* ಶಾಲೆಗೆ ಹೋದ ಬಾಲಕಿ ಹೆಣವಾದಳು
* ಶಾಲಾ ಆಡಳಿತ ಮಂಡಳಿ ವಿರುದ್ದ ಪೋಷಕರ ಆಕ್ರೋಶ
* ಮುಖ್ಯ ಶಿಕ್ಷಕ ಕುಮಾರ್ ನಾಟೇಕರ್ ಅಮಾನತು
ಚಿಕ್ಕೋಡಿ, (ಜುಲೈ.05): ಆಕೆ ಬೆಳಗ್ಗೆ ಎದ್ದ ತಕ್ಷಣ ಎಲ್ಲರಂತೆ ಗೆಳೆಯರ ಜತೆಗೂಡಿ ಶಾಲೆಗೆ ಹೋಗಿದ್ದಳು. ಮನೆಯಲ್ಲಿ ಅಪ್ಪ ಅಮ್ಮ ಮಗಳು ಶಾಲೆಗೆ ಹೋಗಿದ್ದಾಳೆ ಇನ್ನೇನು ಬರ್ತಾಳೆ ಅಂತ ಕಾಯ್ತಿದ್ರು. ಆದರೆ ಸಿಡಿಲಂತೆ ಆ ಅಪ್ಪ ಅಮ್ಮನಿಗೆ ಬಂದಿದ್ದು ಬಾಲಕಿಯ ಸಾವಿನ ಸುದ್ದಿ ಅಷ್ಟಕ್ಕೂ ಶಾಲೆಗೆ ಹೋದ ಆ ಬಾಲಕಿ ಎನಾಯ್ತು ಅಂತೀರಾ ಈ ಸ್ಟೋರಿ ನೋಡಿ..
ಶಾಲೆಗೆ ಹೋದ ಬಾಲಕಿ ಹೆಣವಾದಳು!
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣಿವಾಡೆ ಗ್ರಾಮದಲ್ಲಿ. ಡೋಣಿವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆ ನಿನ್ನೆ(ಸೋಮವಾರ) ಅಕ್ಷರಶಃ ರಣರಂಗವಾಗಿತ್ತು. ಈ ಫೋಟೊದಲ್ಲಿ ಕಾಣ್ತಿರೋ ಈ ಬಾಲಕಿಯ ಮುಖವನ್ನೊಮ್ಮೆ ನೋಡಿ ಹೆಸರು ಅನುಷ್ಕಾ ಅಂತ ವಯಸ್ಸು ಕೇವಲ 9 ವರ್ಷ ಈಕೆಯ ನಗು, ಮುಗ್ಧತೆಗೆ ಮಾರು ಹೋಗದೆ ಇರೋರೆ ಇಲ್ಲ ಅನ್ಸುತ್ತೆ. ಬಟ್ ಈ ಮಗು ಸಧ್ಯ ನಮ್ಮೊಂದಿಗಿಲ್ಲ ನಿನ್ನೆ(ಸೋಮವಾರ) ಎಂದಿನಂತೆ ಅನುಷ್ಕಾ ಶಾಲೆಗೆ ಹೋಗಿದ್ದಳು.
Bengaluru; ಕಪಾಳಕ್ಕೆ ಹೊಡೆದ ಶಿಕ್ಷಕ, ವಿದ್ಯಾರ್ಥಿ ICUಗೆ ಅಡ್ಮಿಟ್!
ಮಧ್ಯಾನ ರೆಸ್ಟ್ ಗೆ ಬಿಟ್ಟಾಗ ಶೌಚಾಲಯಕ್ಕೆ ತೆರಳಿದ್ದ ಬಾಲಕಿ ಶೌಚಾಲಯದ ಪಕ್ಕದಲ್ಲಿಯೇ ಇದ್ದ ಕಂಬವನ್ನ ಸ್ಪರ್ಶ ಮಾಡಿದ್ಳು. ಆ ಕಂಬವನ್ನ ಬಾಲಕಿ ಮುಟ್ಟಿದ್ದೆ ತಡ. ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಬಾಲಕಿ ಶಾಲಾ ಆವರಣದಲ್ಲಿಯೇ ಸಾವನ್ನಪ್ಪಿದ್ದಳೆ ಬಾಲಕಿಯ ಸಾವಿನ ಬಗ್ಗೆ ಫೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ವಿರುದ್ದ ಹರಿಹಾಯ್ದಿದರು.
ಹೌದು... ಶಾಲಾ ಆವರಣದಲ್ಲಿ ನೀಡಲಾಗಿದ್ದ ಕಂಬದ ಮೂಲಕವೇ ಶಾಲೆಯ ಅಕ್ಕಪಕ್ಕದ ಮನೆಯವರು ದಿನಬಳಕೆಯ ವಿದ್ಯುತ್ ಅನ್ನ ತಮ್ಮ ಮನೆಗೆ ತೆಗೆದುಕೊಂಡಿದ್ದು ಜೋರು ಮಳೆಯಾಗಿದ್ದರಿಂದ ಆ ಕಂಬದಲ್ಲಿ ವಿದ್ಯುತ್ ಪ್ರವಹಿಸಿದೆ. ರೆಸ್ಟ್ ಗೆ ಬಿಟ್ಟ ಸಮಯದಲ್ಲಿ ಬಾಲಕಿ ಅನುಷ್ಕಾ ಶೌಚಾಲಯಕ್ಕೆಂದು ಹೋದ ಸಂದರ್ಭದಲ್ಲಿ ಶೌಚಾಲಯದ ಪಕ್ಕದಲ್ಲಿಯೇ ಇದ್ದ ಆ ವಿದ್ಯುತ್ ಕಂಬವನ್ನ ಸ್ಪರ್ಶಿಸಿದ್ದಾಳೆ. ಅಷ್ಟೆ ಕ್ಷಣಾರ್ಧಲ್ಲಿಯೇ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.. ಇನ್ನು ಘಟನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕನ ನಿರ್ಲಕ್ಷ ಕಂಡು ಬಂದಿದೆ. ಶಾಲೆಯ ಮುಖ್ಯ ಶಿಕ್ಷಕ ಸರಿಯಾಗಿ ಶಾಲೆಯಲ್ಲಿ ಇರೊಲ್ಲ. ಹಾಜರಾತಿ ಪುಸ್ತಕಕ್ಕೆ ಸೈನ್ ಮಾಡಿ ಹೊರ ಹೋದರೆ ಬರೋದೆ ಇಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಮುಖ್ಯ ಶಿಕ್ಷಕ ಕುಮಾರ್ ನಾಟೇಕರ್ ನನ್ನ ಅಮಾನತು ಮಾಡಿ ಚಿಕ್ಕೋಡಿ ಡಿಡಿಪಿಐ ಮೋಹನ್ ಹಂಚಾಟೆ ಆದೇಶ ಹೊರಡಿಸಿದ್ದಾರೆ..
ಒಟ್ಟಿನಲ್ಲಿ ಸ್ನೇಹಿತರೊಂದಿಗೆ ಆಡಿ ನಲಿದು ಬದುಕಿ ಬಾಳಬೇಕಿದ್ದ ಬಾಲಕಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಿರ್ಲಕ್ಷದಿಂದ ಸಾವನ್ನಪ್ಪಿದ್ದಾಳೆ. ಸಧ್ಯ ಮುಖ್ಯ ಶಿಕ್ಷಕನ್ನ ಅಮಾನತು ಮಾಡಿ ಆದೇಶ ಹೊರಡಿಸಿರೋ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಇಂತಹ ಶಿಕ್ಷಕರ ವಿರುದ್ದ ಇನ್ನೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.