Mangaluru Blast case: ಹಿಂದೂ ಸೋಗಿನಲ್ಲಿದ್ದ ಮಂಗಳೂರು ಬಾಂಬರ್‌!

By Kannadaprabha NewsFirst Published Nov 23, 2022, 3:10 AM IST
Highlights
  • ಹಿಂದೂ ಸೋಗಿನಲ್ಲಿದ್ದ ಮಂಗಳೂರು ಬಾಂಬರ್‌!
  • ಹಿಂದೂ ಹೆಸರಲ್ಲಿ ಸಿಮ್‌, ಆಧಾರ್‌ ಕಾರ್ಡ್‌ಗಳನ್ನು ಹೊಂದಿದ್ದ ಶಾರೀಕ್‌
  •  ಸ್ಫೋಟ ಮುನ್ನ ಕೇಸರಿ ಶಾಲು ಧರಿಸಿದ್ದ
  • ಮೊಬೈಲಲ್ಲೂ ಹಿಂದೂ ಗುರುತು

ಮಂಗಳೂರು (ನ.23) : ಮಂಗಳೂರಿನಲ್ಲಿ ನ.19ರಂದು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ ಶಾರೀಕ್‌, ತನ್ನನ್ನು ಹಿಂದೂ ಎಂದು ಬಿಂಬಿಸಿಕೊಂಡಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ. ಈ ಮೂಲಕ ಮಂಗಳೂರು ಸ್ಫೋಟ ಹಿಂದೂಗಳು ನಡೆಸಿದ ಕೃತ್ಯ ಎಂದು ಬಣ್ಣಕಟ್ಟಲು ಆತ ಯತ್ನಿಸಿದ್ದನೆ ಎಂಬ ಅನುಮಾನ ಉದ್ಭವವಾಗಿದೆ.

ಮಂಗಳೂರಿನ ಗೋಡೆಗಳ ಮೇಲೆ ಉಗ್ರರ ಪರ ಬರಹ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟ ತಾಲೀಮು ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ ಶಾರೀಕ್‌ ನಂತರದ ದಿನಗಳಲ್ಲಿ ಹಿಂದೂ ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ ಖರೀದಿಸಿದ್ದ. ಅಲ್ಲದೆ ಹಿಂದೂ ವ್ಯಕ್ತಿಗಳ ಆಧಾರ್‌ ಕಾರ್ಡ್‌ ತೋರಿಸಿ ವ್ಯವಹರಿಸುತ್ತಿದ್ದ. ತನ್ನ ವಾಟ್ಸಾಪ್‌ ‘ಡಿಪಿ’ಗೆ ಹಿಂದೂ ದೇವರ ಚಿತ್ರವನ್ನೂ ಅಳವಡಿಸಿಕೊಂಡಿದ್ದ. ಸ್ಫೋಟದ ದಿನ ಮಂಗಳೂರಿಗೆ ಬಂದಿಳಿದಾಗ ಕೇಸರಿ ಶಾಲು ಕೂಡ ಧರಿಸಿದ್ದ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ನಮ್ ಮಗ ಹಂಗಿಲ್ಲ, ತಪ್ಪೇ ಮಾಡಿಲ್ಲ, ಮೋಸ್ಟ್ ವಾಂಟೆಡ್ ಉಗ್ರ ಮತೀನ್ ಪೋಷಕರ ಪ್ರತಿಕ್ರಿಯೆ!

ಮೈಸೂರಿನಲ್ಲಿದ್ದಾಗ ಪ್ರೇಮರಾಜ್‌ ಹಾಗೂ ಕೊಯಮತ್ತೂರಿಗೆ ತೆರಳಿದಾಗ ಅರುಣ್‌ ಕುಮಾರ್‌ ಎಂದು ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದ. ಇದಕ್ಕೆ ಪೂರಕವಾಗಿ ಆ ಹೆಸರಿನ 2 ನಕಲಿ ಆಧಾರ್‌ ಕಾರ್ಡ್‌ ತೋರಿಸುತ್ತಿದ್ದ. ಮೈಸೂರಿನಲ್ಲಿ ಮೊಬೈಲ್‌ ಸಂಸ್ಥೆಗೆ ತರಬೇತಿಗೆ ಸೇರಿದಾಗಲೂ ತಾನು ಪ್ರೇಮರಾಜ್‌ ಎಂದು ಹೇಳಿಕೊಂಡಿದ್ದ. ಈ ಮೂಲಕ ತನ್ನ ನಿಜ ನಾಮ, ಧರ್ಮ ಬಯಲಾಗದಂತೆ ನೋಡಿಕೊಂಡಿದ್ದ ಎಂದು ಹೇಳಲಾಗಿದೆ.

