ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಬಳಸಿ 24 ಬಾರಿ ಹಣ ವರ್ಗಾವಣೆಯಾಗಿದೆ. ಶೀಘ್ರದಲ್ಲಿಯೇ ನಿಮ್ಮನ್ನುಅರೆಸ್ಟ್ ಮಾಡಲಾಗುವುದು.
ಚಂಡೀಗಢ: ಇಂದು ಆನ್‌ಲೈನ್ ನಲ್ಲಿಯೇ ದಾಖಲಾತಿಗಳಿಗೆ ಅರ್ಜಿ ಸಲ್ಲಿಸಬಹುದು. ಮೊದಲಿನಂತೆ ದಾಖಲೆಗಳನ್ನು ಹಿಡಿದು ಕಚೇರಿಯಲ್ಲಿ ಟೇಬಲ್‌ನಿಂದ ಟೇಬಲ್‌ಗೆ ಸುತ್ತೋದು ಬೇಕಿಲ್ಲ. ದಾಖಲಾತಿಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ, ತಿದ್ದುಪಡಿ, ಹೆಸರು ಸೇರ್ಪಡೆ ಹೀಗೆ ಹಲವು ಸರ್ಕಾರಿ ಕೆಲಸಗಳು ಇಂದು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಆದ್ರೆ ಇದನ್ನೇ ಕೆಲವರು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಮುಗ್ಧ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಮೋಸದ ಜಾಲಕ್ಕೆ ಸಿಲುಕಿದ ಚಂಡೀಗಢ ಮೂಲದ ಮಹಿಳೆ ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. Tribune ವರದಿ ಪ್ರಕಾರ, ಮಹಿಳೆ ನ ಚಂಡೀಗಢ ನಗರದ ಸೆಕ್ಟರ್ 11ರ ನಿವಾಸಿಯಾಗಿದ್ದಾರೆ.
ಮುಂಬೈನ ಸೈಬರ್ ಕ್ರೈಂ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕೆಲವರು ಫೋನ್ ಮಾಡಿದ್ದಾರೆ. ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನಿಂದ ಅಕ್ರಮ ಹಣ ವರ್ಗಾವಣೆ ನಡೆದಿವೆ ಎಂದು ಹೆದರಿಸಿದ್ದಾರೆ. ಇವರೆಗೂ 24 ಬಾರಿ ಕಪ್ಪು ಹಣದ ವರ್ಗಾವಣೆಯಾಗಿದ್ದು, ಶೀಘ್ರದಲ್ಲಿಯೇ ನಿಮ್ಮ ಬಂಧನವಾಗಲಿದೆ ಎಂದು ಪೊಲೀಸರಂತೆಯೇ ಮಾತನಾಡಿದ್ದಾರೆ.
undefined
ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಈ ಪ್ರಕರಣ ಹಿನ್ನೆಲೆ ನಮಗೆ ನಿಮ್ಮ ಪೂರ್ಣ ಹೆಸರು ಹಾಗೂ ದಾಖಲಾತಿಗಳ ವಿವರಗಳು ಬೇಕಾಗಿದ್ದರಿಂದ ಕರೆ ಮಾಡಲಾಗಿದೆ. ಮಾಹಿತಿ ನೀಡಿದ್ರೆ ಯಾವುದೇ ರೀತಿಯಲ್ಲಿ ಬಂಧನ ಆಗಲ್ಲ ಎಂದು ಭರವಸೆ ನೀಡಿದ್ದಾರೆ. ನಂತರ ಸೈಬರ್ ಕಳ್ಳರು ಕೇಳಿದ ಮಾಹಿತಿಯನ್ನು ಮಹಿಳೆ ಹೇಳುತ್ತಾ ಹೋಗಿದ್ದಾರೆ. ಆ ಬಳಿಕ ವಿಚಾರಣೆ ಭಾಗವಾಗಿ ನಾವು ಹೇಳುವ ಬ್ಯಾಂಕ್ ಖಾತೆಗೆ 80 ಲಕ್ಷ ರೂಪಾಯಿ ಜಮೆ ಮಾಡಬೇಕು. ವಿಚಾರಣೆ ಮುಗಿದ ನಂತರ ನಿಮ್ಮ ಹಣ ರೀಫಂಢ್ ಆಗಲಿದೆ ಎಂದಿದ್ದಾರೆ. ನಂತರ ಮಹಿಳೆ ವಂಚಕರ ಖಾತೆಗೆ ಹಣ ಜಮೆ ಮಾಡಿದ್ದಾರೆ.
ಭಾರತದಲ್ಲಿ ಸೈಬರ್ ಕ್ರೈಂ ಹೆಚ್ಚಳ
ಭಾರತ ಸೇರಿದಂತೆ ಅಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ ಕ್ರೈಂ ತವರಾಗಿ ಮಾರ್ಪಡುತ್ತಿದೆ. ಅದರಲ್ಲೂ ಬಹುತೇಕ ಸೈಬರ್ ದಾಳಿಕೋರರ ಟಾರ್ಗೆಟ್ ಭಾರತ. ಟೈಮ್ಸ್ ಆಫ್ ಇಂಡಿಯಾ ಮಾಧ್ಯಮದ ವರದಿ ಪ್ರಕಾರ ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇಕಡಾ 46ರಷ್ಟು ಏರಿಕೆಯಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 2024ರಲ್ಲಿ ಭಾರತದಲ್ಲಿ ಬರೋಬ್ಬರಿ 6 ಲಕ್ಷ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದೆ. ಒಟ್ಟು 7,061 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ. ಈ ಪೈಕಿ 812 ಕೋಟಿ ರೂಪಾಯಿ ಹಣವನ್ನು ವಂಚಕರಿಂದ ವಸೂಲಿ ಮಾಡಲಾಗಿದೆ.
ನಿವೃತ್ತಿ ಹಣ ಬರುತ್ತಿದ್ದಂತೆ ನಿಮಗೂ ಬರಬಹುದು ಈ ಕಾಲ್; ಹುಷಾರ್!