
ತುಮಕೂರು (ಮಾ.19): ಶಾಲೆಯ ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿದ್ದ ವಿದ್ಯಾರ್ಥಿನಿ ಬಟ್ಟೆಗೆ ದೀಪದ ಕಿಡಿ ತಾಗಿ ಮೈ ಸುಟ್ಟುಕೊಂಡು ಮೃತಪಟ್ಟ ದುರ್ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೇಳಕೋಟೆ ಗ್ರಾಮದಲ್ಲಿ ನಡೆದಿದೆ.
ಒಂದನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಮೃತ ವಿದ್ಯಾರ್ಥಿನಿ. ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದೀಕ್ಷಾ. ಮಾ.13 ರಂದು ಶಾಲೆಯಲ್ಲಿ ಊಟಕ್ಕೆ ಬಿಟ್ಟ ಸಮಯದಲ್ಲಿ ನಡೆದಿರುವ ದುರ್ಘಟನೆ. ಊಟದ ಬಳಿಕ ತನ್ನ ಸಹಪಾಠಿಗಳೊಂದಿಗೆ ಶಾಲೆಯ ಪಕ್ಕದಲ್ಲಿರುವ ಕಾಟಮ್ಮ ದೇವಸ್ಥಾನಕ್ಕೆ ಹೋಗಿದ್ದ ದೀಕ್ಷಾ. ಈ ವೇಳೆ ದೇವಸ್ಥಾನದೊಳಗೆ ದೀಪ ಹಚ್ಚಲು ಹೋಗಿದ್ದ ವಿದ್ಯಾರ್ಥಿನಿಯರು.
ಮದುವೆಯಾಗಲು ನಿರಾಕರಿಸಿದ್ದಕ್ಕೆ ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆ ಮಾಡಿದ ಮಾವ!
ದೇವಸ್ಥಾನದೊಳಗೆ ದೀಪ ಹಚ್ಚಿ. ದೀಪದ ಬಳಿ ನಿಂತಿರುವ ವಿದ್ಯಾರ್ಥಿನಿ. ಆಗ ದೀಪದ ಕಿಡಿ ಬಟ್ಟೆಗೆ ತಾಗಿದೆ, ಬಳಿಕ ಮೈಮೇಲಿನ ಬಟ್ಟೆಗೆ ವ್ಯಾಪಿಸಿದ ಬೆಂಕಿ. ಇದರಿಂದ ಮೈ ಸುಟ್ಟು ಗಂಭೀರ ಗಾಯಗೊಂಡಿದ್ದ ದೀಕ್ಷಾ. ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿರುವ ಬಾಲಕಿ. ಘಟನೆ ಸಂಬಂಧ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