ಮೆಟ್ರೋದಲ್ಲಿ ಭಿಕ್ಷೆ ಬೇಡಿ ದಂಡ ಕಟ್ಟಿದ್ದಾಯ್ತು, ಇದೀಗ ದೇಣಿಗೆ ಸಂಗ್ರಹಿಸಲು ಹೋಗಿ ತಗ್ಲಾಕೊಂಡ ಮತ್ತೊರ್ವ ಮಹಿಳೆ!

By Ravi Janekal  |  First Published Nov 28, 2023, 10:32 AM IST

ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿ ದಂಡ ಕಟ್ಟಿದ್ದಾಯ್ತು, ಇದೀಗ ಇನ್ನೊಬ್ಬ ಮಹಿಳೆ ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹ ಮಾಡಲು ಹೋಗಿ ತಗ್ಲಾಕೊಂಡಿರುವ ಘಟನೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.


ಬೆಂಗಳೂರು (ನ.28): ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿ ದಂಡ ಕಟ್ಟಿದ್ದಾಯ್ತು, ಇದೀಗ ಇನ್ನೊಬ್ಬ ಮಹಿಳೆ ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹ ಮಾಡಲು ಹೋಗಿ ತಗ್ಲಾಕೊಂಡಿರುವ ಘಟನೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.

ಭಾಗ್ಯ ಎಂಬ  ಮಹಿಳೆಯಿಂದ ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹ. ದೇಣಿಗೆ ಸಂಗ್ರಹಿಸುತ್ತಿದ್ದ ವೇಳೆ ಹಿಡಿದು ದಂಡ ವಿಧಿಸಿದ ಸೆಕ್ಯೂರಿಟಿ ಗಾರ್ಡ್. ಹಿಡಿದು ದಂಡ ವಿಧಿಸಿದ ಸೆಕ್ಯುರಿಟಿ. ಮಹಿಳೆ ಮೇಲೆ ಮೆಟ್ರೋ ಕಾಯಿದೆ ಸೆಕ್ಷನ್ 59 ರ ಅಡಿ ಪ್ರಕರಣ ಮಹಿಳೆ ವಿರುದ್ಧ ದಾಖಲು ಮಾಡಿದ ಮೆಟ್ರೋ ನಿಗಮ.

Latest Videos

undefined

ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬಿತ್ತು ₹500 ದಂಡ!

ಘಟನೆ ವಿವರ:

ಮೆಟ್ರೋದಲ್ಲಿ ದೂರವಾಣಿ ನಗರದಲ್ಲಿರುವ ಸಮಾಜ ಸೇವೆ ಸಂಸ್ಥೆಯೊಂದರ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದ ಮಹಿಳೆ. ಶುಕ್ರವಾರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿರುವ ಮಹಿಳೆ  ಪ್ರಯಾಣಿಕರಿಂದ ದೇಣಿಗೆ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದರೆ ಮಹಿಳೆ ದೇಣಿಗೆ ಸಂಗ್ರಹಿಸಿರುವುದು ಯಾರ ಗಮನಕ್ಕೂ ಬಂದಿಲ್ಲ. ಆದರೆ ಮರುದಿನ ಬೆಳಗ್ಗೆ ಶನಿವಾರದಂದು ಮತ್ತೆ ದೇಣಿಗೆ ಸಂಗ್ರಹಿಸಲು ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ರೈಲು ಹತ್ತಿದ್ದಾರೆ. ಮೆಟ್ರೋ ಹತ್ತುವಾಗ ಕೈಯಲ್ಲಿ ದೇಣಿಗೆ ಸಂಗ್ರಹದ ಪೆಟ್ಟಿಗೆ ಜೊತೆಗೆ ತೆಗೆದುಕೊಂಡು ಬಂದಿದ್ದ ಮಹಿಳೆ. ಈಗ ಯಾರ ಬಳಿಯೂ ಹಣ ಇಲ್ಲದಿರುವುದರಿಂದ ಬುದ್ಧಿ ಬಳಸಿರುವ ಮಹಿಳೆ ಕ್ಯೂಆರ್ ಕೋಡ್ ಸಹ ಜೊತೆಗೆ ತಂದಿದ್ದಾಳೆ. 

ಸಿನಿಮಾ ಕಲಾವಿದರಿಗೆ ಗುಡ್ ನ್ಯೂಸ್; ದೆಹಲಿ, ಚನ್ನೈ ಬಳಿಕ ನಮ್ಮ ಮೆಟ್ರೋದಲ್ಲೂ ಸಿನಿಮಾ ಶೂಟಿಂಗ್ ಅವಕಾಶ!

ಮೆಟ್ರೋದಲ್ಲಿ ದೇಣಿಗೆ ಕೇಳಿದಾಗ ಕೆಲವು ಪ್ರಯಾಣಿಕರು ಹಣ ನೀಡಿದ್ದಾರೆ. ದೇಣಿಗೆ ಸಂಗ್ರಹಿಸುತ್ತಿದ್ದ ಮಹಿಳೆಯನ್ನ ಗಮನಿಸಿದ ಸಹಾಯಕ ಭದ್ರತಾ ಸಿಬ್ಬಂದಿ, ಮಹಿಳೆಯನ್ನ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿಸಿ ನಿಯಂತ್ರಣ ಕೊಠಡಿಯಲ್ಲಿ ಮಹಿಳೆಯನ್ನು ವಿಚಾರಿಸಿದ್ದಾರೆ. ಬಳಿಕ ಮಹಿಳೆ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಜ್ಞಾನಜ್ಯೋತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಂದು ಗುರುತಿಸಿಕೊಂಡು ಮೆಟ್ರೋದಲ್ಲಿ ದೇಣಿಗೆ ಸಂಗ್ರಹಿಸಿದ್ದ ಮಹಿಳೆ. ಆಗ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಸೆಕ್ಯುರಿಟಿ. ಮಹಿಳೆಯಿಂದ 500 ರೂಪಾಯಿ ದಂಡ ಕಟ್ಟಿಸಿಕೊಂಡು, ಕ್ಷಮಾಪಣೆ ಪತ್ರ ಪಡೆದುಕೊಂಡಿರೋ ಮೆಟ್ರೋ ಅಧಿಕಾರಿಗಳು

click me!