
ಗದಗ (ಫೆ.12) : ತಂಗಿಯನ್ನು ಚುಡಾಯಿಸಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪುಂಡರ ಗುಂಪು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿ ನಡೆದಿದೆ.
ಫೆ.8ರಂದು ನಡೆದಿರುವ ಘಟನೆ. ತೇಜಸ್ ಮೇರವಾಡೆ (20) ಹಲ್ಲೆಗೊಳಗಾದ ಯುವಕ. ಹಲ್ಲೆ ಮಾಡಿದವರ ಪೈಕಿ ಮೂವರು ಬೆಟಗೇರಿಯ ರೋಹನ್, ರಾಹುಲ್, ಕೇಶವ್ ಎಂದು ಗುರುತಿಸಲಾಗಿದೆ.
ಡಿಪ್ಲೊಮಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ ತುಮಕೂರಿನ ಕಂಪನಿಯೊಂದ್ರಲ್ಲಿ ಇಂಟರ್ನ್ ಆಗಿ ಕೆಲಸಕ್ಕೆ ಸೇರಿದ್ದ ಯುವಕ. ಗದಗ ಖಾಸಗಿ ಸಂಸ್ಥೆಯೊಂದ್ರಲ್ಲಿ ಇಂಟರ್ ವ್ಯೂ ನೀಡೋದಕ್ಕೆ ಬಂದಿದ್ದ ತೇಜಸ್. ತೇಜಸ್ ಕುಟುಂಬದ ಯುವತಿಯೊಬ್ಬಳನ್ನ ರೋಹನ್ ಎಂಬಾತ ಚುಡಾಯಿಸಿದ್ದ. ವಿಷಯ ಗೊತ್ತಾಗಿ ರೋಹನ್ ಆ್ಯಂಡ್ ಟೀಮನ್ನ ಕರೆದು ಬುದ್ಧಿಹೇಳಿದ್ದ ತೇಜಸ್. ಇದ್ರಿಂದ ಕೋಪಗೊಂಡಿದ್ದ ರೋಹನ್ ಮತ್ತು ಸ್ನೇಹಿತರು. ಉಪಾಯದಿಂದ ಕರೆಸಿಕೊಂಡು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಶ್ರೀರಾಮನ ಅವಹೇಳನ ಮಾಡಿದ್ದ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು
ತಪ್ಪಿಸಿಕೊಂಡು ಓಡಿ ಹೋಗ್ತಿದ್ದ ತೇಜಸ್ ಗೆ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ತೇಜಸ್ ಕಾಲಿಗೆ ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿ ನಂತ್ರ ತಲೆಗೆ ಪಂಚ್ ನಿಂದ ಹೊಡೆದಿದ್ದಾರೆ.ಇದ್ರಿಂದಾಗಿ ತಲೆಗೆ ತೀವ್ರ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ತೇಜಸ್ ಗೆ ಚಿಕಿತ್ಸೆ ಕೊಡಿಸಲಾಗ್ತಿದೆ. ಗಂಭೀರವಾಗಿಗಾಯಗೊಂಡಿರೋ ತೇಜಸ್ ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಇನ್ನುಳಿದವರನ್ನ ಕೂಡಲೇ ಬಂಧಿಸುವಂತೆ ತೇಜಸ್ ಕುಟುಂಬ ಆಗ್ರಹಿಸಿದೆ. ಓದಿನಲ್ಲಿ ಮುಂದಿದ್ದ ತೇಜಸ್ ನೌಕರಿ ಹಿಡಿದು ಬದುಕು ಆರಂಭಿಸುವ ತವಕದಲ್ಲಿದ್ದ. ಯುವಕ. ಆದರೆ ಕ್ಷುಲ್ಲಕ ಕಾರಣಕ್ಕೆ ಪುಂಡರ ಅಟ್ಟಹಾಸಕ್ಕೆ ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ.
'ಶ್ರೀರಾಮ ಒಂದು ಕಲ್ಲು' ಎಂದ ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