ಗೃಹ ಸಚಿವರ ತವರು ಜಿಲ್ಲೆಯಲ್ಲೇ ಮನಕಲುಕುವ ಘಟನೆ: ಮನೆ ಕೊಡುವುದಾಗಿ ನಂಬಿಸಿ ಅಂಧ ದಂಪತಿಗೆ 13 ಲಕ್ಷ ವಂಚಿಸಿದ ಮಹಿಳೆ!

By Ravi Janekal  |  First Published Oct 5, 2024, 1:34 PM IST

ಮನೆ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊರ್ವಳು ಅಂಧ ದಂಪತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಘಟನೆ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.


ತುಮಕೂರು (ಅ.5): ಮನೆ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊರ್ವಳು ಅಂಧ ದಂಪತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಘಟನೆ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅಂಧ ಅಣ್ಣಪ್ಪ ಗಾದ್ರಿ ಹಾಗೂ ಮಮತಾ ದಂಪತಿ ವಂಚನೆಗೊಳಗಾದ ಅಂಧ ದಂಪತಿ. ಶಿಲ್ಪಾ ಎಂಬಾಕೆಯಿಂದ ವಂಚನೆ. ಮೂಲತಃ ಚಿತ್ರದುರ್ಗದವರಾದ ಅಣ್ಣಪ್ಪ, ತುಮಕೂರಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಂಪತಿ. ಅಣ್ಣಪ್ಪ ಎಸ್‌ಬಿಐ ಬ್ಯಾಂಕ್ ನೌಕರ, ಪತ್ನಿ ಮಮತಾ, ತುಮಕೂರು ಪಾಲಿಕೆಯ ನೌಕರಳಾಗಿದ್ದಾಳೆ. ಹಲವು ವರ್ಷಗಳಿಂದ ತುಮಕೂರಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿದ್ದಾರೆ. ನಗರದಲ್ಲೊಂದು ಸ್ವಂತ ಸೂರು ಹೊಂದಬೇಕು ಎಂಬ ಕನಸು ಕಂಡಿದ್ದ ದಂಪತಿ. ಇದೇ ವೇಳೆ ತುಮಕೂರಿನ ಚಂದ್ರಮೌಳೇಶ್ವರ ಬಡಾವಣೆ ನಿವಾಸಿಯಾಗಿರುವ ಶಿಲ್ಪಾ ಎಂಬಾಕೆ 60 ಲಕ್ಷ ರೂಪಾಯಿಗೆ ಮನೆ ಮಾರಾಟ ಮಾಡುವ ಬಗ್ಗೆ ತಿಳಿಸಿದ್ದಾಳೆ. 

Tap to resize

Latest Videos

undefined

ನನ್ನ ಸಾವಿಗೆ ನಾನೇ ಕಾರಣ: ಪಿಜಿ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ ಆಂಧ್ರದ ಮಹಿಳಾ ಟೆಕಿ!

ಆ ಮನೆ ಖರೀದಿಸಲು ಮುಂದಾಗಿದ್ದ ಅಣ್ಣಪ್ಪ ದಂಪತಿ. ಶಿಲ್ಪಾ ಮನೆ ಅಗ್ರಿಮೆಂಟ್ ವೇಳೆ 2022ರಲ್ಲಿ ದಂಪತಿಯಿಂದ 13 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ.  ಆದರೆ ಹಣ ಪಡೆದು ಬಳಿಕ ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆರೋಪಿ ಮಹಿಳೆ. ಇತ್ತ ಹಣ ವಾಪಸ್ ಕೊಡದೇ ಅತ್ತ ಮನೆಯೂ ಇಲ್ಲದೆ ವಂಚನೆ ಮಾಡಿರುವ ಮಹಿಳೆ. ಕಳೆದೆರಡು ವರ್ಷಗಳಿಂದ ಹಣಕ್ಕಾಗಿ ಅಲೆದಾಡಿ ಸುಸ್ತಾಗಿ ಕಣ್ಣೀರುಡುತ್ತಿರುವ ಅಂಧ ದಂಪತಿ. ಅಣ್ಣಪ್ಪ ಕುಟುಂಬಕ್ಕೆ ಹಣ ಕೊಡದೇ ಫೋನ್ ಕರೆಗೂ ಸಿಗದೆ ತಲೆಮರೆಸಿಕೊಂಡು ತಿರುಗಾಡುತ್ತಿರುವ ಆರೋಪಿ ಮಹಿಳೆ. 

ದಾವಣಗೆರೆ: ಟ್ರಾನ್ಸಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಲೈನ್‌ಮ್ಯಾನ್ ದುರಂತ ಸಾವು!

ನ್ಯಾಯ ಕೊಡಿಸದ ಕ್ಯಾತಸಂದ್ರ ಪೊಲೀಸರು!

ದಂಪತಿಯ ಅಂಧತ್ವವನ್ನೇ ಬಂಡಾವಳ ಮಾಡಿಕೊಂಡು ವಂಚಿಸಿರುವ ಆರೋಪಿ ಮಹಿಳೆ. 13 ಲಕ್ಷ ರೂಪಾಯಿ ಹಣದ ಜೊತೆಗೆ ಅಗ್ರಿಮೆಂಟ್‌ನಲ್ಲೂ ವಂಚನೆ ಮಾಡಿರುವ ಶಿಲ್ಪಾ. ವಂಚನೆಗೊಳಗಾದ ಅಣ್ಣಪ್ಪ ದಂಪತಿ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ನ್ಯಾಯ ಕೊಡಿಸದ ಪೊಲೀಸರು. ಎಫ್‌ಐಆರ್ ದಾಖಲಿಸಿರುವ ದಂಪತಿ. ಆದ್ರೂ ವಂಚನೆ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ಅಂಧ ದಂಪತಿಗೆ ರಕ್ಷಣೆ ನಿಲ್ಲಬೇಕಾದ ಪೊಲೀಸರೇ ನ್ಯಾಯ ಕೊಡಿಸದೆ ತಾತ್ಸಾರ ಮಾಡುತ್ತಿದ್ದಾರೆ. ಶಿಲ್ಪಾಳನ್ನ ಠಾಣೆಗೆ ಕರೆಸಿದ್ರೂ, ಹಣ ವಾಪಸ್ ಕೊಡಿಸಿಲ್ಲ. ಕಳೆದೆರಡು ವರ್ಷದಿಂದ ಹಣಕ್ಕಾಗಿ ನ್ಯಾಯ ಕೊಡಿಸುವಂತೆ ಅಲೆದಾಡುತ್ತಿರುವ ಅಂಧ ದಂಪತಿ. ಶೋಷಿತರ ಅಂಗವಿಕಲರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರು ಮೌನವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

click me!