ಮಂಗಳೂರು: ಲೋನ್‌ ಆ್ಯಪ್‌ನಲ್ಲಿ ಸಾಲ ಪಡೆದ ವ್ಯಕ್ತಿಯ ಮಾನಹರಣ, ದೂರು

By Kannadaprabha NewsFirst Published Jul 29, 2023, 2:11 PM IST
Highlights

ಲೋನ್‌ ಆ್ಯಪ್‌ನಲ್ಲಿ 4,200 ರು. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ವೈರಲ್‌ ಮಾಡಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು (ಜು.29) ಲೋನ್‌ ಆ್ಯಪ್‌ನಲ್ಲಿ 4,200 ರು. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ವೈರಲ್‌ ಮಾಡಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿರ್ಯಾದಿದಾರರು ಲೋನ್‌ ಆ್ಯಪ್‌(Loan app) ಹಾಕಿ 3,500 ರು. ಸಾಲಕ್ಕೆ ಅರ್ಜಿ ಹಾಕಿದ್ದು, ಅವರ ಬ್ಯಾಂಕ್‌ ಖಾತೆಗೆ 2,800 ರು. ಸಾಲ ಜಮೆಯಾಗಿತ್ತು. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದ್ದುದರಿಂದ ಜು.19ರಂದು ಬ್ಯಾಂಕ್‌ ಖಾತೆಯಿಂದ 1,400 ರು. ಪಾವತಿ ಮಾಡಿದ್ದರು. ಉಳಿದ ಹಣವನ್ನು ಜು.26ರಂದು ವಾಟ್ಸಪ್‌ ಕಳುಹಿಸಿಕೊಟ್ಟವ್ಯಕ್ತಿಗೆ ಹಂತ ಹಂತವಾಗಿ 4,200 ರು. ಪಾವತಿ ಮಾಡಿದ್ದರು. ಇದಾದ ಬಳಿಕ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸಪ್‌ ನಂಬರ್‌ಗಳಿಗೆ ಭಾವಚಿತ್ರವನ್ನು ಮತ್ತು ಪಿರ್ಯಾದಿದಾರರ ಸಂಪರ್ಕದಲ್ಲಿರುವ ಇತರರ ಭಾವಚಿತ್ರವನ್ನು ಅಶ್ಲೀಲ ಭಾವಚಿತ್ರದೊಂದಿಗೆ ಎಡಿಟ್ ಮಾಡಿ ಹಾಕಿ ಲೋನ್‌ ಪಾವತಿ ಮಾಡಿರುವುದಿಲ್ಲವೆಂದು ಅಶ್ಲೀಲ ಸಂದೇಶವನ್ನು ರವಾನೆ ಮಾಡಿದ್ದರು.

 

ಬೆಂಗಳೂರು: ಚೀನಾ ಲೋನ್‌ ಕಂಪನಿ ಮೇಲೆ ಇಡಿ ದಾಳಿ, 78 ಕೋಟಿ ಜಪ್ತಿ

ಪಿರ್ಯಾದಿದಾರರು ಲೋನ್‌ ತೆಗೆಯುವ ಬಗ್ಗೆ ಆಪ್‌ನ್ನು ಇನ್‌ಸ್ಟಾಲ್‌ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ ಮೊಬೈಲ್ ನಂಬರ್‌ಗಳನ್ನು ಪಿರ್ಯಾದಿದಾರರಿಗೆ ಅರಿವಿಲ್ಲದೇ ಶೇಖರಿಸಿಕೊಂಡಿದ್ದರು. ಬಳಿಕ ಪಿರ್ಯಾದಿದಾರರಿಗೆ ತೊಂದರೆ ನೀಡುವ ಉದ್ದೇಶದಿಂದ ಪಿರ್ಯಾದಿದಾರರ ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸಾಪ್‌ ಮೂಲಕ ವೈರಲ್‌ ಮಾಡಿದ್ದಾರೆ.

ಈ ಬಗ್ಗೆ ಪಿರ್ಯಾದಿದಾರರು ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜೀವ ಹಿಂಡುವ ಲೋನ್ ಆ್ಯಪ್'ಗಳು: ಸಾವಿರಾರು ಜನರ ಬದುಕು ನರಕ

click me!