ಸೊಂಟದಲ್ಲಿ ಕೇಸರಿ ಶಾಲು:

ನ.19ರಂದು ಮೈಸೂರಿನಿಂದ ಬಸ್‌ನಲ್ಲಿ ಮಂಗಳೂರಿಗೆ ಬಂದಿದ್ದ ಶಾರೀಕ್‌, ಪಡೀಲ್‌ನಲ್ಲಿ ಇಳಿದು, ಅಲ್ಲಿ ಆಟೋ ಹತ್ತಿದ್ದ. ಆತ ಆ ದಿನ ಕೇಸರಿ ಶಾಲು ಹೊದ್ದಿದ್ದ ತಿಳಿದು ಬಂದಿದೆ. ಇದಕ್ಕೆ ಪುಷ್ಟಿನೀಡುವಂತೆ ಸ್ಫೋಟದ ಬಳಿಕ ಆತನ ಸೊಂಟದಲ್ಲಿ ಕೇಸರಿ ಶಾಲು ಪತ್ತೆಯಾಗಿದೆ. ಮತ್ತೊಂದೆಡೆ, ಆತನ ಮೊಬೈಲ್‌ನ ಪರಿಶೀಲನೆ ನಡೆಸಿದ ಪೊಲೀಸರಿಗೆ ಆತ ತನ್ನ ವಾಟ್ಸಾಪ್‌ ಡಿಪಿಯಲ್ಲಿ ಕೊಯಮತ್ತೂರಿನಲ್ಲಿರುವ ಈಶ ¶ೌಂಡೇಶನ್‌ನ ಹಿಂದೂ ದೇವರ ಚಿತ್ರವನ್ನು ಹಾಕಿಕೊಂಡಿದ್ದು ಕಂಡು ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕಳೆದ ಆಗಸ್ಟ್‌ನಲ್ಲಿ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ ನಡೆಸಿದ ಬಳಿಕ ನಾಪತ್ತೆಯಾಗಿದ್ದ ಆತ, ಕೇರಳ, ತಮಿಳುನಾಡು, ಮೈಸೂರು ಮತ್ತಿತರ ಕಡೆ ತಲೆಮರೆಸಿಕೊಂಡಿದ್ದ. ಆಗ ಹಿಂದೂ ವ್ಯಕ್ತಿಯ ನಕಲಿ ಆಧಾರ್‌ ಕಾರ್ಡ್‌ ಹೊಂದಿದ್ದ. ಆತನ ಬಳಿ ಎರಡು ನಕಲಿ ಆಧಾರ್‌ ಕಾರ್ಡ್‌ ಇತ್ತು. ಸಂಡೂರಿನ ಅರುಣ್‌ಕುಮಾರ್‌ ಗೌಳಿ ಹಾಗೂ ಪ್ರೇಮರಾಜ್‌ ಎಂಬುವರ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಹೊಂದಿದ್ದ. ಅಲ್ಲದೆ, ಸುರೇಂದ್ರನ್‌ ಮತ್ತು ಅರುಣ್‌ಕುಮಾರ್‌ ಗೌಳಿ ಹೆಸರಿನಲ್ಲಿ ಸಿಮ್‌ ಬಳಸುತ್ತಿದ್ದ. ಕೊಯಮತ್ತೂರಿನಲ್ಲಿ ನಕಲಿ ಸಿಮ್‌ ಖರೀದಿಗೆ ಸುರೇಂದ್ರನ್‌ ಎಂಬಾತನ ನೆರವು ಪಡೆದಿದ್ದ.

ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಬಳ್ಳಾರಿ ಲಿಂಕ್: ಸಂಡೂರು ನಿವಾಸಿಯ ಸಿಮ್ ಬಳಸಿದ ಶಾರೀಕ್

ಕೊಯಮತ್ತೂರಿನಲ್ಲಿದ್ದಾಗ ಅರುಣ್‌ ಕುಮಾರ್‌ ಎಂಬುವರ ಆಧಾರ್‌ ಕಾರ್ಡ್‌ ಬಳಕೆ ಮಾಡುತ್ತಿದ್ದರೆ, ಮೈಸೂರಿನಲ್ಲಿ ಪ್ರೇಮ್‌ರಾಜ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಮೈಸೂರಿನ ಮೊಬೈಲ್‌ ಸಂಸ್ಥೆಯಲ್ಲಿ ತರಬೇತಿಗೆ ಹೋದಾಗಲೂ ತನ್ನನ್ನು ತಾನು ಹಿಂದೂ, ಪ್ರೇಮ್‌ರಾಜ್‌ ಎಂದೇ ಹೇಳಿಕೊಂಡಿದ್ದ. ಆ ಮೂಲಕ ತನ್ನ ಮೂಲ ಮಾಹಿತಿ ಯಾರಿಗೂ ಸಿಗದಂತೆ ನೋಡಿಕೊಂಡಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

click me!