Raichur: ಸಿರವಾರ ಠಾಣೆ ಪಿಎಸ್‌ಐ ಕಿರುಕುಳ ಆರೋಪ, ಡೆತ್‌ನೋಟ್‌ ಬರೆದು ಯುವಕ ನಾಪತ್ತೆ

By Govindaraj S  |  First Published Dec 3, 2022, 11:29 PM IST

ಮಹಿಳಾ ಪಿಎಸ್‌ಐ ಕಿರುಕುಳ ತಾಳಲಾರದೇ ಡೆತ್‌ನೋಟ್‌ ಬರೆದಿಟ್ಟು ತಾಯಣ್ಣ ನೀಲಗಲ್‌ ಎಂಬ ಯುವಕ ನಾಪತ್ತೆಯಾಗಿರುವ ಘಟನೆ ಸಿರವಾರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.


ರಾಯಚೂರು (ಡಿ.03): ಮಹಿಳಾ ಪಿಎಸ್‌ಐ ಕಿರುಕುಳ ತಾಳಲಾರದೇ ಡೆತ್‌ನೋಟ್‌ ಬರೆದಿಟ್ಟು ತಾಯಣ್ಣ ನೀಲಗಲ್‌ ಎಂಬ ಯುವಕ ನಾಪತ್ತೆಯಾಗಿರುವ ಘಟನೆ ಸಿರವಾರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಜಿಲ್ಲೆ ಸಿರವಾರ ಪಟ್ಟಣದ ಪೊಲೀಸ್‌ ಠಾಣೆಯ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ತಾಯಣ್ಣ ಆರೋಪಿಸಿದ್ದಾನೆ.

ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಾಯಣ್ಣನನ್ನು ಪಿಎಸ್‌ಐ ಗೀತಾಂಜಲಿ ಶಿಂಧೆ ಠಾಣೆಗೆ ಕರೆಸಿ, ಬಹಳ ಹೊತ್ತು ಲಾಕಪ್‌ನಲ್ಲಿ ಕೂರಿಸಿದ್ದರಿಂದ ಮನನೊಂದು ನಾಪತ್ತೆ ಆಗಿರುವುದಾಗಿ ಯುವಕ ಡೆತ್‌ ನೋಟ್‌ನಲ್ಲಿ ಉಲ್ಲೇಖಸಿದ್ದಾನೆ.

Tap to resize

Latest Videos

ಸಿದ್ದರಾಮಯ್ಯ ಯಾವುದೆ ಕ್ಷೇತ್ರದಲ್ಲಿ ನಿಂತ್ರೂ ಅವರನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ: ರೂಪಾ ಶಶಿಧರ್

ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್‌ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟುನೊಂದಿದ್ದೇನೆ.

ಶುಕ್ರವಾರ ಸಂಜೆ ನನ್ನನ್ನು ಠಾಣೆಗೆ ಕರೆಸಿ ಯಾವುದೇ ವಿಚಾರಣೆ ಮಾಡದೇ ಲಾಕಪ್‌ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಇದರಿಂದ ನಾನು ಬಹಳ ನೊಂದಿದ್ದೇನೆ. ಗೀತಾಂಜಲಿ ಅವರು ನನಗೆ 3 ತಿಂಗಳಿಂದ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ. ಎಲ್ಲಿ ಕಂಡರೂ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದನ್ನು ನಾನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ಕೊರಗುತ್ತಿದ್ದೇನೆ. 

Chikkamagaluru: ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದುಪಡಿಸಿ: ಎಸ್‌ಡಿಪಿಐ

ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎರಡು ಪುಟಗಳ ಸುದೀರ್ಘ ಡೆತ್‌ ನೋಟ್‌ ಬರೆದಿರುವ ತಾಯಣ್ಣ ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್‌ ಯು ಅಮ್ಮ ಎಂದು ಬರೆದಿದ್ದಾನೆ. ಕುಟುಂಬಕ್ಕೆ ಇದರಿಂದ ಆತಂಕಗೊಂಡಿದ್ದು, ಈ ಕುರಿತು ಕುಟುಂಬಸ್ಥರು ಎಸ್ಪಿ ಅವರಿಗೆ ಶನಿವಾರ ದೂರು ನೀಡಿದ್ದಾರೆ.

click me!