90 ದೇಶಗಳ ಜೈಲಿನಲ್ಲಿದ್ದಾರೆ 8,330 ಭಾರತೀಯ ಕೈದಿಗಳು: ಗಲ್ಫ್‌ ದೇಶಗಳ ಜೈಲಲ್ಲಿ ಹೆಚ್ಚು ಕೈದಿಗಳು

By Kannadaprabha News  |  First Published Jul 29, 2023, 1:58 PM IST

‘90 ದೇಶಗಳಲ್ಲಿರುವ 8,330 ಭಾರತೀಯ ಕೈದಿಗಳ ಪೈಕಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನಲ್ಲಿ 1,611, ಸೌದಿ ಅರೇಬಿಯಾದಲ್ಲಿ 1,461 ಮತ್ತು ನೇಪಾಳದಲ್ಲಿ 1,222 ಜನರಿದ್ದು ಕೈದಿಗಳ ಸಂಖ್ಯೆಯಲ್ಲಿ ಈ ಮೂರು ದೇಶಗಳು ಮೊದಲ ಮೂರು ಸ್ಥಾನದಲ್ಲಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.


ನವದೆಹಲಿ (ಜುಲೈ 29, 2023): ಜಗತ್ತಿನ 90 ದೇಶಗಳ ಜೈಲುಗಳಲ್ಲಿ ಒಟ್ಟು 8,333 ಭಾರತೀಯ ಕೈದಿಗಳಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌, ‘90 ದೇಶಗಳಲ್ಲಿರುವ 8,330 ಭಾರತೀಯ ಕೈದಿಗಳ ಪೈಕಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನಲ್ಲಿ 1,611, ಸೌದಿ ಅರೇಬಿಯಾದಲ್ಲಿ 1,461 ಮತ್ತು ನೇಪಾಳದಲ್ಲಿ 1,222 ಜನರಿದ್ದು ಕೈದಿಗಳ ಸಂಖ್ಯೆಯಲ್ಲಿ ಈ ಮೂರು ದೇಶಗಳು ಮೊದಲ ಮೂರು ಸ್ಥಾನದಲ್ಲಿವೆ’ ಎಂದಿದ್ದಾರೆ.

ಇನ್ನು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ 308, ಚೀನಾದಲ್ಲಿ 178, ಬಾಂಗ್ಲಾದೇಶದಲ್ಲಿ 60, ಭೂತಾನ್‌ನಲ್ಲಿ 57, ಶ್ರೀಲಂಕಾದಲ್ಲಿ 20 ಮತ್ತು ಮ್ಯಾನ್ಮಾರ್‌ನಲ್ಲಿ 26 ಭಾರತೀಯ ಕೈದಿಗಳಿದ್ದಾರೆ.

Tap to resize

Latest Videos

ಇದನ್ನು ಓದಿ: ಪ್ರಧಾನಿಯಾಗಲು ಏನ್‌ ಮಾಡ್ಬೇಕು ಅಂತ ಕೇಳಿದ ಯುವತಿಗೆ ಜೈಶಂಕರ್ ಹೇಳಿದ್ದೇನು? ವಿಡಿಯೋ ವೈರಲ್‌

ಗಲ್ಫ್‌ ರಾಷ್ಟ್ರದಲ್ಲೇ ಹೆಚ್ಚು: ಗಲ್ಫ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಭಾರತೀಯ ಕೈದಿಗಳಿದ್ದು ಯುಎಇನಲ್ಲಿ 1,611, ಸೌದಿ ಅರೇಬಿಯಾದಲ್ಲಿ 1,461, ಕತಾರ್‌ನಲ್ಲಿ 696, ಕುವೈತ್‌ನಲ್ಲಿ 446, ಬಹ್ರೇನ್‌ನಲ್ಲಿ 277 ಮತ್ತು ಓಮನ್‌ನಲ್ಲಿ 139 ಜನರಿದ್ದಾರೆ.

ಉಳಿದಂತೆ ಸ್ವಿಜರ್ಲೆಂಡ್‌, ಈಜಿಪ್ಟ್‌ ಮತ್ತು ಇಥಿಯೋಪಿಯಾ ದೇಶಗಳಲ್ಲಿ ತಲಾ ಒಬ್ಬ ಭಾರತೀಯ ಕೈದಿಗಳಿದ್ದಾರೆ. ಇನ್ನು ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದಾಗಿ 2014ರಿಂದ ಈವರೆಗೆ 4,597 ಭಾರತೀಯ ಕೈದಿಗಳು ಕ್ಷಮಾದಾನ ಮತ್ತು ಶಿಕ್ಷೆಯ ಕಡಿತವನ್ನು ಪಡೆದಿದ್ದಾರೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಉಗ್ರರಿಂದ ಬೆಂಕಿ: ಕೆನಡಾದಲ್ಲಿ ರಾಜತಾಂತ್ರಿಕರು ಟಾರ್ಗೆಟ್‌

click me!