ಯುವತಿ ಗ್ಯಾಂಗ್‌ ರೇಪ್‌: ಬಾಂಗ್ಲಾದ 12 ಅಪರಾಧಿಗಳಿಗೆ ಶಿಕ್ಷೆ

By Girish Goudar  |  First Published May 21, 2022, 4:59 AM IST

*   ಹಣಕಾಸಿನ ವಿಚಾರಕ್ಕೆ ಸಾಮೂಹಿಕ ಅತ್ಯಾಚಾರ
*  ಸೆಷನ್ಸ್‌ ಮತ್ತು ಸಿವಿಲ್‌ ಕೋರ್ಟ್‌ ತೀರ್ಪು
*  ಸಾಮಾಜಿಕ ಜಾಲತಾಣದಲ್ಲಿ ಬಳಿಕ ವಿಡಿಯೋ ವೈರಲ್‌
 


ಬೆಂಗಳೂರು(ಮೇ.21): ಹಣಕಾಸಿನ ವಿವಾದಕ್ಕೆ ಬಾಂಗ್ಲಾದೇಶ ಮೂಲದ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅದನ್ನು ಚಿತ್ರೀಕರಣ ಮಾಡಿ ವೈರಲ್‌ ಮಾಡಿದ್ದ 12 ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ ನಗರದ 54ನೇ ಸೆಷನ್ಸ್‌ ಮತ್ತು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಎನ್‌.ಸುಬ್ರಹ್ಮಣ್ಯ ಅವರು ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣ ಪ್ರಮುಖ ಆರೋಪಿಗಳಾದ ಬಾಂಗ್ಲಾದೇಶ ಮೂಲದ ಹೃದಯ್‌ ಬಾಬು, ಮೊಹಮ್ಮದ್‌ ಬಾಬು ಅನ್ವರ್‌, ಅಕಿಲ್‌, ಸಾಗರ್‌ ಅಲಿಯಾಸ್‌ ರಕಿಬುಲ್‌ ಇಸ್ಲಾಂ ಸಾಗರ್‌, ಕಾಜಲ್‌, ಮಹಮ್ಮದ್‌ ಅಲಾಮಿನ್‌ ಹುಸೇನ್‌, ತಾನೀಯಾಖಾನ್‌ ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಆರೋಪಿಗಳಿಗೆ ಪ್ರೋತ್ಸಾಹ ನೀಡಿದ್ದ ನಸ್ರುತ್‌ ಎಂಬಾಕೆಗೆ 20 ವರ್ಷ, ದಾಲೀಮ್‌ ಅಹ್ಮದ್‌ ಜೋಬಿನ್‌ ಎಂಬಾತನಿಗೆ 5 ವರ್ಷ ಹಾಗೂ ಶೋಬುಜ್‌ ಮತ್ತು ಮೊಹ್ಮಮದ್‌ಗೆ 9 ತಿಂಗಳು ಶಿಕ್ಷೆ ವಿಧಿಸಿದೆ.

Tap to resize

Latest Videos

ಹೈದರಾಬಾದ್‌ ರೇಪಿಸ್ಟ್‌ಗಳ ಎನ್‌ಕೌಂಟರ್ ನಕಲಿ, ನ್ಯಾಯಾಂಗ ಆಯೋಗದ ವರದಿಯಲ್ಲಿ ಶಾಕಿಂಗ್ ಮಾಹಿತಿ!

ಹಿನ್ನೆಲೆ: 

2021ರ ಮೇ 18ರಂದು ರಾಮಮೂರ್ತಿ ನಗರದ ಕನಕ ನಗರದ ಮನೆಯಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ವಿಡಿಯೋ ವೈರಲ್‌ ಆಗಿತ್ತು. ಬಾಂಗ್ಲಾ ಮತ್ತು ಭಾರತದ ಕೆಲ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತನಿಖೆ ಕೈಗೊಂಡ ಬೆಂಗಳೂರು ಪೊಲೀಸರು 3 ದಿನಗಳಲ್ಲಿ ಪ್ರಕರಣ ಪತ್ತೆ ಹಚ್ಚಿದ್ದರು.

ಅಲ್ಲದೆ, 11 ಬಾಂಗ್ಲಾ ದೇಶಿಗರು ಮತ್ತು ಒಬ್ಬ ಸ್ಥಳೀಯನನ್ನು ಬಂಧಿಸಿದ್ದರು. ತನಿಖೆ ವೇಳೆ ವೈಜ್ಞಾನಿಕ ವಿಧಾನಗಳಾದ ಡಿಎನ್‌ಎ, ವಿದ್ಯುನ್ಮಾನ ಸಾಕ್ಷ್ಯಗಳು, ಮೊಬೈಲ್‌ ಕರೆಗಳು, ಬೆರಳಚ್ಚು, ಧ್ವನಿ ಮುದ್ರಣಗಳನ್ನು ಸಂಗ್ರಹಿಸಿ 28 ದಿನಗಳಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಅಲ್ಲದೆ, ಕೇವಲ 3 ತಿಂಗಳಲ್ಲಿ 44 ಸಾಕ್ಷ್ಯಿಧಾರರ ವಿಚಾರಣೆಗೆ ಒಳಪಡಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಶುಕ್ರವಾರ ತೀರ್ಪು ನೀಡಿದೆ. ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ವೀರಣ್ಣ ತಿಗಡಿ ವಾದ ಮಂಡಿಸಿದ್ದರು.
 

click me!