* ದಾವಣಗೆರೆಯಲ್ಲಿ ನೇಣಿಗೆ ಶರಣಾದ ಯುವಕ
* ನನ್ನ ಆತ್ಮಹತ್ಯೆಗೆ ಡೈರಿ ಸಿದ್ದಪ್ಪ ಕಾರಣ ಎಂದು ಆರೋಪ
* ಅನೈತಿಕ ಸಂಬಂಧದ ಶಂಕೆ
ದಾವಣಗೆರೆ, (ಫೆ.27): ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟು ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಯುವರಾಜ (26) ನೇಣಿಗೆ ಶರಣಾದ ಯುವಕ. ಮೃತ ಯುವಕ ಸಾವಿಗೂ ಮುನ್ನ ಕಾರಣವನ್ನು ಅವನೇ ಹೇಳಿಕೊಂಡಿದ್ದಾನೆ. ನನ್ನ ಆತ್ಮಹತ್ಯೆಗೆ ಡೈರಿ ಸಿದ್ದಪ್ಪ ಕಾರಣ ಎಂದು ಆರೋಪ ಮಾಡಿದ್ದಾನೆ.
Illicit Relationship: ಕುಡುಗೋಲಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿದ ಗಂಡ
ಮೃತ ಯುವರಾಜ್ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಮಹಿಳೆಯೊಬ್ಬರ ಮನೆಗೆ ಹೋಗಿದ್ದನಂತೆ. ಮಹಿಳೆಯ ಮನೆಗೆ ಹೋದ ವಿಚಾರವಾಗಿ ಗ್ರಾಮದ ಹಾಲಿನ ಡೈರಿ ಸಿದ್ದಪ್ಪ ಮೂಗು ತೂರಿಸಿದ್ದಾನೆ. ಅಲ್ಲಿ ಹೋಗಿ ಗಲಾಟೆ ಮಾಡಿ ಹೊಡೆದಿದ್ದಕ್ಕೆ ಯುವರಾಜ್ ಬೇಸರಗೊಂಡಿದ್ದನಂತೆ. ಈ ವಿಚಾರವಾಗಿ ಮನನೊಂದು ಆತ ನೇಣಿಗೆ ಶರಣಾಗಿದ್ದಾನೆ. ಅದಕ್ಕೂ ಮುನ್ನ ನನ್ನ ಆತ್ಮಹತ್ಯೆಗೆ ಡೈರಿ ಸಿದ್ದಪ್ಪ ಕಾರಣ ಎಂದು ಆರೋಪಿಸಿದ್ದಾನೆ.
ಅನೈತಿಕ ಸಂಬಂಧದ ಶಂಕೆ
ಅನೈತಿಕ ಸಂಬಂಧ ವಿಚಾರವಾಗಿ ಘರ್ಷಣೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಗ್ರಾಮದ ಮಹಿಳೆಯೊಂದಿಗೆ ಯುವರಾಜ್ ಹಾಗು ಹಾಲಿನ ಡೈರಿ ಸಿದ್ದಪ್ಪರಿಗೆ ಅನೈತಿಕ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ.
ಇದೇ ಮಹಿಳೆ ಮನೆಗೆ ಯುವರಾಜ್ ಹೋಗಿದ್ದಕ್ಕೆ ಇಬ್ಬರ ನಡುವೆ ಘರ್ಷಣೆಯಾಗಿದೆ. ಘರ್ಷಣೆಯಾದ ಬೆನ್ನಲ್ಲೇ ಸಿದ್ದಪ್ಪ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಅನೈತಿಕ ಸಂಬಂಧ(Illicit Relationship) ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಂದು(Murder) ಬಳಿಕ ಗೋವಿಂದಪುರ ಠಾಣೆಗೆ ಬಂದು ಪತಿ ಶರಣಾಗಿದ್ದಾನೆ.
