ಮದುವೆಯಾಗಲು ನಿರಾಕರಿಸಿದಳೆಂದು ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಮಾವ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ (ಮಾ.19): ಮದುವೆಯಾಗಲು ನಿರಾಕರಿಸಿದಳೆಂದು ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಮಾವ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ನಡೆದಿದೆ.
ದೀಪಾ ಗೊಂದಿ (21), ಕೊಲೆಯಾದ ಯುವತಿ. ಮಾಲತೇಶ ಬಾರ್ಕಿ (35) ಕೊಲೆ ಮಾಡಿದ ಆರೋಪಿ. ಸಂಬಂಧದಲ್ಲಿ ಸೊಸೆಯಾಗಿದ್ದ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಾವ ಮಾಲತೇಶ. ಏಪ್ರಿಲ್ 22ರಂದು ದೀಪಾ ಮತ್ತು ಮಾಲತೇಶ್ ಮದುವೆ ಫಿಕ್ಸ್ ಆಗಿತ್ತು. ಮದುವೆ ತಯಾರಿ ನಡೆಸಿದ್ದರು. ಆದರೆ ಅದೇನಾಯ್ತೋ ನಿಶ್ಚಿತಾರ್ಥದ ಬಳಿಕ ಮಾವನೊಂದಿಗೆ ಮದುವೆಯಾಗಲು ನಿರಾಕರಿಸಿದ್ದ ದೀಪಾ. ಇದರಿಂದ ಕುಪಿತಗೊಂಡಿದ್ದ ಮಾವ. ಸೊಸೆಯನ್ನು ಉಪಾಯದಿಂದ ಕರೆದುಕೊಂಡು ಹೋಗಿರುವ ವಿಷ ಕುಡಿಸಿ ಬಳಿ ನೇಣು ಹಾಕಿ ಹತ್ಯೆ ಮಾಡಿದ್ದಾನೆ. ಕೃತ್ಯ ನಡೆದ ಐದು ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆ ಘಟನೆ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
International Day of Happiness: ಬೆಂಗಳೂರು ಕೇಂದ್ರ ಕಾರಾಗೃಹದ 5500 ಕೈದಿಗಳ ಜೀವನ ಪರಿವರ್ತಿಸಿದ ದಂಪತಿ!