* ಗಂಡನಿಗೆ ಕೆಲಸ ಕೊಟ್ಟು ಪತ್ನಿಯನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್
* ಪಕ್ಕದ್ಮನೆ ಆಂಟಿ ಮೇಲೆ ಕಣ್ಣು ಹಾಕಿದ ಕಿರಾತಕ
* ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ
ಹುಬ್ಬಳ್ಳಿ, (ಮೇ.21): ಪಕ್ಕದ ಮನೆಯ ಮಹಿಳೆಯೊಬ್ಬಳ ಮೇಲೆ ಕಣ್ಣು ಹಾಕಿದ ಕಿರಾತಕನೊಬ್ಬ, ಗಂಡನನ್ನು ತನ್ನ ಮನೆಯ ಕಾರು ಚಾಲಕನನ್ನಾಗಿ ಮಾಡಿಕೊಂಡು ಮಾಡಬಾರದ ಕೆಲಸ ಮಾಡಿದ್ದಾನೆ. ಗಂಡನಿಗೆ ಕೆಲಸ ಕೊಟ್ಟು ಪತ್ನಿಯನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್ ಮಾಡಿದ್ದಾನೆ.
ಹೌದು....ಗಂಡನಿಗೆ ತನ್ನ ಕಾರು ಚಾಲಕನನ್ನಾಗಿ ಮಾಡಿಕೊಂಡು ಆತನ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಮೌಲಾಸಾಬ್ ಮಹ್ಮದ್ ಸಾಬ್ ಹುಲಸೂರ ಎಂಬ ಕಾಮುಕನ ವಿರುದ್ಧ ಮಹಿಳೆ ಈಗ ದೂರು ದಾಖಲಿಸಿದ್ದಾರೆ.
ಬಿಜೆಪಿ ಮುಖಂಡನ ಸಾವು, ಇಬ್ಬರು ಮಹಿಳೆಯರು, ಹತ್ತಾರು ಅನುಮಾನ
ಮಹಿಳೆಗಿಂತಲೂ ಚಿಕ್ಕವನಾಗಿರುವ ಮೌಲಾಸಾಬ್ ಆಕೆಯ ಮೇಲೆ ಕಣ್ಣು ಹಾಕಿ ಹೇಗಾದರೂ ಅವಳನ್ನು ತನ್ನವಳನ್ನಾಗಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದ. ಇದಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಈ ಕಾಮುಕ ಬಹಳ ಯೋಚನೆ ಮಾಡಿ ಆಕೆಯ ಗಂಡನನ್ನು ತನ್ನ ಕಾರಿನ ಚಾಲಕ ಮಾಡಿಕೊಂಡ. ಇವನ ಈ ದುಷ್ಕೃತ್ಯ ಅರಿಯದ ಮಹಿಳೆಯ ಗಂಡ ಕೆಲಸ ಸಿಕ್ಕಿತೆಂದು ಖುಷಿಯಿಂದ ಇದ್ದ.
ಆದ್ರೆ, ಮೌಲಾಸಾಬ್ನ ಉದ್ದೇಶವೇ ಬೇರೆಯಾಗಿತ್ತು. ಕೆಲಸದ ನಿಮಿತ್ತ ಪದೇ ಪದೇ ಆಕೆಯ ಗಂಡನನ್ನು ಬೇರೆ ಊರಿಗೆ ಕಳುಹಿಸುತ್ತಿದ್ದ. ಬಳಿಕ ಮಹಿಳೆ ಒಂಟಿಯಾಗಿರುವಾಗ ಮನೆಗೆ ನುಗ್ಗಿ ಅತ್ಯಾಚಾರ ಎಸಗುತ್ತಿದ್ದ. ಎರಡು ತಿಂಗಳು ಹೀಗೆಯೇ ಮಾಡಿದ್ದಾನೆ. ಅದರ ವಿಡಿಯೋ ಕೂಡ ಮಾಡಿಕೊಂಡು ಯಾರಿಗಾದರೂ ಹೇಳಿದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೇ ಕಾರು ಚಲಾಯಿಸಿಕೊಂಡು ಹೋಗಿರೋ ಗಂಡನನ್ನು ಮರ್ಡರ್ ಮಾಡಿಸ್ತೇನೆ ಎಂದೂ ಹೆದರಿಸುತ್ತಿದ್ದ.
