಿ ಲಿಂಗರಾಜು ಸಹೋದರಿ ವಸತಿ ಶಾಲೆಯೊಂದರಲ್ಲಿ ಸಹಪಾಠಿಗಳು. ಸಹೋದರಿಯ ಮೊಬೈಲ್‌ನಲ್ಲಿ ಬಾಲಕಿಯ ಮೊಬೈಲ್‌ ನಂಬರ್‌ ತೆಗೆದುಕೊಂಡ ಚಂದ್ರಗೌಡ ಆಕೆಯೊಂದಿಗೆ ವಿಶ್ವಾಸ ಬೆಳೆಸಿ ಬಳಿಕ ಆಕೆಗೆ ನಗ್ನ ಫೋಟೋ ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ. ವಿಷಯ ತಿಳಿದ ಲಿಂಗರಾಜು, ಚಂದ್ರಗೌಡನಿಗೆ ತನ್ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಪುಸಲಾಯಿಸಿ ಕರೆಸಿಕೊಂಡಿದ್ದಾನೆ. ನಂಜನಗೂಡು ತಾಲೂಕಿನ ತಾಯೂರು ಗೇಟ್‌ ಬಳಿ 2022 ನ.20ರಂದು ಚಂದ್ರಗೌಡನಿಗೆ ಮದ್ಯ ಕುಡಿಸಿ ಕೊಂದು ಗೋಣಿಚೀಲದಲ್ಲಿ ಮೃತದೇಹವನ್ನು ಹಾಕಿ ಕಾವೇರಿಯ ನದಿಗೆ ಎಸೆದಿದ್ದ.

Tap to resize

Latest Videos

Pocso case: ಅಪ್ರಾಪ್ತೆಯ ಅತ್ಯಾಚಾರ; ಆರೋಪಿಗೆ 20 ವರ್ಷ ಸಜೆ

ಬಾಲಕಿಗೆ ಗರ್ಭಪಾತ: ಇಬ್ಬರ ಬಂಧನ

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ(Kadirudyavar) ಗ್ರಾಮದ ಕೊಪ್ಪದಗಂಡಿ(koppadagandi) ಪರಿಸರದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾದ ಬಳಿಕ ಗರ್ಭಪಾತ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ನಿವಾಸಿ ಮನೋಹರ (23) ಹಾಗೂ ಮಂಗಳೂರು ಕೋಣಾಜೆ(Konaje)ಯ ಮಾಧವ ಯಾನೆ ಮಾಧು (30)ಬಂಧಿತ ಆರೋಪಿಗಳು.

ಬಾಲಕಿಯು ತನ್ನ ಹತ್ತಿರದ ಸುಧೀರ್‌ ಎಂಬವನ ಮನೆಗೆ ಭಾನುವಾರ ಹಾಗೂ ಇತರ ರಜಾ ದಿನಗಳಲ್ಲಿ ಟಿವಿ ವೀಕ್ಷಣೆಗೆಂದು ಹೋಗುತ್ತಿದ್ದು, ಈ ಸಮಯ ಸುಧೀರನು ಸಮೀಪದಲ್ಲಿರುವ ಆತನ ಅಜ್ಜಿ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಬೆದರಿಸಿ ಅತ್ಯಾಚಾರ ನಡೆಸಿ ಬಳಿಕ ಆಗಾಗ ಈ ಕೃತ್ಯವನ್ನು ಕಳೆದ ಒಂದು ವರ್ಷದಿಂದ ಮುಂದುವರಿಸುತ್ತಿದ್ದ.

ಬಾಲಕಿಯ ಮೇಲೆ ಕಣ್ಣು ಹಾಕಿದ ಕಾಮುಕನಿಗೆ ಗೂಸಾ

ಇದರಿಂದ ಬಾಲಕಿಯು ಗರ್ಭವತಿಯಾಗಿದ್ದು, ಪಾರ್ವತಿ, ಮನೋಹರ ಹಾಗೂ ಮಾಧವ ಎಂಬವರ ಜತೆ ಸೇರಿ ಗರ್ಭಪಾತ ಮಾಡಿಸಿದ್ದನು. ಈ ವಿಚಾರವಾಗಿ ಡಿ.30ರಂದು ಚೈಲ್ಡ… ಲೈನ್‌ನಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಮೂಡುಬಿದಿರೆಯ ಪ್ರಜ್ಞಾ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಆಪ್ತ ಸಮಾಲೋಚನೆ ನಡೆಸಿ ಬಳಿಕ ನಾಲ್ವರ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಇಬ್ಬರು ಆರೋಪಿಗಳ ಬಂಧನವಾಗಿದೆ.

click me!