ಭೈರಪ್ಪ ಲೇಔಟ್‌ನ ಆಯಿಷಾ ಬಾನು(31) ಹತ್ಯೆಗೀಡಾದ ದುರ್ದೈವಿ. ಮುಜಾಮಿಲ್ ಪಾಷ ಕೊಲೆ ಮಾಡಿದ ಆರೋಪಿ(Accused). ಕೌಟುಂಬಿಕ ಕಲಹಕ್ಕೆ ಶುಕ್ರವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಕುಡುಗೋಲಿನಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಂದಿದ್ದಾನೆ. ನಂತರ ತನ್ನ ಮೂವರು ಮಕ್ಕಳನ್ನು ಸೋದರಿ ಮನೆಗೆ ಬಿಟ್ಟು ಅಲ್ಲಿಂದ ಸೀದಾ ಠಾಣೆಗೆ(Police Station) ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ ಆಯಿಷಾ ಹಾಗೂ ಆಟೋ ಚಾಲಕ ಮುಜಾಮಿಲ್ ವಿವಾಹವಾಗಿದ್ದು, ಈ ದಂಪತಿಗೆ ರೆಯಾನ್(10), ಫರಾಹ(8) ಹಾಗೂ ಹರ್ ಮಾಯಿದ್(6) ಎಂಬ ಹೆಸರಿನ ಮಕ್ಕಳಿವೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ತನ್ನನ್ನು ಹತ್ತಿರ ಸೇರಿಸುತ್ತಿರಲಿಲ್ಲ ಎಂದು ಕೋಪಗೊಂಡಿದ್ದ ಪಾಷ, ಪತ್ನಿ ಪರಪುರುಷನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ.
ಇದೇ ವಿಷಯವಾಗಿ ಪ್ರತಿದಿನ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದ. ಬಳಿಕ ಹಿರಿಯರು ರಾಜಿ ಸಂಧಾನ ಮೂಲಕ ದಂಪತಿ ಭಿನ್ನಾಭಿಪ್ರಾಯ ಬಗೆಹರಿಸಲು ಯತ್ನಿಸಿ ವಿಫಲರಾಗಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಸಹ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಮನೆಯಲ್ಲಿದ್ದ ಕುಡುಗೋಲಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಹಕಾರ ಕೊಡುತ್ತಿಲ್ಲವೆಂದು ಪತ್ನಿಗೆ ಗಂಡ ಹೀಗಾ ಮಾಡೋದು...
ಕಟ್ಟಿಕೊಂಡ ಪತ್ನಿಯನ್ನೇ ಪತಿರಾಯನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಭೈರಪ್ಪಲೇಔಟ್‌ನಲ್ಲಿ ನಡೆದಿದೆ.
ಮುಜಾಮಿಲ್ ಪಾಷಾ ಎಂಬಾತ ಪತ್ನಿ ಆಯೇಷಾ ಭಾನು ಎಂಬುವರನ್ನ ಭೀಕರವಾಗಿ ಹತ್ಯೆ ಮಾಡಿದ್ದಾನೆ. ತಡರಾತ್ರಿ ತನ್ನ ಪತ್ನಿಯನ್ನೇ ಕೊಚ್ಚಿ ಕೊಂದ ಆರೋಪಿ ಪತಿ, ಇಂದು (ಶನಿವಾರ) ಬೆಳಗ್ಗೆ 3ರ ಸುಮಾರಿಗೆ ಗೋವಿಂದಪುರ ಪೊಲೀಸ್ ಠಾಣೆಗೆ ಆಗಮಿಸಿದ್ದ. ತಾನು ತನ್ನ ಪತ್ನಿಯನ್ನ ಕೊಂದಿದ್ದೇನೆ ಎಂದು ಪೊಲೀಸರ ಮುಂದೆ ಮಚ್ಚು ಸಮೇತ ಶರಣಾಗಿದ್ದಾನೆ.
Illicit Relationship : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಸೀರೆ ಸುತ್ತಿ ಕೊಲೆ! ಪಾಪಿ ಗಂಡ
ಮೂಲತಃ ರಾಮನಗರ ನಿವಾಸಿಯಾಗಿರುವ ಆರೋಪಿ, ನಗರದಲ್ಲಿ ಆಟೋ ಓಡಿಸಿಕೊಂಡಿದ್ದ. ಹನ್ನೊಂದು ವರ್ಷದ ಹಿಂದೆ ಆಯೇಷಾ ಭಾನುವನ್ನ ಮದುವೆಯಾಗಿದ್ದ. ಮುಜಾಮಿಲ್ ಪಾಷಾ ದಂಪತಿಗೆ ಈಗಾಗಲೇ ಮೂರು ಮಕ್ಕಳಿವೆ.
ಗಂಡನಿಗೆ ಆಯೇಷಾ ಭಾನು ಸಹಕಾರ ನೀಡದ ಹಿನ್ನೆಲೆ ಇಬ್ಬರ ನಡುವೆ ಕಿರಿಕ್ಗಳು ನಡೆಯುತ್ತಲೇ ಇತ್ತು ಎನ್ನಲಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ.