ನಿದ್ದೆಗೆ ಜಾರುತ್ತಿದ್ದ ಮಗುವನ್ನು ತೊಟ್ಟಿಲು ಬದಲು ಒವನ್‌ನಲ್ಲಿಟ್ಟ ತಾಯಿ, ದುರಂತ ಅಂತ್ಯ ಕಂಡ ಕಂದ!

By Suvarna News  |  First Published Feb 11, 2024, 10:20 PM IST

ಪುಟ್ಟ ಕಂದ ನಿದ್ದೆಗೆ ಜಾರುತ್ತಿತ್ತು, ಯಾವುದೋ ವಿಚಾರದಲ್ಲಿ ಮುಳುಗಿ ಹೋದ ತಾಯಿ ಓವನ್ ತೆರೆದು ಮಗುವನ್ನು ಓವನ್‌ನಲ್ಲಿಟ್ಟಿದ್ದಾರೆ. ಕೆಲವೇ ಸೆಕೆಂಡ್‍‌ಗಳಲ್ಲಿ ತಾಯಿಗೆ ತಾನು ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್‌ನಲ್ಲಿಟುರುವುದ ನೆನಪಾಗಿದೆ. ಆದರೆ ಅಷ್ಟರಲ್ಲೇ ಸಮಯ ಮೀರಿದೆ.
 


ಮಿಸ್ಸೋರಿ(ಫೆ.11) ಹೆತ್ತ ಮಗುವನ್ನು ತಾಯಿಷ್ಟು ಜೋಪಾನ ಮಾಡಿಕೊಳ್ಳುವ ಜೀವಿ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಆದರೆ ಇತ್ತೀಚೆಗೆ ಈ ಮಾತಿಗೆ ತದ್ವಿರುದ್ಧವಾದ ಹಲವು ಘಟನೆಗಳು ನಡೆದಿದೆ. ತಾಯಿ ಹಾಗೂ ಹೆತ್ತ ಮಗುವಿನ ನಡುವಿನ ಸಂಬಂಧವನ್ನೇ ಪ್ರಶ್ನೆಸಿಲು ಊದಾಹರಣೆಗಳುವು ಇವೆ. ಮೊಬೈಲ್ ಒಳಗೆ ಮುಳುಗಿ ಹೋಗಿ ಅವಾಂತರಗಳು ನಡೆದೆ ವರದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ತಾಯಿ ತೋಳಲ್ಲಿ ಮಗು ನಿದ್ದೆಗೆ ಜಾರುತ್ತಿತ್ತು. ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು, ಯಾವದೋ ವಿಚಾರದಲ್ಲಿ ತಲ್ಲೀನರಾಗಿದ್ದ ಮಹಾನ್ ತಾಯಿ, ಓವನ್‌(ಎಲೆಕ್ಟ್ರಿಕ್ ಅಡುಗೆ ಒಲೆ)ಒಳಗಿಟ್ಟಿದ್ದಾಳೆ. ಆಟೋಮ್ಯಾಟಿಕ್ ಓವನ್ ಬಾಗಿಲು ಮುಚ್ಚುತ್ತಿದ್ದಂತೆ ಆನ್ ಆಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ತಾಯಿಗೆ ತನ್ನ ತಪ್ಪಿನ ಅರಿವಾಗಿದೆ. ಅಷ್ಟರೊಳಗೆ ಕಾಲ ಮಿಂಚಿದೆ. ಈ ಘಟನೆ ಅಮೆರಿಕಕ ಕನ್ಸಾಸ್ ಸಿಟಿಯ ಮಿಸ್ಸೋರಿಯಲ್ಲಿ ನಡೆದಿದೆ 

ಮರಿಯಾ ಥೋಮಸ್ ಅನ್ನೋ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ತನಿಖೆ ನಡೆಯುತ್ತಿದೆ. ಮರಿಯಾ ಥಾಮಸ್ ಎಂದಿನಂತೆ ಮಗುವಿನ ಪಾಲನೆ ಜೊತೆಗೆ ಇತರ ಕೆಲದಲ್ಲಿ ತೊಡಗಿಸಿಕೊಂಡಿದ್ದಳು. ಕೆಲ ಹೊತ್ತಲ್ಲಿ ಮಗುವಿಗೆ ನಿದ್ದೆ ಆವರಿಸುತ್ತಿತ್ತು. ಹೀಗಾಗಿ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗುವನ್ನು ತೋಳಿನಲ್ಲಿ ಮಲಗಿಸಲು ಮುಂದಾಗಿದ್ದಾಳೆ.

Tap to resize

Latest Videos

ಗಂಟಲಲ್ಲಿ ಉಳಿದುಕೊಂಡ ತಾಯಿಯ ಎದೆಹಾಲು, ಮೂರು ತಿಂಗಳ ಮಗು ಸಾವು!

ಮಗುವನ್ನು ಎತ್ತಿಕೊಂಡು ಇತ್ತ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತಿದ್ದ ಕಾರಣ ಮಗು ನಿದ್ದೆ ಮಾಡಲು ಕೆಲ ಹೊತ್ತು ತೆಗೆದುಕೊಂಡಿದೆ. ಮಗುವಿಗೆ ನಿದ್ದೆ ಆವರಿಸುತ್ತಿದ್ದಂತೆ ಇತ್ತ ಮರಿಯಾ ಥಾಮಸ್ ಯಾವುದೋ ವಿಚಾರದಲ್ಲಿ ಮಗ್ನರಾಗಿದ್ದಾರೆ. ಮಗುವನ್ನು ತೊಟ್ಟಿಲಲ್ಲಿ ಮಲಗಿಸಬೇಕಿದ್ದ ಮರಿಯಾ ಥಾಮಸ್ ಅದ್ಯಾಕೋ ಏನೋ ಓವನ್ ಬಾಗಿಲು ತೆರೆದು ಮಗುವನ್ನು ಅದರೊಳಗಿಟ್ಟಿದ್ದಾರೆ.

ಓವನ್ ಬಾಗಿಲು ಮುಚ್ಚುತ್ತಿದ್ದಂತೆ ಓವನ್ ಆನ್ ಆಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಮರಿಯಾ ಥಾಮಸ್‌ಗೆ ತನ್ನ ತಪ್ಪಿನ ಅರವಾಗಿದೆ. ಓಡೋಡಿ ಬಂದು ಓವನ್ ಬಾಗಿಲು ತೆರೆದಾಗ ಪರಿಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣವೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಲ್ಲಾ ಪ್ರಯತ್ನ ಮಾಡಿದರೂ ಮಗು ಬದುಕುಳಿಯಲಿಲ್ಲ.  ಪ್ರಕರಣದ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕಾಗಿ ಈಕೆ ಮಗುವನ್ನು ಓವನ್‌ನಲ್ಲಿಟ್ಟಿದ್ದಾಳೆ? ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ. 

Chikkamagaluru: ನರ್ಸ್ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಸಾವು: ಮುಗಿಲು ಮುಟ್ಟಿದ ಆಕ್ರಂದನ

click me!