Illicit Relationship: ಕುಡುಗೋಲಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿದ ಗಂಡ

By Kannadaprabha News  |  First Published Feb 27, 2022, 1:43 PM IST

*   ಹಿರಿಯರು ರಾಜೀಮಾಡಿದ್ದರೂ ನಿತ್ಯ ಪತ್ನಿ ಜತೆ ಜಗಳ
*  ಸಿಟ್ಟಿನ ಭರದಲ್ಲಿ ಕೊಲೆ
*  ಪೊಲೀಸ್‌ ಠಾಣೆಗೆ ಬಂದು ಶರಣಾದ ಆರೋಪಿ 


ಬೆಂಗಳೂರು(ಫೆ.27):  ಅನೈತಿಕ ಸಂಬಂಧ(Illicit Relationship) ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಂದು(Murder) ಬಳಿಕ ಗೋವಿಂದಪುರ ಠಾಣೆಗೆ ಬಂದು ಪತಿ ಶರಣಾಗಿದ್ದಾನೆ.

ಭೈರಪ್ಪ ಲೇಔಟ್‌ನ ಆಯಿಷಾ ಬಾನು(31) ಹತ್ಯೆಗೀಡಾದ ದುರ್ದೈವಿ. ಮುಜಾಮಿಲ್ ಪಾಷ ಕೊಲೆ ಮಾಡಿದ ಆರೋಪಿ(Accused). ಕೌಟುಂಬಿಕ ಕಲಹಕ್ಕೆ ಶುಕ್ರವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಕುಡುಗೋಲಿನಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಂದಿದ್ದಾನೆ. ನಂತರ ತನ್ನ ಮೂವರು ಮಕ್ಕಳನ್ನು ಸೋದರಿ ಮನೆಗೆ ಬಿಟ್ಟು ಅಲ್ಲಿಂದ ಸೀದಾ ಠಾಣೆಗೆ(Police Station) ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

ಹನ್ನೆರಡು ವರ್ಷಗಳ ಹಿಂದೆ ಆಯಿಷಾ ಹಾಗೂ ಆಟೋ ಚಾಲಕ ಮುಜಾಮಿಲ್ ವಿವಾಹವಾಗಿದ್ದು, ಈ ದಂಪತಿಗೆ ರೆಯಾನ್(10), ಫರಾಹ(8) ಹಾಗೂ ಹರ್ ಮಾಯಿದ್(6) ಎಂಬ ಹೆಸರಿನ ಮಕ್ಕಳಿವೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ತನ್ನನ್ನು ಹತ್ತಿರ ಸೇರಿಸುತ್ತಿರಲಿಲ್ಲ ಎಂದು ಕೋಪಗೊಂಡಿದ್ದ ಪಾಷ, ಪತ್ನಿ ಪರಪುರುಷನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. 

ಇದೇ ವಿಷಯವಾಗಿ ಪ್ರತಿದಿನ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದ. ಬಳಿಕ ಹಿರಿಯರು ರಾಜಿ ಸಂಧಾನ ಮೂಲಕ ದಂಪತಿ ಭಿನ್ನಾಭಿಪ್ರಾಯ ಬಗೆಹರಿಸಲು ಯತ್ನಿಸಿ ವಿಫಲರಾಗಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಸಹ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಮನೆಯಲ್ಲಿದ್ದ ಕುಡುಗೋಲಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮಹಿಳೆ ಸಾವಿನ ತನಿಖೆ ವೇಳೆ ಅಣ್ಣ-ತಂಗಿಯ ಪಲ್ಲಂಗದಾಟ ಬಯಲು

ತುಮಕೂರು: ಮನೆ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ (Death Case) ಟ್ವಿಸ್ಟ್ ಸಿಕ್ಕಿದೆ. ಕಳೆದ ಜನವರಿ 30 ರಂದು ತುಮಕೂರು(Tumakuru) ಜಿಲ್ಲೆಯ ರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸ್ರು(Police), ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು ಮಾಡಿದ್ದಾರೆ.

ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಸರಸ ಸಲ್ಲಾಪ, ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

ಹೌದು....ಸಾವಿತ್ರಮ್ಮ ಸಂಪಿಗೆ ಬಿದ್ದು ಸಾವನ್ನಪ್ಪಿಲ್ಲ. ಬದಲಾಗಿ ಅನೈತಿಕ ಸಂಬಂಧಕ್ಕೆ (Illicit Relationship)  ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿ ಸಂಪಿಗೆ ಹಾಕಿದ್ದಾರೆ ಎಂದು ಪೊಲೀಸರ ತನಿಖೆ ವೇಳೆ ಬಟಾಬಯಲಾಗಿದೆ.

ಅಣ್ಣನ ಜತೆ ಲವ್ವಿ-ಡವ್ವಿಗಾಗಿ ಹೆತ್ತವಳನ್ನೇ ಕೊಂದಳು

ಅನೈತಿಕ ಸಂಬಂಧಕ್ಕಾಗಿ ಅಣ್ಣನ ಜೊತೆ ಸೇರಿ ತಾಯಿಯನ್ನೇ(ಸಾವಿತ್ರಮ್ಮ) ಮಗಳು ಕೊಂದಿದ್ದಾಳೆ. ಈ ಸಂಬಂಧ ಪುನೀತ್ (26) ಮತ್ತು ಶೈಲಜಾ (21) ಬಂಧಿತ ಅಣ್ಣ-ತಂಗಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದರು. ಕಳೆದ ಜನವರಿ 30 ರಂದು ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) (mother) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ಪ್ರೀತಿಗೆ ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದರು.

ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ಸಂಬಂಧದಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದಾನೆ. ಹೊರಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ (Brother And Sister) ಇದ್ದರು. ಆದ್ರೆ, ಮನೆಯೊಳಗೆ ಇಬ್ಬರೂ  ಲವ್ವಿ-ಡವ್ವಿಯಲ್ಲಿ ತೊಡಗುತ್ತಿದ್ದರು. ಇಬ್ಬರ ಈ ಪಲ್ಲಂಗದಾಟ ಶೈಲಜಾ ತಾಯಿ ಸಾವಿತ್ರಮ್ಮಗೆ ಗೊತ್ತಾಗಿದೆ. ಇದಕ್ಕೆ ಬ್ರೇಕ್ ಹಾಕಿ ಪುನೀತ್ ಹಾಗೂ ಶೈಲಜಾಗೆ ಸಾವಿತ್ರಮ್ಮ ಹಾಗೂ ಪುನೀತ್ ತಾಯಿ ಬುದ್ಧಿ ಹೇಳಿದ್ದರು.

click me!