Hassan: ಕಾಲೇಜಿಗೆ ಹೋಗುವಾಗ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು

By Govindaraj SFirst Published Aug 2, 2022, 3:15 AM IST
Highlights

ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗುವ ಆತುರದಲ್ಲಿ ರೈಲ್ವೆ ಹಳಿ ದಾಟುವಾಗ ಕಾಲು ಜಾರಿದ ಪರಿಣಾಮ ರೈಲಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸೋಮವಾರ ಮೊಸಳೆಹೊಸಳ್ಳಿಯಲ್ಲಿ ನಡೆದಿದೆ. 

ಹಾಸನ (ಆ.02): ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗುವ ಆತುರದಲ್ಲಿ ರೈಲ್ವೆ ಹಳಿ ದಾಟುವಾಗ ಕಾಲು ಜಾರಿದ ಪರಿಣಾಮ ರೈಲಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸೋಮವಾರ ಮೊಸಳೆಹೊಸಳ್ಳಿಯಲ್ಲಿ ನಡೆದಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಹಾಸನ-ಮೈಸೂರು ರಸ್ತೆ ಮಧ್ಯೆ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 

ಮೊಸಳೆ ಹೊಸಳ್ಳಿಗೆ ಸಮೀಪದ ಗುಡ್ಡದ ತೆರಣ್ಯ ಗ್ರಾಮದ ನಿವಾಸಿ ಪ್ರೀತಿ (19) ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳುವ ಸಲುವಾಗಿ ರೈಲು ಹಳಿ ದಾಟುತ್ತಿದ್ದಾಗ ಕಾಲು ಜಾರಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಹಾಸನ-ಮೈಸೂರು ರೈಲಿನ ಎಂಜಿನ್‌ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕಳೆದ ಹಲವು ವರ್ಷಗಳಿಂದ ಮೊಸಳೆಹೊಸಳ್ಳಿ ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರೂ, ಇನ್ನೂ ಬೇಡಿಕೆ ಈಡೇರಿಲ್ಲ.

Bengaluru: ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

ವಿದ್ಯುತ್‌ ಸ್ಪರ್ಶಿಸಿ ಶಾಲೆಯಲ್ಲೇ ವಿದ್ಯಾರ್ಥಿನಿ ಸಾವು: ಶಾಲೆಯಲ್ಲೇ ವಿದ್ಯುತ್‌ ಸ್ಪರ್ಶಿಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಅಸುನೀಗಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡೋಣೆವಾಡಿ ಗ್ರಾಮದ ಅನುಷ್ಕಾ ಸದಾಶಿವ ಭೆಂಡೆ (9) ಮೃತ ವಿದ್ಯಾರ್ಥಿನಿ. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ಶಾಲೆ ಮುಖ್ಯ ಶಿಕ್ಷಕನ ಕುಮಾರ ವಿ.ನಾಟೇಕರ ಅವರನ್ನು ಅಮಾನತು ಮಾಡಿ ಡಿಡಿಪಿಐ ಎಂ.ಎಲ್‌.ಹಂಚಾಟೆ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?: ವಿದ್ಯಾರ್ಥಿನಿ ಅನುಷ್ಕಾ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದಾಗ ಅಲ್ಲಿಯೇ ಇದ್ದ ದೂರವಾಣಿ ಕಂಬವನ್ನು ಸ್ಪರ್ಶಿಸಿದ್ದಾಳೆ. ಈ ಕಂಬದ ಸಹಾಯ ಪಡೆದು ಸ್ಥಳೀಯರು ವಿದ್ಯುತ್‌ ಲೈನ್‌ ಹಾಕಿಕೊಂಡಿದ್ದಾರೆ. ಆದರೆ, ವಿದ್ಯುತ್‌ ತಂತಿ ತುಂಡಾಗಿ ಈ ದೂರವಾಣಿ ಕಂಬಕ್ಕೆ ತಾಗಿದೆ. ಹೀಗಾಗಿ ವಿದ್ಯುತ್‌ ಪ್ರವಹಿಸಿದ ದೂರವಾಣಿ ಕಂಬವನ್ನು ವಿದ್ಯಾರ್ಥಿನಿಗೆ ಮುಟ್ಟಿದ್ದಾಳೆ. ಆಗ ವಿದ್ಯಾರ್ಥಿನಿ ವಿದ್ಯುತ್‌ ಪ್ರವಹಿಸಿದೆ. ಇದನ್ನು ನೋಡಿದ ಸಹಪಾಠಿಗಳು ಕೂಗಿಕೊಂಡಿದ್ದಾರೆ. ವಿದ್ಯುತ್‌ ಸ್ಥಗಿತ ಮಾಡಿ ವಿದ್ಯಾರ್ಥಿನಿ ರಕ್ಷಿಸುವಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಈ ಬಗ್ಗೆ ವಿಷಯ ತಿಳಿದ ತಕ್ಷಣ ಸದಲಗಾ ಪೊಲೀಸ್‌ ಹಾಗೂ ಭೋಜ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಂಚನಾಮೆ ಮಾಡಿದರು.

Uttara Kannada: ಮಳೆಗಾಗಿ ಹೆಣ್ಣು - ಹೆಣ್ಣಿನ ನಡುವೆ ದಾದುಮ್ಮನ‌‌ ಮದುವೆ

ಆಕ್ರೋಶ: ಈ ಘಟನೆಗೆ ಮುಖ್ಯ ಶಿಕ್ಷಕ ಕಾರಣವಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು. ಅಷ್ಟೇ ಅಲ್ಲದೇ ಶಾಲಾ ಆಡಳಿತ ಮಂಡಳಿ ಹಾಗೂ ಬಿಇಒರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಮುಖ್ಯ ಶಿಕ್ಷಕ ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಹೊರಗಡೆ ಹೋಗಿದ್ದ ಎಂದು ತಿಳಿದು ಬಂದಿದೆ. ಇನ್ನು ಬಿಇಒ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

click me!