ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ಸಂಪರ್ಕ; ಮೆಡಿಕಲ್‌ಗೆ ನುಗ್ಗಿ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ!

By Ravi Janekal  |  First Published Jan 26, 2024, 10:26 PM IST

ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆಂದು ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ್ ಯುವತಿಗೆ ಚಾಕುವಿನಿಂದ ಇರಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.


ಹಾವೇರಿ (ಜ.26): ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆಂದು ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ್ ಯುವತಿಗೆ ಚಾಕುವಿನಿಂದ ಇರಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.

ಲಕ್ಷ್ಮಿ ಪವಾರ್ ( 20) ಚಾಕು ಇರಿತಕ್ಕೊಳಗಾದ ಯುವತಿ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಯುವತಿ. ಮಹೇಶ ಮೈಸೂರು(25) ಯುವತಿಗೆ ಚಾಕುವಿನಿಂದ ಇರಿದ ಆರೋಪಿ. ಲಕ್ಷ್ಮೀ ಪವಾರ್, ಇನ್ನೋರ್ವ ಯುವಕ ಚಾಕು ಇರಿತದಿಂದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

 

ಶಿವಮೊಗ್ಗ: ಆರು ವರ್ಷದಿಂದ ಪ್ರೇತಿಸುತ್ತಿದ್ದ ಹುಡುಗಿಗೆ ಚಾಕು ಚುಚ್ಚಿದ ಪಾಗಲ್ ಪ್ರೇಮಿ

ಘಟನೆ ಹಿನ್ನೆಲೆ ಏನು?

ಖಾಸಗಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಪವಾರ್. ಮಹೇಶ್ ಮೈಸೂರು ಎಂಬಾತ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿ ಬೇರೊಬ್ಬ ಹುಡುಗನೊಂದಿಗೆ ಸಲುಗೆಯಿಂದ ಇದ್ದಾಳೆ ಎಂದು ಕೋಪಗೊಂಡಿದ್ದ ಆರೋಪಿ ಮಹೇಶ್. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ಸುತ್ತಾಡ್ತಾಳೆಂದು ಕೊಲೆಗೆ ಸ್ಕೆಚ್ ಹಾಕಿದ್ದ ಪಾಗಲ್ ಪ್ರೇಮಿ.

ಮೆಡಿಕಲ್‌ಗೆ ನುಗ್ಗಿ ಕೊಲೆಗೆ ಯತ್ನ:

ಯುವತಿ ಖಾಸಗಿ ಮೆಡಿಕಲ್‌ನಲ್ಲಿ ಕೆಲಸಕ್ಕೆ ಹೋಗಿದ್ದಾಳೆ. ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿರುವಾಗಲೇ ಒಳನುಗ್ಗಿರುವ ಆರೋಪಿ ಮಹೇಶ್, ಯುವತಿಗೆ ಚಾಕು ಇರಿದೇ ಬಿಟ್ಟಿದ್ದಾನೆ. ಏಕಾಏಕಿ ನಡೆದ ದಾಳಿಯಿಂದ ಆತಂಕಕ್ಕೊಳಗಾದ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೂ ಬಿಡದೇ ಲಕ್ಷ್ಮೀ ಬಲಗೈ, ಮುಂಗೈ ಹಾಗೂ ಬೆರಳುಗಳು ಎಡಗೈ ಬೆರಳುಗಳಿಗೆ ಚೂರಿ ಇರಿದಿರು ಆರೋಪಿ. ಈ ವೇಳೆ ಯುವತಿಯ ರಕ್ಷಣೆಗೆ ಮುಂದಾದ ಇನ್ನೋರ್ವ ಹುಡುಗನಿಗೆ ಚಾಕುವಿನಿಂದ ಇರಿದಿದ್ದು, ಹುಡುಗನಿಗೂ ಸಹ ಹರಿದ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಕೊಲ್ಲುವ ಮೊದಲು ಅತ್ಯಾಚಾರವೆಸಗಿದ್ದನಾ ಪಾಪಿ..? ಆ ರಾತ್ರಿ ಮೈಸೂರಿನಲ್ಲಿ ನಡೆದಿದ್ದೇನು..?

ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪಾಗಲ್ ಪ್ರೇಮಿ ಮಹೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ  ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!