ಈತನ ಕಾಟದಿಂದ ರೋಸಿ ಹೋದ ಮಹಿಳೆ, ಕೊನೆಗೂ ಪೊಲೀಸ್ ಮೆಟ್ಟಿಲೇರಿದ್ದಾಳೆ. ಆದ್ರೆ, ಪ್ರಕರಣ ದಾಖಲಿಸಿ 25 ದಿನ ಕಳೆದರೂ ಇದುವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಸಂತ್ರಸ್ತೆಗೆ ದುಷ್ಕರ್ಮಿಗಳು ಬೆದರಿಕೆಗಳು ಹಾಕುತ್ತಿದ್ದಾರೆ.
ಇದರಿಂದ ಬೆದರಿದ ಮಹಿಳೆ, ಪತಿ ಹಾಗೂ ಕುಟುಂಬದವರು ಊರನ್ನೇ ತೊರೆದಿದ್ದಾರೆ ಎನ್ನಲಾಗುತ್ತಿದೆ. ಹುಬ್ಬಳ್ಳಿ ಮಹಿಳಾ ಠಾಣೆ ಹಾಗೂ ಕಲಘಟಗಿ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವಾಗಿದೆ.
ಮಗನನ್ನೇ ಮದುವೆಯಾದ ತಾಯಿ: ಪತಿಯಿಂದ ಪೊಲೀಸರಿಗೆ ದೂರು
ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನೇ ಮದುವೆಯಾದ ಘಟನೆ ಉತ್ತರಾಖಂಡ್ ರಾಜ್ಯದ ಬಜ್ಪುರ್‌ನಲ್ಲಿ ನಡೆದಿದೆ. ಘಟನೆಯಿಂದ ಆಘಾತಗೊಂಡ ಪತಿ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಮಧ್ಯ ವಯಸ್ಸಿನ ಇಂದ್ರಾರಾಜ್ ಎಂಬವರು ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದು, ಪತ್ನಿ ಮಗನನ್ನೇ ಮದುವೆಯಾಗಿದ್ದಲ್ಲದೇ ಮನೆಯಲ್ಲಿದ್ದ 20 ಸಾವಿರ ರೂಪಾಯಿಯನ್ನು ಹೊತ್ತೊಯ್ದಿದ್ದಾಳೆ ಎಂದು ಪತಿ ದೂರಿನಲ್ಲಿ ಹೇಳಿದ್ದಾರೆ. ಅಂದಹಾಗೆ ಪತ್ನಿ ಮದುವೆಯಾದ ಪುತ್ರ ಆಕೆಯ ಮೊದಲ ಪತಿಯ ಮಗ ಎಂದು ತಿಳಿದು ಬಂದಿದೆ.
ಉತ್ತರಾಖಂಡ್‌ನ (Uttarakhand) ಉಧಮ್ ಸಿಂಗ್ ನಗರದ (Udham Singh Nagar) ಬಜ್ಪುರ್‌ನಲ್ಲಿ ಈ ಘಟನೆ ನಡೆದಿದೆ. ಇಂದ್ರರಾಮ್ ಅವರು ಹನ್ನೊಂದು ವರ್ಷಗಳ ಹಿಂದೆ ಬಬ್ಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ಇಂದ್ರರಾಮ್‌ನನ್ನು ಮದುವೆಯಾದಾಗ ಆಕೆಯ ಮೊದಲ ಪತಿ ಬಬ್ಲಿಯನ್ನು ತೊರೆದಿದ್ದರು. ಮೊದಲ ಪತಿಯೊಂದಿಗೆ ಬಬ್ಲಿಗೆ ಇಬ್ಬರು ಮಕ್ಕಳಿದ್ದರು. ನಂತರ ಇಂದ್ರರಾಮ್ ಜೊತೆಗಿನ ದಾಂಪತ್ಯದಲ್ಲಿ ಇವರಿಗೆ ಮೂವರು ಮಕ್ಕಳಿದ್ದಾರೆ.